ETV Bharat / entertainment

ನಂದಿನಿ ನಮ್ಮವಳಲ್ಲ 'ನನ್ನವಳು': ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ - Nagathihalli Chandrashekhar tweet

ನಂದಿನಿ ಮತ್ತು ಅಮುಲ್ ವಿವಾದದ ನಡುವೆ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Nagathihalli Chandrashekhar
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
author img

By

Published : Apr 12, 2023, 4:49 PM IST

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಂದಿನಿ ಮತ್ತು ಅಮುಲ್ ಉತ್ಪನ್ನಗಳ ಮಾರಾಟ ವಿಷಯ ರಾಜಕೀಯ ಕಚ್ಚಾಟದ ವಸ್ತುವಾಗಿದೆ. ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಟ್ವೀಟ್ ಮಾಡಿ ​ನಂದಿನಿಯ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ವಿವರ: ''ನಂದಿನಿ ನಮ್ಮವಳು ಅಲ್ಲ- 'ನನ್ನವಳು', ಆರೋಗ್ಯದಾಯಿನಿ. ನಾನು ಕೆಎಂಎಫ್​ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಮಾಡಿ ವ್ಯಾಸಂಗ ಮಾಡುತ್ತಾ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ'' ಎಂದು ತಿಳಿಸಿದ್ದಾರೆ.

  • ನಂದಿನಿ ನಮ್ಮವಳು ಅಲ್ಲ- ‘ನನ್ನವಳು’.ಆರೋಗ್ಯದಾಯಿನಿ. ನಾನು ಕೆಎಂಎಫ್ ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣುಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

    — Nagathihalli Chandrashekhar (@NomadChandru) April 12, 2023 " class="align-text-top noRightClick twitterSection" data=" ">

ನಂದಿನಿ ಮತ್ತು ಅಮುಲ್ ವಿವಾದ ದಿನೇ ದಿನೆ ತಾರಕಕ್ಕೇರುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲಾ ದಿನಗಳಲ್ಲಿ ನಂದಿನಿ ಡೈರಿಯಲ್ಲಿ ಕೆಲಸ ಮಾಡಿದ್ದನ್ನು, ಕೆಲಸದ ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಿರುವುದನ್ನು ಅವರು ಸ್ಮರಿಸಿದ್ದಾರೆ. ನಂದಿನಿ (ಕೆಎಂಎಫ್‌) ಸಂಸ್ಥೆಯೊಂದಿಗೆ ತಮಗೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ.

ನಾಗತಿಹಳ್ಳಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, "ಸಮಸ್ಯೆ ಇರುವುದು ನಂದಿನಿಗಲ್ಲ ಸರ್, ನಂದಿನಿಯ ಮೂಲಕ್ಕೆ. ಅದ್ರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ" ಎಂದು ಹೇಳಿದ್ದಾರೆ. ''ಸದ್ಯ ಚಲನಚಿತ್ರ ರಂಗದಿಂದ ನೀವು ಒಬ್ಬರಾದರೂ ಮಾತಾಡಿದ್ರಲ್ಲ, ಸಾಕು ಬಿಡಿ'' ಎಂದು ಮತ್ತೋರ್ವರು ತಿಳಿಸಿದ್ದಾರೆ. ಇನ್ನೋರ್ವರು ಕಾಮೆಂಟ್​ ಮಾಡಿ, "ಹೌದು ಸರ್​​ ನಮಗೆ ನಂದಿನಿ ಬದುಕಿನ ಜೀವನಾಡಿ. ನಮ್ಮ ಜೀವನ, ವಿದ್ಯಾಭ್ಯಾಸ ಎಲ್ಲವೂ ನಂದಿನಿಯಿಂದಲೇ'' ಎಂದಿದ್ದಾರೆ. "ನಂದಿನಿ ಜೊತೆ ಅಮುಲ್ ಕಲ್ಪಿಸಿಕೊಂಡರೆ ಗ್ರಾಮ್ಯ ಬದುಕು ಇನ್ನೂ ದೊಡ್ಡದಾಗಿ ಕಾಣುತ್ತೆ. ಮಾರ್ಕೆಟ್ ದೊಡ್ಡದಾದರೆ ಆದಾಯವೂ ದೊಡ್ಡದಾಗುತ್ತದೆ ಅಲ್ವೇ?" ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ತಿಳಿಸಿದ್ದಾರೆ.

"ಸರ್ ನಂದಿನಿ ಮಾಯವಾಗುತ್ತಿಲ್ಲ, ದಿನಕ್ಕೆ 20 ಸಾವಿರ ಲೀಟರ್ ಹಾಲಿನಿಂದ ಅಮುಲ್ ಐಸ್ಕ್ರೀಮ್ ತಯಾರಾಗುತ್ತಿದೆ. ಅದೇ ರೀತಿ ಆಂಧ್ರದ ದೊಡ್ಲ ಹಾಗೂ ತಮಿಳುನಾಡಿನ ಆರೋಗ್ಯ ಹಾಲು ರಾಜ್ಯದಲ್ಲಿ ಮಾರಾಟವಾಗುತ್ತಿವೆ, ಅವು ಏಕೆ ಕಣ್ಣಿಗೆ ಕಾಣುತ್ತಿಲ್ಲ. ನಿಮಗೆ ತಿಳಿ ಹೇಳುವಷ್ಟು ದೊಡ್ಡವನು ನಾನಲ್ಲ, ನನ್ನ ಅಭಿಪ್ರಾಯ ತಿಳಿಸಿದೆ ಮೇಷ್ಟ್ರೆ" ಎಂದು ಓರ್ವರು ಬರೆದುಕೊಂಡಿದ್ದಾರೆ. ಹೀಗೆ ಬಗೆಬಗೆಯಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: ಆರ್‌ಆರ್‌ಆರ್‌ ಆಯ್ತು, ಜೂ.ಎನ್‌ಟಿಆರ್ ಮುಂದಿನ ಸಿನಿಮಾಗಳು ಯಾವುವು?

ವಿವಾದವೇನು?: ಏಪ್ರಿಲ್​ 5ರಂದು (ಬುಧವಾರ) ಗುಜರಾತ್​ ಮೂಲದ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ಟ್ವೀಟ್​ ಒಂದನ್ನು ಮಾಡಿತ್ತು. ಬೆಂಗಳೂರಿನಲ್ಲಿ ತಾಜಾ ಹಾಲು ಲಭ್ಯವಾಗಲಿದೆ ಎಂದು ತಿಳಿಸಿತ್ತು. ಹಾಲು ಮತ್ತು ಮೊಸರು ಪೂರೈಕೆಗೆ ಆನ್​ಲೈನ್​​ ವೇದಿಕೆಗಳನ್ನು ಬಳಸಲಾಗುವುದೆಂದು ತಿಳಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ವಾಗ್ದಾಳಿಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ನಟಿ ವಿರುದ್ಧ ಅಶ್ಲೀಲ ಟ್ವೀಟ್: ಸಿನಿಮಾ ವಿಮರ್ಶಕ ಉಮೈರ್​ ಸಂಧುಗೆ ಸೆಲೀನಾ ಜೇಟ್ಲಿ ಕ್ಲಾಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.