ETV Bharat / entertainment

ನಟ ನರೇಶ್ ಜೊತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್! - pavitra lokesh

ತಮ್ಮ ಪೋಟೋಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬಗ್ಗೆ ಮತ್ತು ವಿನಾ ಕಾರಣ ಸುಳ್ಳು ಸುದ್ದಿ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ದೂರು ದಾಖಲಿಸಿದ್ದಾರೆ.

naresh and pavitra lokesh registered complaint in Cybercrime police station
ನಟ ನರೇಶ್ ಜೊತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪವಿತ್ರ ಲೋಕೇಶ್
author img

By

Published : Nov 26, 2022, 7:52 PM IST

ಹೈದರಾಬಾದ್​​: ಟಾಲಿವುಡ್​ ನಟ ನರೇಶ್ ಬಾಬು ಜೊತೆ ಬಹುಭಾಷೆ ತಾರೆ ಪವಿತ್ರ ಲೋಕೇಶ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ತೇಜೋವಧೆ ಮಾಡಿದ ಕೆಲವು ವೆಬ್‌ಸೈಟ್‌ ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ತಮ್ಮ ಪೋಟೋಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬಗ್ಗೆ ಮತ್ತು ವಿನಾ ಕಾರಣ ಅವರ ಬಗ್ಗೆ ಸುಳ್ಳು ಸುದ್ದಿ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಸೈಬರ್ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಗಾಲ್ವಾನ್ ಟ್ವೀಟ್ ವಿವಾದ: ಚಡ್ಡಾ ಟ್ವೀಟ್​​ಗೆ ನಟ- ನಟಿಯರ ಪ್ರತಿಕ್ರಿಯೆ ಏನು?

ಜಾಲತಾಣಗಳಲ್ಲಿ ತಮ್ಮ ಬಗ್ಗೆ ಬಂದಿರುವ ಸುದ್ದಿಗೆ ಆಕ್ಷೇಪ ವ್ಯಕ್ತಪಡಿಸಿರುವ ಪವಿತ್ರ ಲೋಕೇಶ್, ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಕೆಲವು ವೆಬ್‌ಸೈಟ್‌ ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸ್ ಭದ್ರತೆಯಲ್ಲಿ ಹೋಟೆಲ್​ನಿಂದ ತೆರಳಿದ ನಟಿ ಪವಿತ್ರಾ ಲೋಕೇಶ್, ನಟ ನರೇಶ್

ಈ ಹಿಂದೆ ನಟಿ ಪವಿತ್ರ ಲೋಕೇಶ್, ನಟ ನರೇಶ್ ಬಾಬು ಒಟ್ಟಿಗೆ ಕಾಣಿಸಿಕೊಂಡು ದೊಡ್ಡ ರಂಪಾಟ ನಡೆದಿತ್ತು. ಮೈಸೂರಿನಲ್ಲಿ ನರೇಶ್ ಮತ್ತು ಪವಿತ್ರಾ ತಂಗಿದ್ದ ಹೋಟೆಲ್​ಗೆ ನರೇಶ್​ ಪತ್ನಿ ರಮ್ಯಾ ರಘುಪತಿ ಆಗಮಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗದ್ದಲ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ಭದ್ರತೆಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರನ್ನು ಹೋಟೆಲ್​ನಿಂದ ಹೊರಗೆ ಕರೆತಂದು ಕಾರಲ್ಲಿ ಕಳುಹಿಸಿದ್ದರು.

ಆ ವೇಳೆ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಹಾಗೂ ಪವಿತ್ರ ವಿರುದ್ಧ ಕಿಡಿಕಾರಿದ್ದರು. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರ ಮತ್ತು ನರೇಶ್ ಫೋಟೊಗಳು ವೈರಲ್​ ಆಗುತ್ತಿರುತ್ತವೆ. ಈ ಹಿನ್ನೆಲೆ ಅವರಿಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.