ETV Bharat / entertainment

'ಮೂವಿಂಗ್ ಇನ್ ವಿತ್ ಮಲೈಕಾ' ಶೋನಲ್ಲಿ ವಿಚ್ಛೇದನದ ಕಣ್ಣೀರು

ನಟಿ ಮಲೈಕಾ ಅರೋರಾ ಅವರ ಮೊದಲ ಶೋ 'ಮೂವಿಂಗ್ ಇನ್ ವಿತ್ ಮಲೈಕಾ' ಡಿಸೆಂಬರ್ 5ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

Moving in with Malaika show begins
ಅರ್ಬಾಜ್ ಖಾನ್​​ರಿಂದ ವಿಚ್ಛೇದನ ಪಡೆದ ಮಲೈಕಾ
author img

By

Published : Dec 6, 2022, 8:13 PM IST

ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಮೊದಲ ಶೋ 'ಮೂವಿಂಗ್ ಇನ್ ವಿತ್ ಮಲೈಕಾ' ಡಿಸೆಂಬರ್ 5ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಮಲೈಕಾ ತಮ್ಮ ಮೊದಲ ಶೋನಲ್ಲೇ ಜೀವನದ ಸೀಕ್ರೆಟ್​ಗಳನ್ನು ಬಹಿರಂಗಪಡಿಸುವ ಮೂಲಕ ಚಲನಚಿತ್ರ ಜಗತ್ತು ಮತ್ತು ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.

'ಮೂವಿಂಗ್ ಇನ್ ವಿತ್ ಮಲೈಕಾ' ಚೊಚ್ಚಲ ಶೋನಲ್ಲಿ ಬಾಲಿವುಡ್‌ನ ಪ್ರಸಿದ್ಧ ನೃತ್ಯ ನಿರ್ದೇಶಕಿ ಫರಾ ಖಾನ್ ಮತ್ತು ಮಲೈಕಾ ಅರೋರಾ ಪರಸ್ಪರ ಮಾತನಾಡಿದರು. ವೃತ್ತಿಪರ ಮತ್ತು ವೈಯಕ್ತಿಕ ರಹಸ್ಯಗಳನ್ನು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಯಿತು. ಅರ್ಬಾಜ್ ಖಾನ್ ಜೊತೆಗಿನ ತನ್ನ ವಿಚ್ಛೇದನದ ಕಾರಣವನ್ನು ಮಲೈಕಾ ಮೊದಲ ಸಂಚಿಕೆಯಲ್ಲಿಯೇ ತಿಳಿಸಿದರು. ಅದೇ ಸಮಯದಲ್ಲಿ ಹಾಲಿ ಗೆಳೆಯ ಅರ್ಜುನ್ ಕಪೂರ್ ಜೊತೆಗಿನ ಮದುವೆ ಮತ್ತು ಮಕ್ಕಳ ಕುರಿತಾಗಿ ತನ್ನ ಭವಿಷ್ಯದ ಯೋಜನೆಗಳೇನು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

