ETV Bharat / entertainment

ವಿಘ್ನೇಶ್ ಶಿವನ್ ಟೀ ಶರ್ಟ್‌ ಮೇಲೆ ಧೋನಿ ಆಟೋಗ್ರಾಫ್​..'ಕ್ರಿಕೆಟಿಗ ನನ್ನ ನಾಯಕ' ಎಂದ ನಿರ್ದೇಶಕ - ಎಲ್‌ಜಿಎಂ

ನಿರ್ದೇಶಕ ವಿಘ್ನೇಶ್ ಶಿವನ್ ಅವರ ಟೀ ಶರ್ಟ್ ಮೇಲೆ ಕ್ರಿಕೆಟಿಗ ಎಂ.ಎಸ್​ ಧೋನಿ ಆಟೋಗ್ರಾಫ್​ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ms dhoni autograph on vignesh shivan t shirt
ವಿಘ್ನೇಶ್ ಶಿವನ್ ಟೀ ಶರ್ಟ್‌ ಮೇಲೆ ಧೋನಿ ಆಟೋಗ್ರಾಫ್
author img

By

Published : Jul 12, 2023, 7:51 PM IST

ದಕ್ಷಿಣ ಚಿತ್ರರಂಗದ ಪ್ರತಿಭಾವಂತ ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಭಾರತೀಯ ಕ್ರಿಕೆಟ್​ ತಂಡದ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಂದ ಆಟೋಗ್ರಾಫ್ ಪಡೆದಿದ್ದಾರೆ. ಸುಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಾನೂ ಕೂಡ ಎಂ.ಎಸ್​ ಧೋನಿ ಅವರ ಕಟ್ಟಾ ಅಭಿಮಾನಿ ಎಂದು ತಿಳಿಸಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡ ನಿರ್ದೇಶಕರು, ಧೋನಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಶೇರ್ ಆಗಿರುವ ವಿಡಿಯೋದಲ್ಲಿ, ಧೋನಿ ಅವರು ವಿಘ್ನೇಶ್​ ಅವರ ಬಿಳಿ ಟೀ ಶರ್ಟ್‌ ಮೇಲೆ ತಮ್ಮ ಆಟೋಗ್ರಾಫ್​ ಹಾಕುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿ ಮೆಚ್ಚುಗೆ ಗಳಿಸಿದೆ. ಪ್ರತಿಭಾವಂತರು, ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟಿಗ ಮತ್ತು ನಿರ್ದೇಶಕರಿಗೆ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ನಿರ್ದೇಶಕ ವಿಘ್ನೇಶ್ ಶಿವನ್, ''ನನ್ನ ನಾಯಕ, ನನ್ನ ರೋಲ್ ಮಾಡೆಲ್. ಪರಿಶುದ್ಧ ಆತ್ಮದ ಜೊತೆಗಿರುವುದು ಒಂದು ಭಾವನಾತ್ಮಕ ಕ್ಷಣ. ನಾನು ಬಹಳ ಪ್ರೀತಿಸುವ ಮತ್ತು ಪ್ರತಿ ದಿನ ನೋಡುತ್ತಿರುವ ವ್ಯಕ್ತಿ. ನಾನು ಅವರನ್ನು ನೋಡಿದಾಗಲೆಲ್ಲ ನನ್ನ ಮೊಗದಲ್ಲಿ ಬರುವ ಉತ್ಸಾಹವನ್ನು ನೋಡಲು ಬಹಳ ಸಂತೋಷವಾಗಿದೆ'' ಎಂದು ಬರೆದುಕೊಂಡಿದ್ದಾರೆ.

ವಿಘ್ನೇಶ್ ಶಿವನ್ ಕ್ರಿಕೆಟಿಗನ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವ ವೇಳೆ ಕಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ಬಗ್ಗೆಯೂ ಮಾತನಾಡಿದ್ದಾರೆ. ತಮಿಳಿನಲ್ಲಿ ಲೆಟ್ಸ್ ಗೆಟ್ ಮ್ಯಾರೀಡ್ (ಎಲ್‌ಜಿಎಂ) ಮೂಲಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ನಿರ್ಮಾಪಕರಾಗಿ ಹೊರ ಹೊಮ್ಮುತ್ತಿದ್ದಾರೆ. ಧೋನಿ ದಂಪತಿ ನಿರ್ಮಾಣದಲ್ಲಿ ಬರುತ್ತಿರುವ ಚೊಚ್ಚಲ ಚಿತ್ರವಿದು. ರಮೇಶ್ ತಮಿಳ್ಮಣಿ ನಿರ್ದೇಶನದ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಚಿತ್ರ ಇದಾಗಿದ್ದು, ಹರೀಶ್ ಕಲ್ಯಾಣ್, ಇವಾನಾ, ನಾದಿಯಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳೇ ಕೇಳಿ, ಮೂಡಿಬರಲಿದೆ 'ಘೋಸ್ಟ್ 2': ಹ್ಯಾಟ್ರಿಕ್​ ಹೀರೋ ಮುಂದಿನ ಸಿನಿಮಾಗಳು ಹೀಗಿವೆ

ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ಕ್ರಿಕೆಟ್ ಐಕಾನ್ ಎಂ.ಎಸ್ ಧೋನಿ ತಮಿಳು ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕಾಲಿವುಡ್‌ನಲ್ಲಿ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಲು ಸಿದ್ಧರಿರುವುದಾಗಿ ಅಧಿಕೃತವಾಗಿ ಘೋಷಿಸಿದರು. ಎಲ್‌ಜಿಎಂ ಚಿತ್ರಕ್ಕೆ ವಿಶ್ವಜಿತ್ ಸಂಗೀತ ಸಂಯೋಜನೆ ಮಾಡಿದ್ದು, ಪ್ರದೀಪ್ ರಾಘವ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ 'ಜವಾನ್​​' ವೀಕ್ಷಿಸುತ್ತೇನೆ: ಶಾರುಖ್​​ ಗುಣಗಾನ ಮಾಡಿದ ಸಲ್ಮಾನ್​ ಖಾನ್

ಇತ್ತೀಚೆಗಷ್ಟೇ 'ಲೆಟ್ಸ್ ಗೆಟ್ ಮ್ಯಾರಿಡ್' ಟ್ರೇಲರ್​​ ರಿಲೀಸ್​ ಈವೆಂಟ್​ ಚೆನ್ನೈನಲ್ಲಿ ನಡೆಯಿತು. ಧೋನಿ ಮತ್ತು ಸಾಕ್ಷಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೇಲರ್​ ಅನಾವರಣಗೊಳಿಸಿದರು. ಟ್ರೇಲರ್​ನಲ್ಲಿ ಪ್ರಮುಖ ನಟರ ಅಭಿನಯ ಪ್ರೇಕ್ಷಕರ ಗಮನ ಸೆಳೆದಿದೆ. ಅವಿಭಕ್ತ ಕುಟುಂಬ, ಮದುವೆಯ ಕಥೆಯನ್ನು ಈ ಚಿತ್ರ ಒಳಗೊಂಡಿರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.