ಪಣಜಿ (ಗೋವಾ): ಇಸ್ರೇಲ್ ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್‌ಎಫ್‌ಐ (ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ) 2022ರ ತೀರ್ಪುಗಾರರ ಮುಖ್ಯಸ್ಥ ನಡಾವ್ ಲಪಿಡ್ (Nadav Lapid) ಅವರು ಭಾರತದ ಸೂಪರ್ ಹಿಟ್ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು "ಪ್ರಚಾರ ಮತ್ತು ಅಶ್ಲೀಲ ಚಲನಚಿತ್ರ" ಎಂದು ಟೀಕಿಸಿದ್ದಾರೆ.
ಸೋಮವಾರ ಗೋವಾದಲ್ಲಿ ನಡೆದ 'ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ'ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಚಲನಚಿತ್ರೋತ್ಸವದಲ್ಲಿ ಈ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಪ್ರದರ್ಶನಗೊಳ್ಳುತ್ತಿರುವುದನ್ನು ನೋಡಿ ತೀರ್ಪುಗಾರರು "ವಿಚಲಿತರಾದರು ಮತ್ತು ಆಘಾತಕ್ಕೊಳಗಾಗಿದ್ದಾರೆ" ಎಂದು ನಡಾವ್ ಲಪಿಡ್ ಹೇಳಿದರು.
"ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರದಿಂದ ನಮಗೆಲ್ಲರಿಗೂ ಆಘಾತವಾಗಿದೆ. ಇದು ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲದ ಪ್ರಚಾರ ಮತ್ತು ಅಸಭ್ಯ ಚಲನಚಿತ್ರದಂತೆ ನಮಗೆ ಭಾಸವಾಯಿತು. ಚಿತ್ರೋತ್ಸವವು ವಿಮರ್ಶಾತ್ಮಕ ಚರ್ಚೆಯನ್ನು ನಿಜವಾಗಿಯೂ ಸ್ವೀಕರಿಸುತ್ತದೆ, ಈ ಸಿನಿಮಾ ನೋಡಿದಾಗಿನಿಂದ ನನಗೆ ಅಸಮಧಾನವಾಗಿಸದೆ" ಎಂದು ಲ್ಯಾಪಿಡ್ ಹೇಳಿದರು.
-
#Breaking: #IFFI Jury says they were “disturbed and shocked” to see #NationalFilmAward winning #KashmirFiles, “a propoganda, vulgar movie” in the competition section of a prestigious festival— organised by the Govt of India.
— Navdeep Yadav (@navdeepyadav321) November 28, 2022 " class="align-text-top noRightClick twitterSection" data="
🎤 Over to @vivekagnihotri sir…
@nadavlapi pic.twitter.com/ove4xO8Ftr
">#Breaking: #IFFI Jury says they were “disturbed and shocked” to see #NationalFilmAward winning #KashmirFiles, “a propoganda, vulgar movie” in the competition section of a prestigious festival— organised by the Govt of India.
— Navdeep Yadav (@navdeepyadav321) November 28, 2022
🎤 Over to @vivekagnihotri sir…
@nadavlapi pic.twitter.com/ove4xO8Ftr#Breaking: #IFFI Jury says they were “disturbed and shocked” to see #NationalFilmAward winning #KashmirFiles, “a propoganda, vulgar movie” in the competition section of a prestigious festival— organised by the Govt of India.
— Navdeep Yadav (@navdeepyadav321) November 28, 2022
🎤 Over to @vivekagnihotri sir…
@nadavlapi pic.twitter.com/ove4xO8Ftr
ಇದನ್ನೂ ಓದಿ: ಚೇತನ್ ಭಗತ್- ಉರ್ಫಿ ಜಾವೇದ್ ವಾಗ್ಯುದ್ಧ: ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರ
ದಿ ಕಾಶ್ಮೀರ್ ಫೈಲ್ಸ್ ಅನ್ನು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ ಮಾಡಲಾಗಿತ್ತು ಮತ್ತು ನವೆಂಬರ್ 22 ರಂದು ಪ್ರದರ್ಶಿಸಲಾಯಿತು. ವಿಶೇಷ ಪ್ರದರ್ಶನದಲ್ಲಿ ಅನುಪಮ್ ಖೇರ್ ಭಾಗವಹಿಸಿದ್ದರು, ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.