Moving in with Malaika show begins
'ಚೈಯಾ ಚೈಯಾ' ಹಾಡಿನಲ್ಲಿ ಮಲೈಕಾ ಅರೋರಾ

'ಚೈಯ್ಯಾ ಚೈಯ್ಯಾ' ಹಾಡಿಗೆ ಆಯ್ಕೆ: ಶಾರುಖ್ ಖಾನ್ ಮತ್ತು ಮನಿಶಾ ಕೊಯಿರಾಲಾ ಅಭಿನಯದ, ಮಣಿರತ್ನಂ ನಿರ್ದೇಶನದ 'ದಿಲ್ ಸೇ' ಚಿತ್ರದ 'ಚೈಯಾ ಚೈಯಾ' ಹಾಡಿನಲ್ಲಿ ಶಾರುಖ್ ಖಾನ್ ಅವರೊಂದಿಗೆ ನೃತ್ಯ ಮಾಡಲು ಮಲೈಕಾ ಅರೋರಾ ಮೊದಲ ಆಯ್ಕೆಯಾಗಿರಲಿಲ್ಲ. ಹೌದು, ಶೋನಲ್ಲಿ ಮಾತನಾಡುತ್ತಾ ಫರಾ ಖಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 'ಚೈಯ್ಯಾ ಚೈಯ್ಯಾ' ಹಾಡಿಗೆ ಶಿಲ್ಪಾ ಶೆಟ್ಟಿ ಮತ್ತು ಶಿಲ್ಪಾ ಶಿರೋಡ್ಕರ್ ಆಯ್ಕೆಯ ಸಾಲಿನಲ್ಲಿದ್ದರು. ಆದರೆ ಮಲೈಕಾ ಆ ಪಾತ್ರವನ್ನು ಪಡೆದರು ಎಂದು ಫರಾ ಖಾನ್ ಹೇಳಿದ್ದಾರೆ. ಶಾರುಖ್ ಮತ್ತು ಮಲೈಕಾ ಅವರ ಈ ಹಾಡು ಎಂದಿಗೂ ಎವರ್ ಗ್ರೀನ್. ತಾನು ದಪ್ಪಗಿರುವ ಕಾರಣದಿಂದ ಈ ಪಾತ್ರ ಸಿಗಲಿಲ್ಲ ಎಂದು ಶಿಲ್ಪಾ ಶಿರೋಡ್ಕರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ರೈಲಿನ ಮೇಲೆ ಈ ಸಾಂಗ್‌ಗೆ ಡ್ಯಾನ್ಸ್​​ ಮಾಡಬೇಕಿದ್ದ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ ಆ ಪಾತ್ರವನ್ನು ಮಾಡಲು ನಿರಾಕರಿಸಿದ್ದರು.

ಏಕೆ ಸಿನಿಮಾದಲ್ಲಿ ಕೆಲಸ ಮಾಡಲಿಲ್ಲ?: 'ಚೈಯ್ಯಾ ಚೈಯ್ಯಾ' ಎಂಬ ಸೂಪರ್‌ಹಿಟ್ ಹಾಡಿನ ನಂತರ, ಮಲೈಕಾ ಅರೋರಾ ಚಲನಚಿತ್ರಗಳು ಮತ್ತು ಹಾಡುಗಳಲ್ಲಿ ವಿರಳವಾಗಿ ಕಾಣಿಸಿಕೊಂಡರು. ಈ ಬಗ್ಗೆ ಫರಾ ಖಾನ್ ಅವರು ಮಲೈಕಾ ಅವರ ಕಾರಣವನ್ನು ತಿಳಿದುಕೊಳ್ಳಲು ಬಯಸಿದಾಗ 'ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಸಂಭಾಷಣೆಗಳನ್ನು ಹೇಳಲು ನನಗೆ ತುಂಬಾ ಕಷ್ಟವಾಗುತ್ತದೆ, ಏಕೆಂದರೆ ಚಲನಚಿತ್ರ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ನಂತರ ಸೆಟ್‌ನಲ್ಲಿ ಅನೇಕ ಜನರ ಮುಂದೆ ಮಾತನಾಡುವುದು ಅಷ್ಟು ಸುಲಭವಲ್ಲ, ನನಗೆ ಭಾವನೆಗಳೊಂದಿಗೆ ಡೈಲಾಗ್ಸ್​ ಹೇಳುವುದು ಸಹ ಸಾಧ್ಯವಿಲ್ಲ ಎಂದು ತಿಳಿಸಿದರು.

Moving in with Malaika show begins
ಮಗ ಅರ್ಹಾನ್ ಖಾನ್​ನೊಂದಿಗೆ ಮಲೈಕಾ

'ಮೂವಿಂಗ್ ಇನ್ ವಿತ್ ಮಲೈಕಾ' ಶೋಗೆ ಸ್ಫೂರ್ತಿಯೇನು?: 49 ವರ್ಷದ ಮಲೈಕಾ ಮೊದಲ ಬಾರಿಗೆ ಶೋ ಮಾಡಿದ್ದಾರೆ. ಇಷ್ಟು ಸುದೀರ್ಘ ಅವಧಿಯಲ್ಲಿ ಅವರು ಕೆಲವೇ ಚಲನಚಿತ್ರಗಳಲ್ಲಿ, ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಗ ಅರ್ಹಾನ್ ಖಾನ್ ಈ ಕಾರ್ಯಕ್ರಮಕ್ಕೆ ಸಾಕಷ್ಟು ಬೆಂಬಲ ನೀಡಿದ್ದು, ಶೋವೊಂದನ್ನು ಮಾಡಬೇಕೆಂಬ ಆಸೆಯಿಂದ ಈ ಕಾರ್ಯಕ್ರಮ ಮಾಡಿದ್ದೇನೆ ಎಂದು ತಿಳಿಸಿದರು.

