ETV Bharat / entertainment

ಸೊಸೆಯ​​ ಮನೆ ನಿರ್ಮಾಣ ಹಂತದಲ್ಲಿರುವಾಗಲೇ ಹೊಸ ಅಪಾರ್ಟ್ಮೆಂಟ್ ಖರೀದಿಸಿದ ನೀತು ಕಪೂರ್​! - ಆಲಿಯಾ ಭಟ್ ಮನೆ

ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನೀತು ಕಪೂರ್​ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎನ್ನುವ ಮಾಹಿತಿ ಇದೆ.

neetu kapoor buys luxury apartment
ಹೊಸ ಅಪಾರ್ಟ್ಮೆಂಟ್ ಖರೀದಿಸಿದ ನೀತು ಕಪೂರ್
author img

By

Published : May 18, 2023, 1:17 PM IST

ಕಪೂರ್ ಫ್ಯಾಮಿಲಿಗೆ ಹೊಸ ಮನೆ ನಿರ್ಮಾಣವಾಗುತ್ತಿರುವಾಗಲೇ ಬಾಲಿವುಡ್ ನಟಿ ನೀತು ಕಪೂರ್ ಅವರು ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಬಾಂದ್ರಾದಲ್ಲಿ ಸೊಸೆ, ಬಾಲಿವುಡ್ ನಟಿ ಆಲಿಯಾ ಭಟ್ ಮನೆ ಖರೀದಿಸಿದ ಕೆಲವೇ ವಾರಗಳಲ್ಲಿ ನೀತು ಕಪೂರ್ ಮುಂಬೈನಲ್ಲಿ ಹೊಸ ಫ್ಲಾಟ್‌ಗಾಗಿ 17.4 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ನೀತು ಅವರ ಹೊಸ ಅಪಾರ್ಟ್‌ಮೆಂಟ್ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ (BKC), ಸೋಫಿಟೆಲ್ ಹೋಟೆಲ್ ಎದುರು ಇದೆ ಎಂಬ ಮಾಹಿತಿ ಇದೆ.

ವರದಿಗಳ ಪ್ರಕಾರ, ನಟಿ ನೀತು ಕಪೂರ್​ ಮತ್ತು ಮಾರಾಟಗಾರ ಕೇವಲ್ ಕ್ರಿಶನ್ ನೊಹ್ರಿಯಾ (Kewal Krishan Nohria) ಮೇ. 10ರಂದು ಈ ಮನೆ ಖರೀದಿಯನ್ನು ನೋಂದಾಯಿಸಿದರು. ಜುಗ್​ಜುಗ್​​ ಜೀಯೋ ನಟಿ ನೀತು 1.04 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. 3,387 ಚದರ ಅಡಿ ಅಪಾರ್ಟ್​​ಮೆಂಟ್​ನಲ್ಲಿ ಮೂರು ಪಾರ್ಕಿಂಗ್ ಏರಿಯಾ ಇದೆ.

ಇತ್ತೀಚೆಗೆ ನೀತು ಕಪೂರ್​​ ಅವರ ಸೊಸೆ, ನಟಿ ಆಲಿಯಾ ಭಟ್ (ನಟ ರಣ್​​ಬೀರ್​ ಕಪೂರ್​ ಪತ್ನಿ) ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಫ್ಲ್ಯಾಟ್‌ ಖರೀದಿಸಿದ್ದಾರೆ. 37 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಫ್ಲ್ಯಾಟ್​​ ನಿರ್ಮಾಣ ಹಂತದಲ್ಲಿದೆ. ಏಪ್ರಿಲ್ 10 ರಂದು ಫ್ಲಾಟ್‌ನ ನೋಂದಣಿ ಕೆಲಸ ಪೂರ್ಣಗೊಂಡಿದೆ. ಇದು ಪಾಲಿ ಹಿಲ್‌ನ ಬಾಂದ್ರಾ ನೆರೆಹೊರೆಯ ಏರಿಯಲ್ ವ್ಯೂವ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‌ನ ಆರನೇ ಮಹಡಿಯಲ್ಲಿದೆ. ಅಂದೇ, ಆಲಿಯಾ ಅವರು ತಮ್ಮ ಸಹೋದರಿ ಶಾಹೀನ್‌ ಅವರಿಗೆ ಜುಹು ಪ್ರದೇಶದಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಪೂರ್ ಕುಟುಂಬವು ಶೀಘ್ರದಲ್ಲೇ ಪಾಲಿ ಹಿಲ್ ನೆರೆಹೊರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಮನೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಬಹುಮಹಡಿ ಬಂಗಲೆ ನಿರ್ಮಾಣ ಹಂತದಲ್ಲಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ. ಸೊಸೆ ಆಲಿಯಾ ಮತ್ತು ಅತ್ತೆ ನೀತು ಇಬ್ಬರೂ ಆಗಾಗ್ಗೆ ಸೈಟ್‌ನಲ್ಲಿ ನಿಂತು ಹೇಗೆ ಕೆಲಸ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಾರೆ. ರಣ್​ಬೀರ್ ಕಪೂರ್ ಸಹ ಅಪರೂಪಕ್ಕೆ ಈ ತಂಡಕ್ಕೆ ಸೇರಿಕೊಳ್ಳುತ್ತಾರೆ.

ಇದನ್ನೂ ಓದಿ: 'ನಮ್ಮದು ಲಿವ್‌ ಇನ್‌ ರಿಲೇಶನ್‌ಶಿಪ್‌': ಪವಿತ್ರಾ ಜೊತೆಗಿನ ಸಂಬಂಧ ಬಹಿರಂಗಪಡಿಸಿದ ನರೇಶ್

1970ರ ಸಮಯದಲ್ಲಿ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ ನಂತರ, ನೀತು ಕಪೂರ್​ ತಮ್ಮ ಮಕ್ಕಳ ಪೋಷಣೆಯಲ್ಲಿ ತೊಡಗಿಸಿಕೊಂಡರು. ಮಕ್ಕಳತ್ತ ಗಮನ ಹರಿಸುವ ಸಲುವಾಗಿ ಕೆಲ ಕಾಲ ವಿರಾಮ ತೆಗೆದುಕೊಂಡರು. ಆ ಸಮಯದಲ್ಲಿ, ಕೆಲವೇ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ತೆರೆಕಂಡ ವರುಣ್ ಧವನ್, ಕಿಯಾರಾ ಅಡ್ವಾಣಿ ಮತ್ತು ಅನಿಲ್ ಕಪೂರ್ ನಟಿಸಿದ ಜುಗ್​ಜುಗ್​​ ಜೀಯೋ ಸಿನಿಮಾದಲ್ಲಿ ಸಟಿಸುವ ಮೂಲಕ ಸಿನಿಮಾಗೆ ಕಮ್​ ಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: 'ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಹೆಚ್ಚು ಸೂಕ್ತ': ಐಶ್ವರ್ಯಾ ರಾಜೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.