ETV Bharat / entertainment

ಜನ್ಮದಿನದ ಸಂಭ್ರಮದಲ್ಲಿ ನಿಮಿಕಾ ರತ್ನಾಕರ್​: 'ತ್ರಿಶೂಲಂ' ಮೂಲಕ ಉಪ್ಪಿಗೆ ಜೋಡಿಯಾದ 'ಪುಷ್ಪವತಿ' - ಈಟಿವಿ ಭಾರತ ಕನ್ನಡ

Nimika Ratnakar: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ನಿಮಿಕಾ ರತ್ನಾಕರ್, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Nimika Ratnakar
ನಿಮಿಕಾ ರತ್ನಾಕರ್
author img

By

Published : Aug 1, 2023, 9:55 AM IST

'ರಾಮಧಾನ್ಯ' ಮತ್ತು 'ಕ್ರಾಂತಿ' ಸಿನಿಮಾದ 'ಶೇಕ್​ ಇಟ್​ ಪುಷ್ಪವತಿ' ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ನಿಮಿಕಾ ರತ್ನಾಕರ್​. ನಿಮಿಕಾ ಒಂದಷ್ಟು ಸಿನಿಮಾಗಳಲ್ಲಿ ನಟಿಯಾಗಿ, ಎರಡನೇ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಇವರು ಸಮಸ್ತ ಕನ್ನಡಿಗರಿಗೆ ಪರಿಚಯವಾದದ್ದು ಮಾತ್ರ 'ಪುಷ್ಪವತಿ' ಆಗಿಯೇ. ಈ ಹಾಡಿನ ಮೂಲಕ ಭಾರೀ ಕ್ರೇಜ್​ ಮೂಡಿಸಿದ್ದ ತಾರೆ ಕರ್ನಾಟಕದ ಹೊಸ ಕ್ರಶ್​ ಎನಿಸಿಕೊಂಡರು.

ಈ ಸೂಪರ್​ ಹಿಟ್​ ಹಾಡಿನಿಂದ ಸ್ಯಾಂಡಲ್​ವುಡ್​ನ ಭರವಸೆಯ ನಟಿಯಾಗಿ ಹೊರಹೊಮ್ಮಿದ ನಿಮಿಕಾ ರತ್ನಾಕರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಹಿನ್ನೆಲೆ ಸ್ನೇಹಿತರು, ಕುಟುಂಬಸ್ಥರು, ಸಿನಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸದ್ಯ ನಿಮಿಕಾ ರತ್ನಾಕರ್​ ತ್ರಿಶೂಲಂ, ಫೀನಿಕ್ಸ್ ಹೀಗೆ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಂಗಳೂರು ಮೂಲದಿಂದ ಬಂದು ಕನ್ನಡ ಮಾತ್ರವಲ್ಲದೇ ಬಾಲಿವುಡ್ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ನಟಿಯರಿದ್ದಾರೆ. ನಿಮಿಕಾರ ವೇಗ ನೋಡಿದರೆ, ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಲಕ್ಷಣಗಳು ದಟ್ಟವಾಗಿವೆ. ಮೂಲತಃ ಇಂಜಿನಿಯರ್ ಆಗಿರುವ ನಿಮಿಕಾ, ಕಲೆಯ ಕರೆಗೆ ಓಗೊಟ್ಟು ನಟಿಯಾದವರು. ಗಾಯನದ ಬಗ್ಗೆಯೂ ಅತೀವ ಆಸಕ್ತಿ ಇಟ್ಟುಕೊಂಡಿರುವ ನಿಮಿಕಾ ತುಳು ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. 'ರಾಮಧಾನ್ಯ' ಚಿತ್ರದ ಮೂಲಕ ನಟಿಯಾದ ಅವರು ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ವಿನ್ನರ್ ಕೂಡ ಹೌದು. ಹೀಗೆ ಯಶಸ್ಸಿನ ಮೆಟ್ಟಿಲಲ್ಲಿ ಸಾಗಿ ಬಂದಿರುವ ನಿಮಿಕಾಗೆ ಪುಷ್ಪವತಿ ಸಾಂಗ್​ನಿಂದ ಸಖತ್ ಡಿಮ್ಯಾಂಡ್ ಬಂದಿದೆ.

