ETV Bharat / entertainment

ರಂಗಭೂಮಿ ಕಲಾವಿದನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಏಳು ಜನರಿಗೆ ಹೊಸ ಜೀವನ ಕೊಟ್ಟ ನಟ - Hiranmoy Ghoshal Organ Donation

ಹಿರಣ್ಮೊಯ್ ಘೋಷಾಲ್ ಮೆದುಳು ನಿಷ್ಕ್ರಿಯ - ರಂಗಭೂಮಿ ಕಲಾವಿದನ ಅಂಗಾಂಗ ದಾನ - ಏಳು ಜನರಿಗೆ ದಾರಿದೀಪ.

Hiranmoy Ghoshal Organ Donation
ಹಿರಣ್ಮೊಯ್ ಘೋಷಾಲ್ ಅಂಗಾಂಗ ದಾನ
author img

By

Published : Dec 31, 2022, 5:11 PM IST

54 ವರ್ಷದ ರಂಗಭೂಮಿ ಕಲಾವಿದನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗ ದಾನ ಮಾಡಿ ಕೊನೆ ಘಳಿಗೆಯಲ್ಲೂ ಮಾನವೀಯತೆ ಮೆರೆದಿದ್ದಾರೆ. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಹಿರಣ್ಮೊಯ್ ಘೋಷಾಲ್ (Hiranmoy Ghoshal) ಅವರ ಅಂಗಾಂಗ ದಾನ ಮಾಡಲಾಗಿದೆ. ಈ ಮೂಲಕ ಏಳು ಜನರಿಗೆ ಹೊಸ ಜೀವನ ನೀಡಿ ಅಂಗಾಂಗ ದಾನದಲ್ಲಿ ಮಾದರಿಯಾಗಿದ್ದಾರೆ.

ಬುರ್ದ್ವಾನ್‌ನ ಹತ್‌ಗೋಬಿಂದ್‌ಪುರದ ನಿವಾಸಿ ಹಿರಣ್ಮೊಯ್ ಘೋಷಾಲ್ ಅವರು ಬುಧವಾರ ಮಧ್ಯಾಹ್ನದ ಊಟದ ನಂತರ ಮೂರ್ಛೆ ಹೋದರು. ಆ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಅಲ್ಲಿಂದ ಅವರನ್ನು ಕೋಲ್ಕತ್ತಾದ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನರಶಸ್ತ್ರ ಚಿಕಿತ್ಸಕ ಸುನಂದನ್ ಬೋಸ್ ಅವರು ತಪಾಸಣೆ ನಡೆಸಿದಾಗ ಅವರ ಮೆದುಳಿನಲ್ಲಿ ರಕ್ತ ಸಂಗ್ರಹವಾಗಿರುವುದು ಕಂಡುಬಂದಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಹಿರಣ್ಮೊಯ್ ಘೋಷಾಲ್ ಅವರ ಸಹೋದರ, ಅವರು ಮೆದುಳು ನಿಷ್ಕ್ರಿಯಗೊಂಡಿತ್ತು. ಉಳಿದ ಎಲ್ಲಾ ಅಂಗಗಳು ಕಾರ್ಯನಿರ್ವಹಿಸುತ್ತಿದ್ದವು. ಮನೆಯವರೆಲ್ಲರೂ ಚರ್ಚಿಸಿ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದೆವು. ಏಕೆಂದರೆ ಅಂಗಾಂಗ ದಾನದಿಂದ ಮಾತ್ರ ಅವರು ಇತರರ ದೇಹದಲ್ಲಿ ವಾಸಿಸುತ್ತಾರೆ ಎಂದು ತಿಳಿಸಿದರು.

ಶುಕ್ರವಾರ ಕುಟುಂಬದ ಒಪ್ಪಿಗೆ ಪಡೆದ ನಂತರ, ವೈದ್ಯರ ತಂಡವು ಕಾರ್ಯಾಚರಣೆ ಪ್ರಾರಂಭಿಸಿತು. ಘೋಷಾಲ್‌ ಅವರ ಕಾರ್ನಿಯಾ, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಮತ್ತು ಹೃದಯವನ್ನು ದಾನಕ್ಕಾಗಿ ಪಡೆಯಲಾಯಿತು. ಏತನ್ಮಧ್ಯೆ, ದೇಶಾದ್ಯಂತ ವಿವಿಧ ರೋಗಿಗಳಿಗೆ ಅಂಗಗಳನ್ನು ಸುರಕ್ಷಿತವಾಗಿ ಸಾಗಿಸಲು ಸಹಾಯಕ್ಕಾಗಿ ಪ್ರಾದೇಶಿಕ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ROTTO) ಅನ್ನು ಸಂಪರ್ಕಿಸಲಾಯಿತು. ಹಿರಣ್ಮೊಯ್ ಘೋಷಾಲ್ ಅವರ ಶ್ವಾಸಕೋಶವನ್ನು ಚೆನ್ನೈಗೆ ಕಳುಹಿಸಲಾಗಿದೆ, ಅವರ ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ನಗರದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಅವರ ಕಾರ್ನಿಯಾವನ್ನು ಕೋಲ್ಕತ್ತಾದ ಶಂಕರ್ ನೇತ್ರಾಲಯ ಆಸ್ಪತ್ರೆಗೆ ಸಾಗಿಸಲಾಗಿದೆ. ಒಬ್ಬ ವ್ಯಕ್ತಿಯಿಂದ ಇಷ್ಟು ಜೀವಗಳನ್ನು ಉಳಿಸಿರುವುದು ರಾಜ್ಯದಲ್ಲಿ ಮತ್ತು ಪೂರ್ವ ಭಾರತದಲ್ಲಿ ಇದೇ ಮೊದಲು ಎಂದು ವೈದ್ಯರು ನಂಬುತ್ತಾರೆ.

ಇದನ್ನೂ ಓದಿ: 2022 ವರ್ಷದ ಕೊನೆಯ ಪೋಟೋ ಹಂಚಿಕೊಂಡ ವಿರುಷ್ಕಾ ದಂಪತಿ

ಖಾಸಗಿ ಆಸ್ಪತ್ರೆಯ ಉಪ ವೈದ್ಯಕೀಯ ನಿರ್ದೇಶಕ ಅಮಿತ್ ರಾಯ್ ಮಾತನಾಡಿ, ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರೆ, ಅನೇಕ ಜೀವಗಳನ್ನು ಉಳಿಸಬಹುದು. ನಾವು ಅದನ್ನು ಮಾಡುತ್ತಿದ್ದೇವೆ. ಘೋಷಾಲ್​​ ಕುಟುಂಬದಂತೆ ಇತರರು ಸಹ ಮುಂದೆ ಬರುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪವಿತ್ರ ಬಂಧನಕ್ಕೆ ತೆಲುಗು ನಟ ನರೇಶ್ ಸಜ್ಜು.. ವಿಡಿಯೋ ಮೂಲಕ ಶುಭಸುದ್ದಿ ಹಂಚಿಕೊಂಡ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.