ETV Bharat / entertainment

RRR ನಾಟು ನಾಟು ಕ್ರೇಜ್​​: ಮಸ್ಕ್ ಮೆಚ್ಚುಗೆ, ನೂರಾರು ಟೆಸ್ಲಾ ಕಾರುಗಳಲ್ಲಿ ಲೈಟ್​ ಶೋ - natu natu tesla

ನ್ಯೂಜೆರ್ಸಿ ಮೂಲದ ಟೆಸ್ಲಾ ಕಂಪನಿ ನಾಟು ನಾಟು ಕಾರ್​ ಲೈಟ್​ ಶೋ ಮೂಲಕ ಗಮನ ಸೆಳೆದಿದೆ.

natu natu tesla car light show
ಟೆಸ್ಲಾ ಕಾರು ಲೈಟ್​ ಶೋ
author img

By

Published : Mar 21, 2023, 1:51 PM IST

ಕಳೆದ ಮಾರ್ಚ್​ 24ರಂದು ತೆರೆಕಂಡು ವಿಶ್ವ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿರುವ ಆರ್​ಆರ್​ಆರ್​ ಸಿನಿಮಾ ಮತ್ತು ನಾಟು ನಾಟು ಹಾಡಿನ ಕ್ರೇಜ್​ ಕಿಂಚಿತ್ತೂ ಕಡಿಮೆ ಆಗಿಲ್ಲ. ಇನ್ನೇನು ವರ್ಷ ಪೂರೈಸಲಿರುವ RRR ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇದೆ. ಆಸ್ಕರ್​ 2023 ಬಳಿಕ ನಾಟು ನಾಟು ಹಾಡು ಸೇರಿದಂತೆ ಚಿತ್ರತಂಡ ಜಾಗತಿಕ ಮಟ್ಟದಲ್ಲಿ ವಿಶೇಷ ಮನ್ನಣೆ ಪಡೆದಿದೆ.

ಸೌತ್ ಸೂಪರ್ ಸ್ಟಾರ್​ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್​​ಟಿಆರ್ ಅಮೋಘ ಅಭಿನಯದ ಮೆಗಾ ಬ್ಲಾಕ್ ಬಸ್ಟರ್ ಚಿತ್ರ 'ಆರ್​ಆರ್​ಆರ್' ಕ್ರೇಜ್​​​ ಕಡಿಮೆ ಆಗಿಲ್ಲ. ಅಮೆರಿಕ ಸೇರಿದಂತೆ ಹಲವು ಹೊರದೇಶಗಳಲ್ಲಿ ಚಿತ್ರದ ಕ್ರೇಜ್ ಸೃಷ್ಟಿಯಾಗಿದೆ. ಇದೀಗ ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ನಾಟು ನಾಟು ಹಾಡು ಭಾರಿ ಸದ್ದು ಮಾಡಿದೆ. ಟೆಸ್ಲಾ ಕಾರುಗಳನ್ನು ಒಂದೆಡೆ ನಿಲ್ಲಿಸಿ ಲೈಟ್ ಶೋ ಮಾಡಲಾಗಿದೆ. ನಾಟು ನಾಟು ಹಾಡಿನ ಬೀಟ್​ಗೆ ತಕ್ಕಂತೆ ಕಾರುಗಳ ಲೈಟ್​​ಗಳು ಬ್ಲಿಂಕ್​ ಆಗಿವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

  • ♥️♥️

    — Elon Musk (@elonmusk) March 20, 2023 " class="align-text-top noRightClick twitterSection" data=" ">

'RRR' ಚಿತ್ರ ತಯಾರಕರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ನ್ಯೂಜೆರ್ಸಿ ಮೂಲದ ಟೆಸ್ಲಾ ಕಂಪನಿಯ ಅದ್ಭುತ ಕಾರ್​ ಲೈಟ್​ ಶೋ ಎಂದು ಬರೆದುಕೊಂಡಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹೊರಬಂದ ಕೂಡಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

'RRR' ಸಾಮಾಜಿಕ ಮಾಧ್ಯಮಗಳ ಪೇಜ್​ನಲ್ಲಿ ಶೇರ್ ಮಾಡಿರುವ ಈ ವಿಡಿಯೋಗೆ ಟೆಸ್ಲಾ ಕಂಪನಿ ಮಾಲೀಕ ಎಲೋನ್ ಮಸ್ಕ್ ಹಾರ್ಟ್ ಎಮೋಜಿ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದಕ್ಕೆ ಆರ್​ಆರ್​ಆರ್​ ತಂಡ ಕೃತಜ್ಞತೆ ತಿಳಿಸಿದೆ. ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ 2023 ಸಮಾರಂಭದಲ್ಲಿ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ, ಗುನೀತ್​ ಮೊಂಗಾ ನಿರ್ಮಾಣದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತದ ಹೆಸರು ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ವಿಶೇಷವಾಗಿ ನಾಟು ನಾಟು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಸೂರ್ಯ: ಬೆಲೆ ಕೇಳಿದ್ರೆ ದಂಗಾಗ್ತೀರಿ!

ಇನ್ನೂ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಲು ಒಬ್ಬ ವ್ಯಕ್ತಿಗೆ ಸುಮಾರು 20.6 ಲಕ್ಷ ರೂ. ವೆಚ್ಚದಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ತಮಗಾಗಿ ಮತ್ತು ತಮ್ಮ ತಂಡದವರಿಗಾಗಿ ಪಾಸ್‌ಗಳನ್ನು ಖರೀದಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ಒಟ್ಟು 1.44 ಕೋಟಿ ರೂ. ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ: 'ನಾನು ಸಿನಿಮಾ ಮಾಡುವುದಿಲ್ಲ': ಫ್ಯಾನ್ಸ್​ಗೆ ಶಾಕ್​ ನೀಡಿದ ಜೂ.ಎನ್​ಟಿಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.