ಇದನ್ನೂ ಓದಿ: ಆಯುಷ್ಮಾನ್​ ಖುರಾನಾ ನಟನೆಯ 'ಡ್ರೀಮ್ ಗರ್ಲ್ 2' ಟೀಸರ್​ ರಿಲೀಸ್​: ನಾಳೆ ಟ್ರೇಲರ್​ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕು ಎಂಬುದು ಬಹುತೇಕ ನಟಿಯರ ಮಹಾ ಕನಸು. ಒಂದಷ್ಟು ಹೆಜ್ಜೆಗಳಲ್ಲಿಯೇ ಅಂತಹದೊಂದು ಅವಕಾಶ ನಮಿಕಾರನ್ನು ಅರಸಿ ಬಂದಿದೆ. ಹಾಗೆ ಸಿಕ್ಕ ಅವಕಾಶವನ್ನು ಶಕ್ತಿ ಮೀರಿ ಬಳಸಿಕೊಂಡು, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಖುಷಿ ನಿಮಿಕಾಗಿದೆ. ಈ ಚಿತ್ರವನ್ನು ಓಂ ಪ್ರಕಾಶ್​ ರಾವ್ ನಿರ್ದೇಶನ ಮಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸಾಧು ಕೋಕಿಲಾ ಮುಂತಾದ ಘಟಾನುಘಟಿಗಳ ಜೊತೆ ನಟಿಸೋ ಅವಕಾಶ, ಅವರ ಮಾರ್ಗದರ್ಶನದಲ್ಲಿ ತಿದ್ದಿಕೊಳ್ಳುವ ಸೌಭಾಗ್ಯಗಳೆಲ್ಲವೂ ನಿಮಿಕಾ ಪಾಲಿಗೆ ಲಭಿಸಲಿದೆ.

ಅದರಲ್ಲಿಯೂ ವಿಶೇಷವಾಗಿ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ, ಅವರನ್ನು ಆರಾಧಿಸುತ್ತಾ ಬೆಳೆದು ಬಂದವರು ನಿಮಿಕಾ ರತ್ನಾಕರ್. ಈ ಚಿತ್ರದಲ್ಲಿ ರವಿಮಾಮಾ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದರಿಂದ ಸಹಜವಾಗಿಯೇ ನಮಿಕಾ ಥ್ರಿಲ್ ಆಗಿದ್ದಾರೆ. ಓಂಪ್ರಕಾಶ್ ರಾವ್, ಉಪೇಂದ್ರ, ಸಾಧು ಕೋಕಿಲಾ ಇವರಂತಹ ನಿರ್ದೇಶಕರಿಂದ ಟಿಪ್ಸ್ ತೆಗೆದುಕೊಂಡು ನಟಿಯಾಗಿ ಪಳಗುವ ಅವಕಾಶ ಸಿಕ್ಕಿದ್ದರ ಬಗ್ಗೆ ನಿಮಿಕಾರಲ್ಲೊಂದು ಧನ್ಯತಾ ಭಾವವಿದೆ. ಈ ಚಿತ್ರದಲ್ಲಿ ಬಬ್ಲಿ ಶೇಡಿನ ಪಾತ್ರದಲ್ಲಿ ನಿಮಿಕಾ ನಟಿಸಿದ್ದಾರಂತೆ. ಅದಕ್ಕೊಂದಷ್ಟು ಎಮೋಷನಲ್ ಛಾಯೆಯೂ ಇದೆಯಂತೆ. ಒಟ್ಟಾರೆಯಾಗಿ 'ತ್ರಿಶೂಲಂ' ಚಿತ್ರ ನಿಮಿಕಾ ವೃತ್ತಿ ಬದುಕಿಗೆ ಮತ್ತೊಂದಷ್ಟು ಯಶಸ್ಸು ತಂದು ಕೊಡುವ ಲಕ್ಷಣಗಳು ದಟ್ಟವಾಗಿವೆ.

ಇದನ್ನೂ ಓದಿ: ಪ್ರೇಕ್ಷಕರ ಜೊತೆ ಕುಳಿತು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ವೀಕ್ಷಿಸಿದ ಡಾಲಿ ಧನಂಜಯ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.