ETV Bharat / entertainment

'ಗೋದ್ರಾ' ಟೈಟಲ್ ಕೈ ಬಿಟ್ಟು 'ಡಿಯರ್ ವಿಕ್ರಂ' ಆದ ನೀನಾಸಂ ಸತೀಶ್ - ಗೋದ್ರಾ ಟೈಟಲ್ ಕೈ ಬಿಟ್ಟು ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

ನೀನಾಸಂ ಸತೀಶ್ ಅಭಿನಯದ ಗೋದ್ರಾ ಸಿನಿಮಾದ ಹೆಸರನ್ನು ಬದಲಾಯಿಸಲಾಗಿದೆ.

Actor Neenasam Satish is famous for his performance
ನೀನಾಸಂ ಸತೀಶ್
author img

By

Published : Jun 9, 2022, 3:02 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ ಹಾಗು ಅಭಿನಯದ ಮೂಲಕ ಖ್ಯಾತಿ ಪಡೆದಿರುವ ನಟ ನೀನಾಸಂ ಸತೀಶ್. ಪೆಟ್ರೋಮ್ಯಾಕ್ಸ್, ಗೋದ್ರಾ.. ಹೀಗೆ ಹಲವು ಚಿತ್ರಗಳಲ್ಲಿ ಇವರು ಅಭಿನಯಿಸುತ್ತಿದ್ದಾರೆ‌. ಇದೀಗ ಗೋದ್ರಾ ಸಿನಿಮಾದ ಟೈಟಲ್ ಬದಲಾಯಿಸಲಾಗಿದೆ. ಈ ಸಿನಿಮಾ ಕ್ರಾಂತಿ ಮತ್ತು ಪ್ರೀತಿಯ ಸುತ್ತ ಹೆಣೆದಿರುವ ಕಥೆ ಒಳಗೊಂಡಿದೆ. ಸಿನಿಮಾದಲ್ಲಿ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಲಾಗಿದೆಯಂತೆ.

Actor Neenasam Satish is famous for his performance

ಈ ಸಿನಿಮಾ ಯಾವುದೇ ನೈಜ ಘಟನೆ ಅಥವಾ ಪ್ರದೇಶವನ್ನು ಆಧರಿಸಿದ್ದಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಎಂಬ ಕಾರಣಕ್ಕೆ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ. ಇಂದಿನಿಂದ ಗೋದ್ರಾ 'ಡಿಯರ್ ವಿಕ್ರಂ' ಆಗಿ ಪ್ರೇಕ್ಷಕರೆದುರು ಬರುತ್ತಿದೆ.

ಗೋದ್ರಾ ಟೈಟಲ್ ಕೈ ಬಿಟ್ಟು 'ಡಿಯರ್ ವಿಕ್ರಂ' ಆದ ನೀನಾಸಂ ಸತೀಶ್

ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿರುವ 'ಡಿಯರ್ ವಿಕ್ರಂ'ನಲ್ಲಿ ಉಳಿದಂತೆ ಅಚ್ಯುತ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್, ಸೋನುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಂದೀಶ ಆ್ಯಕ್ಷನ್, ಕಟ್ ಹೇಳಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಕೆ.ಪಿ ಹಿನ್ನೆಲೆ ಸಂಗೀತವಿದೆ.

ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣವಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಡಿಯರ್ ವಿಕ್ರಂ ಸಿನಿಮಾ ಓಟಿಟಿ ವೂಟ್ ಸೆಲೆಕ್ಟ್​​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಇದನ್ನೂ ಓದಿ: ಪುಟ್ಟಣ್ಣ ಕಣಗಾಲ್ ಅಣ್ಣನ ಮಗ ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ ಇನ್ನಿಲ್ಲ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.