ETV Bharat / entertainment

ನಗುವಿನ ಹೂಗಳ ಮೇಲೆ ಚಿತ್ರದ ಪ್ರೇಮಗೀತೆ ಅನಾವರಣ: ಲವ್​ಸ್ಟೋರಿ ಹೇಳಲು ಅಭಿದಾಸ್, ಶರಣ್ಯ ಶೆಟ್ಟಿ ರೆಡಿ - Sharanya Shetty

Naguvina Hoogala Mele: ಅಭಿದಾಸ್, ಶರಣ್ಯ ಶೆಟ್ಟಿ ಮುಖ್ಯಭೂಮಿಕೆಯ 'ನಗುವಿನ ಹೂಗಳ ಮೇಲೆ' ಚಿತ್ರತಂಡ ಸಿನಿಮಾ ಕುರಿತು ಕೆಲ ಮಾಹಿತಿ ಹಂಚಿಕೊಂಡಿದೆ.

Abhidas Sharanya Shetty movie
ಅಭಿದಾಸ್ ಶರಣ್ಯ ಶೆಟ್ಟಿ ಸಿನಿಮಾ
author img

By ETV Bharat Karnataka Team

Published : Aug 30, 2023, 2:04 PM IST

ಕಿರುತೆರೆಯಲ್ಲಿ ಕನ್ನಡಿಗರ ಮನಗೆದ್ದಿರುವ ಅಭಿದಾಸ್, ನಗುವಿನ ಸುಂದರಿ ಶರಣ್ಯ ಶೆಟ್ಟಿ ಸ್ಕ್ರೀನ್​​ ಶೇರ್ ಮಾಡಿರುವ ಸಿನಿಮಾ 'ನಗುವಿನ ಹೂಗಳ ಮೇಲೆ'. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ನಗುವಿನ ಹೂಗಳ ಮೇಲೆ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ. ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿರುವ 'ನಗುವಿನ ಹೂಗಳ ಮೇಲೆ' ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.

ನಟ ಅಭಿದಾಸ್ ಮಾತನಾಡಿ, ''ಸೋಲೋ ಹೀರೋ ಆಗಿ ಇದು ನನ್ನ ಮೊದಲ ಚಿತ್ರ. ಸಿನಿಮಾಗಾಗಿ ನನ್ನನ್ನು ಸೆಲೆಕ್ಟ್ ಮಾಡಿದ್ದಕ್ಕೆ ವೆಂಕಟ್, ರಾಧಾ ಮೋಹನ್ ಅವರಿಗೆ ಧನ್ಯವಾದಗಳು. ನಾಲ್ಕು‌ ಮೆಲೋಡಿ ಹಾಡುಗಳಿವೆ. 'ಇರಲಿ ಬಿಡು', 'ಗೊತ್ತಿಲ್ಲ ಯಾರಿಗೂ' ನನ್ನ ಮೆಚ್ಚಿನ ಹಾಡುಗಳು ಎಂದು ತಿಳಿಸಿದರು.

Naguvina Hoogala Mele
ನಗುವಿನ ಹೂಗಳ ಮೇಲೆ ಚಿತ್ರತಂಡ

ನಟಿ ಶರಣ್ಯ ಶೆಟ್ಟಿ ಮಾತನಾಡಿ, ''ನಗುವಿನ ಹೂಗಳ ಮೇಲೆ ನನಗೆ ಬಹಳ ವಿಶೇಷ ಸಿನಿಮಾ. ಸೋಲೋ‌ ಹೀರೋಯಿನ್ ಆಗಿ ಇದು ನನ್ನ ಫಸ್ಟ್ ಮೂವಿ. ಎರಡು ವರ್ಷಗಳ ಹಿಂದೆ ಶೂಟಿಂಗ್​ ನಡೆಸಿದ್ದೆವು. ಪರದೆ ಮೇಲೆ ನನ್ನ ಮುಗ್ಧತೆ ಕಾಣಿಸುತ್ತದೆ. ಶೂಟಿಂಗ್ ಪ್ರೊಸೆಸ್​ ಬಹಳ ಚೆನ್ನಾಗಿತ್ತು. ಟ್ರೂ ಲವ್ ಸ್ಟೋರಿ ಬೇಸ್ಡ್ ಸಿನಿಮಾ. ತನು ಮನುವಿನ ಪ್ರೇಮಕಥೆ ನಗುವಿನ ಹೂಗಳ ಮೇಲೆ. ನಾನು ತೆರೆಮೇಲೆ ಚಿತ್ರ ನೋಡಲು ಕಾತುರಳಾಗಿದ್ದೇನೆ'' ಎಂದರು.

