ಮುಂಬೈ: ಇತ್ತೀಚೆಗಷ್ಟೇ ವಿವಾಹವಾಗಿರುವ ದಕ್ಷಿಣದ ಖ್ಯಾತ ನಟಿ ನಯನತಾರಾ ಮತ್ತು ನಟ - ನಿರ್ದೇಶಕ ವಿಘ್ನೇಶ್ ಶಿವನ್ ಅವರ ಪ್ರೇಮಕಥೆ ಆಧರಿಸಿದ ಸಾಕ್ಷ್ಯಚಿತ್ರವು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಇನ್ನೂ ಹೆಸರಿಡದ ಈ ಸಾಕ್ಷ್ಯಚಿತ್ರದಲ್ಲಿ, ಜೂನ್ 9 ರಂದು ಮಹಾಬಲಿಪುರಂನ ಪ್ರಸಿದ್ಧ ರೆಸಾರ್ಟ್‌ನಲ್ಲಿ ನಡೆದ ನಯನತಾರಾ ಮತ್ತು ವಿಘ್ನೇಶ್ ಅವರ ವಿವಾಹವನ್ನು ಪ್ರೇಕ್ಷಕರು ನೋಡಬಹುದಾಗಿದೆ.
ನೆಟ್‌ಫ್ಲಿಕ್ಸ್ ಇಂಡಿಯಾದ ಸೀರೀಸ್ ಹೆಡ್ ತನ್ಯಾ ಬಾಮಿ ಮಾತನಾಡಿ, "ನಾವು ಸ್ಕ್ರಿಪ್ಟ್ ಇಲ್ಲದ ಕಂಟೆಂಟ್‌ಗೂ ಭಾರತ ಮತ್ತು ಬೇರೆ ದೇಶದ ಪ್ರೇಕ್ಷಕರನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದ್ದೇವೆ. ನಯನತಾರಾ ಅವರು ಸುಮಾರು 20 ವರ್ಷಗಳಿಂದ ವೃತ್ತಿಜೀವನದಲ್ಲಿ ನಿಜವಾದ ಸೂಪರ್‌ಸ್ಟಾರ್ ಆಗಿದ್ದಾರೆ. ನಿರ್ದೇಶಕ ಗೌತಮ್ ವಾಸುದೇವನ್ ಮತ್ತು ರೌಡಿ ಪಿಕ್ಚರ್ಸ್ ಅವರ ನೇತೃತ್ವದಲ್ಲಿ ವಿಘ್ನೇಶ್ ಹಾಗೂ ನಯನತಾರಾ ಪ್ರೇಮಕಥೆ ಸದ್ಯದ್ರಲ್ಲೇ ಬರಲಿದ್ದು, ನಾವು ನಮ್ಮ ಪ್ರೇಕ್ಷಕರನ್ನು ಮತ್ತಷ್ಟು ಕಾಯಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಏಳು ವರ್ಷಗಳಿಂದ ಪ್ರೀತಿಯಲ್ಲಿದ್ದ ತಾರಾ ಜೋಡಿಯ ಅದ್ಧೂರಿ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು
ವಿಘ್ನೇಶ್ ಮದುವೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ನವವಿವಾಹಿತ ದಂಪತಿಗಳಿಗೆ ಒಟಿಟಿಯಿಂದ ಕಾನೂನು ನೋಟಿಸ್ ನೀಡಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಇದು ಒಪ್ಪಂದದ ನಿಯಮಗಳ ಉಲ್ಲಂಘನೆಗೆ ಕಾರಣವಾಗಿತ್ತು. ದಂಪತಿಗಳ ವಿವಾಹದ ಫೋಟೋಗಳನ್ನು ಪೋಸ್ಟ್ ಮಾಡಲು ನೆಟ್‌ಫ್ಲಿಕ್ಸ್ ವಿಶೇಷ ಹಕ್ಕನ್ನು ಹೊಂದಿದೆ. ಇದೀಗ ಆ ಗೊಂದಲ ಸುಖಾಂತ್ಯ ಕಂಡಂತಿದೆ.