ETV Bharat / entertainment

ಪ್ರೇಕ್ಷಕರ ಗಮನ ಸೆಳೆದ 'ಅನ್ ಲಾಕ್ ರಾಘವ'ನ ನನ್​​ ಹುಡುಗಿ ಹಾಡು-ನೋಡಿ - ಮಿಲಿಂದ್

'ಅನ್ ಲಾಕ್ ರಾಘವ' ಚಿತ್ರದ ನನ್​​ ಹುಡುಗಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

Unlock Raghava movie
ರೆಚೆಲ್ ಡೇವಿಡ್ - ಮಿಲಿಂದ್
author img

By ETV Bharat Karnataka Team

Published : Nov 7, 2023, 8:55 AM IST

ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್​​​ವುಡ್​​​ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಸಿನಿಮಾ 'ಅನ್ ಲಾಕ್ ರಾಘವ'. ಯುವ ನಟ ಮಿಲಿಂದ್ ಹಾಗೂ ನಟಿ ರೆಚೆಲ್ ಡೇವಿಡ್ ಅಭಿನಯವಿರುವ ಈ ಚಿತ್ರದ ಶೂಟಿಂಗ್​​ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಚಿತ್ರದ ಹಾಡೊಂದು ಅನಾವರಣಗೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.

  • " class="align-text-top noRightClick twitterSection" data="">

ಗೀತೆರಚನೆಕಾರ ಹೃದಯಶಿವ ಅವರ ಸಾಹಿತ್ಯ, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇರುವ 'ನನ್​​ ಹುಡುಗಿ' ಎಂಬ ಹಾಡು ಸಾಯಿ ವಿಘ್ನೇಶ್ ಕಂಠಸಿರಿಯಲ್ಲಿ ಇಂಪಾಗಿ ಮೂಡಿಬಂದಿದೆ. ನಾಯಕ ನಟ ಮಿಲಿಂದ್ ಹುಟ್ಟುಹಬ್ಬದಂದು ಎ2 ಮ್ಯೂಸಿಕ್​​ ಮೂಲಕ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಹಾಡಿನ ಬಗ್ಗೆ, ಸಿನಿಮಾ ಕುರಿತು ಚಿತ್ರತಂಡ ಕೆಲ ಮಾಹಿತಿಯನ್ನೂ ಹಂಚಿಕೊಂಡಿದೆ.

Unlock Raghava movie
'ಅನ್ ಲಾಕ್ ರಾಘವ' ತಂಡ

ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ, ಹಲವು ವಿಶೇಷಗಳನ್ನು ಹೊಂದಿರುವ 'ಅನ್ ಲಾಕ್ ರಾಘವ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಪ್ರಥಮ ಪ್ರತಿ ಬರಲಿದೆ. ಮಿಲಿಂದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಹಾಡಿನ ಚಿತ್ರೀಕರಣ ಚಿತ್ರದುರ್ಗದಲ್ಲಿ ಎರಡು ದಿನಗಳ ಕಾಲ ನಡೆದಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ‌. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರೀಕರಣ ನಡೆದಿತ್ತು. ಮಿಲಿಂದ್ ಹುಟ್ಟುಹಬ್ಬದಂದು ಈ ಹಾಡು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಎಲ್ಲಾ ಹಾಡುಗಳು ಬಹಳ ಚೆನ್ನಾಗಿವೆ. ಚಿತ್ರವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಕಮಲ್​ ಹಾಸನ್!​ ಮೂರು ದಶಕಗಳ ನಂತರ ಮಣಿರತ್ನಂ 'Thug Life'ನಲ್ಲಿ ಅಭಿನಯ

ನಟ ಮಿಲಿಂದ್ ಮಾತನಾಡಿ, ಹೃದಯಶಿವ ಅವರು ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿ, 'ವರಾಹ ರೂಪಂ' ಖ್ಯಾತಿಯ ಸಾಯಿವಿಘ್ನೇಶ್ ಹಾಡಿರುವ ಈ ಹಾಡು ಆಕರ್ಷಕವಾಗಿ ಮೂಡಿಬಂದಿದೆ. ಚಿತ್ರದುರ್ಗದ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಹಾಡು ನನ್ನ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವುದು ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮಿಲಿಂದ್ ಜೋಡಿಯಾಗಿ ರೆಚೆಲ್ ಡೇವಿಡ್ ತೆರೆ ಹಂಚಿಕೊಂಡಿದ್ದಾರೆ.

Unlock Raghava movie
'ಅನ್ ಲಾಕ್ ರಾಘವ' ತಂಡ

ಇದನ್ನೂ ಓದಿ: ಜಯಭೇರಿ ಕನ್ನಡ ಹಾಡಿನಲ್ಲಿ ಕನ್ನಡಾಂಬೆ ಕೊಂಡಾಡಿದ ನಿಶ್ವಿಕಾ ನಾಯ್ಡು, ಯಶಸ್ ಸೂರ್ಯ

ನಿರ್ಮಾಪಕ ಮಂಜುನಾಥ್ ಮಾತನಾಡಿ, ಸತ್ಯಪ್ರಕಾಶ್ ಚಿತ್ರದ ಕಥೆ ಬರೆದಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ನನ್ನ ಪುತ್ರ ಮಿಲಿಂದ್ ನಾಯಕನಾಗಿ ನಟಿಸಿರುವ ಚಿತ್ರ ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬರುತ್ತಿದೆ ಎಂದು ತಿಳಿಸಿದರು‌. ಚಿತ್ರಕ್ಕೆ ಲವಿತ್ ಛಾಯಾಗ್ರಾಹಣ, ಅಜಯ್ ಸಂಕಲನ, ಮುರಳಿ ಮಾಸ್ಟರ್ ನೃತ್ಯ ಸಂಯೋನೆ ಇದೆ. ಸದ್ಯ ಹಾಡಿನಿಂದ ಗಮನ ಸೆಳೆಯುತ್ತಿರುವ ಅನ್‌ ಲಾಕ್ ರಾಘವ ಚಿತ್ರದ ಟ್ರೇಲರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.