Naguvina Hoogala Mele
ನಗುವಿನ ಹೂಗಳ ಮೇಲೆ ಚಿತ್ರತಂಡ

ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ''ನಗುವಿನ ಹೂಗಳ ಮೇಲೆ ಎಂಬ ಶೀರ್ಷಿಕೆಯೇ ಬಹಳ ಚೆನ್ನಾಗಿದೆ. ತೂಕವಾದ ಹೆಸರು. ಡಾ. ರಾಜ್​​ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ಸಿನಿಮಾದ ಹಾಡಿನ ಎರಡನೇ ಚರಣದಲ್ಲಿ ಬರುವ ತೂಕವಿರುವ ಪದ ಇದು. ಹೀಗಾಗಿ ನಮ್ಮ ಕಂಟೆಂಟ್ ಅನ್ನು ಬಹಳ ಚೆನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲೆ ಹೆಚ್ಚಿತ್ತು. ಶರಣ್ಯ ಹಾಗೂ ಅಭಿ ಕಾಂಬಿನೇಷನ್ ಚೆನ್ನಾಗಿ ವರ್ಕೌಟ್ ಆಗಿದೆ. ಇದು‌ ಒಂದೊಳ್ಳೆ ಪ್ರೇಮಕಥೆ. 18 ವರ್ಷದಿಂದ 80 ವರ್ಷದವರು ವೀಕ್ಷಿಸಬಹುದು. ಪ್ರೇಮ ಅನ್ನೋದಕ್ಕೆ ಸಾವಿಲ್ಲ, ವಯಸ್ಸಿಲ್ಲ. ಪ್ರತಿಯೋರ್ವ ಕಲಾವಿದರು, ತಂತ್ರಜ್ಞರು ನಮಗೆ ಬೆಂಬಲವಾಗಿ ನಿಂತಿದ್ದರು. 27 ದಿನಗಳ ಶೂಟಿಂಗ್ ಮಾಡಿ‌ ಮುಗಿಸಿದ್ದೇವೆ'' ಎಂದು ತಿಳಿಸಿದರು.

  • " class="align-text-top noRightClick twitterSection" data="">

ಗೊತ್ತಿಲ್ಲ ಯಾರಿಗೂ ಎಂಬ ಪ್ರೇಮಗೀತೆಗೆ ಲವ್ ಪ್ರಾನ್ ಮೆಹತಾ ಟ್ಯೂನ್ ಹಾಕಿದ್ದು, ಚಿದಂಬರ ನರೇಂದ್ರ ಸಾಹಿತ್ಯ ಬರೆದಿದ್ದು, ತಜೀಂದರ್ ಸಿಂಗ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಶರಣ್ಯ ಹಾಗೂ ಅಭಿದಾಸ್ ಮಿಂಚಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇರಲಿ ಬಿಡು ಈ ಜೀವ ನಿನಗಾಗಿ ಗಾನಲಹರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಒಂದೇ ಚಿತ್ರದಲ್ಲಿ ಸ್ಯಾಂಡಲ್​ವುಡ್ ಸಹೋದರರು: 'ಕಾಲಾಯ ನಮಃ' ಎಂದ ನವರಸನಾಯಕ ಜಗ್ಗೇಶ್, ಕೋಮಲ್ ಕುಮಾರ್

ಆಮ್ಲೆಟ್, ಕೆಂಪಿರ್ವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾಣ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: Raksha Bandhan: ಮನಮೋಹಕವಾಗಿ ರೆಡಿಯಾಗಬೇಕೆ? ಈ ನಟಿಮಣಿಯರ ಸ್ಟೈಲ್ ಟ್ರೈ ಮಾಡಿ ನೋಡಿ

ಟಾಲಿವುಡ್​ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಕೆ ರಾಧಾ ಮೋಹನ್ ಅವರು ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ ಎಂಬುದು ಚಿತ್ರತಂಡದ ವಿಶ್ವಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.