ಮುಂಬೈ (ಮಹಾರಾಷ್ಟ್ರ): 'ದಿ ಸೀರಿಯಸ್ ಮೆನ್' ಸಿನಿಮಾದ ನಟ ನವಾಜುದ್ದೀನ್ ಸಿದ್ದಿಕಿ ಗುರುವಾರ 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಕಾನ್ ಚಲನಚಿತ್ರೋತ್ಸವದಲ್ಲಿ ನಟ ಭಾರತೀಯ ನಿಯೋಗದ ಭಾಗವಾಗಿದ್ದಾರೆ. ಈ ಸಂಭ್ರಮದಲ್ಲಿರುವ ನಟ ಏಳನೇ ಬಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
- " class="align-text-top noRightClick twitterSection" data="
">
2012 ರಲ್ಲಿ ಬಿಡುಗಡೆಯಾದ 'ಮಿಸ್ ಲವ್ಲಿ' ಮತ್ತು 'ಗ್ಯಾಂಗ್ಸ್ ಆಫ್ ವಾಸೇಪುರ್' ನಂತರ 2013 ರಲ್ಲಿ 'ಮಾನ್ಸೂನ್ ಶೂಟೌಟ್', 'ದಿ ಲಂಚ್‌ಬಾಕ್ಸ್', 'ಬಾಂಬೆ ಟಾಕೀಸ್' ಬಳಿಕ 2016 ರಲ್ಲಿ ಬಿಡುಗಡೆಯಾದ ರಮಣ್ ರಾಘವ್ 2.0 ಮತ್ತು 2018 ರಲ್ಲಿ ಬಿಡುಗಡೆಯಾದ ಮಾಂಟೊ - ಎಲ್ಲವನ್ನೂ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿದೆ.
ಈ ವರ್ಷ ಕಾನ್ನಲ್ಲಿ ಭಾರತೀಯ ತಂಡದ ಭಾಗವಾಗಿರುವ ನವಾಜ್ ತಮ್ಮ ಹುಟ್ಟುಹಬ್ಬದ ಆಚರಣೆಯ ಕುರಿತು ಮಾತನಾಡುತ್ತಾ, 'ಭಾರತವನ್ನು ಪ್ರತಿನಿಧಿಸುವುದು ಯಾವಾಗಲೂ ವಿಶೇಷವಾಗಿದೆ. ನನ್ನ ಚಲನಚಿತ್ರಗಳು ಕಾನ್ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಕಾರಣ ನಾನು ಇಲ್ಲಿ 6 ಹುಟ್ಟುಹಬ್ಬಗಳನ್ನು ಆಚರಿಸಿದ್ದೇನೆ. ಆದರೆ, ಈ ಬಾರಿ ಭಾರತೀಯ ಪ್ರತಿನಿಧಿಯಾಗಿ ಇದು ಹೆಚ್ಚು ವಿಶೇಷ ಮತ್ತು ಸ್ಮರಣೀಯವಾಗಿಸುತ್ತದೆ' ಎಂದಿದ್ದಾರೆ. ಕೆಲಸದ ನಡುವೆಯೂ ನಟ 'ಟಿಕು ವೆಡ್ಸ್ ಶೇರು', 'ನೂರಾನಿ ಚೆಹ್ರಾ', 'ಅದ್ಭುತ್' ಮತ್ತು 'ಲಕ್ಷ್ಮಣ್ ಲೋಪೆಜ್' ಸೇರಿದಂತೆ ಆಸಕ್ತಿದಾಯಕ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.