ETV Bharat / entertainment

ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿಯಿಂದಲೇ ರೇಪ್​ ಕೇಸ್: ಮಕ್ಕಳಿಗಾಗಿ ಕೋರ್ಟ್ ಮೆಟ್ಟಿಲೇರಿದ ನಟ! - nawazuddin siddiqui rape case

ನಟ ನವಾಜುದ್ದೀನ್ ಸಿದ್ದಿಕಿ ಕೌಟುಂಬಿಕ ಕಲಹ ತೀವ್ರಗೊಂಡಿದೆ. ಪತ್ನಿ ಆಲಿಯಾ ಸಿದ್ದಿಕಿ ಪತಿ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದಾರೆ.

nawazuddin siddiqui family dispute
ನವಾಜುದ್ದೀನ್ ಸಿದ್ದಿಕಿ ಕೌಟುಂಬಿಕ ಕಲಹ
author img

By

Published : Feb 25, 2023, 12:49 PM IST

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin siddiqui) ಕೌಟುಂಬಿಕ ಕಲಹ ದಿನೇ ದಿನೆ ಹೆಚ್ಚಾಗುತ್ತಿದೆ. ಬಾಂಬೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಮಕ್ಕಳು ಇರುವ ಸ್ಥಳವನ್ನು ಬಹಿರಂಗಪಡಿಸಲು ಪತ್ನಿ ಆಲಿಯಾ ಸಿದ್ದಿಕಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಬಾಂಬೆ ಹೈಕೋರ್ಟ್ ಶುಕ್ರವಾರ ಈ ದಂಪತಿಗೆ ತಮ್ಮ ಮಕ್ಕಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಸಲಹೆ ನೀಡಿದೆ.

ಏತನ್ಮಧ್ಯೆ, ಆಲಿಯಾ ಸಿದ್ದಿಕಿ ಅವರು ಪತಿ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ ಮತ್ತು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಆಲಿಯಾ, 2021ರಲ್ಲಿಯೇ ನವಾಜುದ್ದೀನ್‌ಗೆ ವಿಚ್ಛೇದನ ನೋಟಿಸ್ ನೀಡಲಾಗಿದೆ. ಆದರೂ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಗುರುವಾರ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಅತ್ಯಾಚಾರದ ದೂರು (ಪುರಾವೆಯೊಂದಿಗೆ) ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

"ಏನೇ ಆಗಲಿ, ನನ್ನ ಮುಗ್ಧ ಮಕ್ಕಳನ್ನು ಅವರ ಬಳಿ ಹೋಗಲು ನಾನು ಬಿಡುವುದಿಲ್ಲ" ಎಂದು ಆಲಿಯಾ ತಿಳಿಸಿದ್ದಾರೆ. ಈ ವಿಡಿಯೋ ಪೋಸ್ಟ್​ನಲ್ಲಿ ಆಲಿಯಾ ಭಾವುಕರಾಗಿರುವುದನ್ನು ಕಾಣಬಹುದು. ಈ ದಂಪತಿ 2009ರಲ್ಲಿ ವೈವಾಹಿಕ ಜೀವನ ಆರಂಭಿಸಿದರು. ಆದರೆ, ದಂಪತಿ ಕಳೆದ ಕೆಲವು ವಾರಗಳಿಂದ ವೈಯಕ್ತಿಕ ವಿಷಯಗಳು, ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಾ ಸದ್ಯ ಸುದ್ದಿಯಲ್ಲಿದ್ದಾರೆ.

2022ರ ಜವರಿಯಲ್ಲಿ ನಟನ ಮನೆಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ನವಾಜುದ್ದೀನ್ ಅವರ ತಾಯಿ ಆಲಿಯಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೌಟುಂಬಿಕ ಹಿಂಸೆ ಆರೋಪದ ಮೇಲೆ ಅತ್ತೆ ವಿರುದ್ಧ ಆಲಿಯಾ ಕೂಡ ಪ್ರತಿದೂರು ದಾಖಲಿಸಿದ್ದರು. ಆ ಸಮಯದಲ್ಲಿ ಆಲಿಯಾ ತಮ್ಮ ಅತ್ತೆಯನ್ನು "ಹೃದಯಹೀನ" ಎಂದು ಕರೆದಿದ್ದರು.

ತಮ್ಮ ಮಕಳ ಬೆಳವಣಿಗೆ ಸಮಯದಲ್ಲಿ ಹೆಚ್ಚು ಒತ್ತು ಕೊಡಲಿಲ್ಲ. ಆದ್ರೀಗ ಉತ್ತಮ ತಂದೆ ಎಂದು ಸಾಬೀತುಪಡಿಸಲು ತನ್ನಿಂದ ತನ್ನ ಮಕ್ಕಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ತನ್ನ ಅಧಿಕಾರ ಮತ್ತು ಖ್ಯಾತಿಯನ್ನು ದುರುಪಯೋಗಪಡಿಸಿಕೊಂಡು ತಾಯಿಯಿಂದ ಮಕ್ಕಳನ್ನು ಕದಿಯಲು ಯತ್ನಿಸುತ್ತಿದ್ದಾರೆ ಎಂದು ಆಲಿಯಾ ಪತಿ ಬಗ್ಗೆ ಆರೋಪಗಳ ಮಳಯನ್ನೇ ಸುರಿಸಿದ್ದಾರೆ.

ನವಾಜುದ್ದೀನ್‌ನನ್ನು ತನ್ನ ಪತಿ ಎಂದು ಪರಿಗಣಿಸಿದ್ದೇನೆ. ಆದರೆ ನನ್ನ ಜೀವನದ ಪ್ರಮುಖ ವರ್ಷಗಳನ್ನು ಅವರಿಗೆ ನೀಡಿದ್ದರೂ ಅವರು ನನ್ನನ್ನು ಎಂದಿಗೂ ತನ್ನ ಹೆಂಡತಿಯಾಗಿ ಸ್ವೀಕರಿಸಲಿಲ್ಲ. ನಾನು ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದೇನೆ. ನವಾಜುದ್ದೀನ್ ತನ್ನನ್ನು ಎಲ್ಲಾ ಕಡೆಯಿಂದ ದುರ್ಬಲಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು. ಜೊತೆಗೆ ನ್ಯಾಯಾಲಯ ಮತ್ತು ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ತೀರ್ಪು ತನ್ನ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಫಿಲ್ಮ್​ ಅವಾರ್ಡ್: 'ಆರ್​ಆರ್​ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು

ಆಲಿಯಾ ಅವರ ಈ ಹಿಂದಿನ ಪೋಸ್ಟ್‌ಗಳಲ್ಲಿ, ತನ್ನ ಪತಿ ಮತ್ತು ಅತ್ತೆ ತನಗೆ ಆಹಾರ ಮತ್ತು ಇತರ ಮೂಲ ಅವಶ್ಯಕತೆಗಳನ್ನು ಪೂರೈಸಲಿಲ್ಲ. ಸ್ನಾನಗೃಹದ ಪ್ರವೇಶಕ್ಕೆ ಕಡಿವಾಣ ಹಾಕಿದರು. ಅವರ ಮನೆಯ ಕೋಣೆಯಲ್ಲಿ ತನ್ನನ್ನು ಮತ್ತು ಮಕ್ಕಳನ್ನು ಇರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.