ಅರ್ಬಾಜ್ ಖಾನ್ಇಂದ ವಿಚ್ಛೇದನ: ನಟ ಅರ್ಬಾಜ್ ಖಾನ್ ಜೊತೆಗಿನ ತನ್ನ 19 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್​ಸ್ಟಾಪ್ ಇಟ್ಟಿರುವ ಬಗ್ಗೆ ನಿಜವಾದ ಕಾರಣವನ್ನು ಮಲೈಕಾ ಅರೋರ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ. ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಮತ್ತು ಜಗಳಗಳಿದ್ದವು. ನಾನು ಜೀವನದಲ್ಲಿ ವಿಭಿನ್ನ ಕೆಲಸಗಳನ್ನು ಮಾಡಲು ಬಯಸಿದ್ದೆ. 'ದಬಾಂಗ್' ಚಿತ್ರ ಬಿಡುಗಡೆಯಾಗುವವರೆಗೂ ನಮ್ಮ ನಡುವೆ ಎಲ್ಲವೂ ಚೆನ್ನಾಗಿತ್ತು, ಆದರೆ ಅದರ ನಂತರ ನಮ್ಮಲ್ಲಿ ಕೆಲ ಭಿನ್ನಾಭಿಪ್ರಾಯಗಳು ಜೋರಾದವು. ಬಳಿಕೆ ಬೇರೆಯಾಗಲು ನಿರ್ಧರಿಸಿದೆವು ಎಂದು ಹೇಳಿ ನಟಿ ಮಲೈಕಾ ಅರೋರ ಭಾವುಕರಾದರು.

Moving in with Malaika show begins
ಗೆಳೆಯ ಅರ್ಜುನ್​ ಕಪೂರ್​​ ಅವರೊಂದಿಗೆ ಮಲೈಕಾ

ಬಾಯ್‌ಫ್ರೆಂಡ್ ಅರ್ಜುನ್ ಜೊತೆಗಿನ ಸಂಬಂಧದ ವಿಚಾರವಾಗಿ ಮಲೈಕಾ ನಿರಂತರವಾಗಿ ಟ್ರೋಲ್ ಆಗುತ್ತಿದ್ದಾರೆ. ಬಹುಶಃ ಈ ಕಾರಣಕ್ಕಾಗಿಯೇ ಮಲೈಕಾ ಟ್ರೋಲರ್‌ಗಳಿಗೆ ಉತ್ತರಿಸಲು ತನ್ನದೇ ಆದ ಕಾರ್ಯಕ್ರಮವನ್ನು ತಂದಿದ್ದಾರೆ. ಈ ಶೋನ ಪ್ರೋಮೋದಲ್ಲಿ ಕೂಡ ಆ ವಿಷಯ ಪ್ರಸ್ತಾಪವಾಗಿತ್ತು. ಫರಾ ಖಾನ್ ಅವರು ಮಲೈಕಾ ಅವರೊಂದಿಗೆ ಈ ಬಗ್ಗೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಅವರು ಪ್ರಸ್ತುತ ಗೆಳೆಯ ಅರ್ಜುನ್ ಕಪೂರ್ ಅವರನ್ನು 'ತುಂಬಾ ಕಾಳಜಿಯುಳ್ಳವರು' ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ತಮಿಳು ನಿರ್ಮಾಪಕರ ಜೊತೆ ಸುದೀಪ್ ಹೊಸ ಸಿನಿಮಾ?

ಟ್ರೋಲ್​ ವಿಚಾರವಾಗಿ ಮಾತನಾಡಿದ ಮಲೈಕಾ, ಇದು ನನಗೆ ತುಂಬಾ ಕಷ್ಟ. ಪ್ರತಿದಿನ ನಾನು ಕೆಲವು ರೀತಿಯ ನಿಂದೆಗಳನ್ನು ಎದುರಿಸಬೇಕಾಗುತ್ತದೆ. ನೀವು ಅರ್ಜುನ್ ಕಪೂರ್‌ಗಿಂತ ತುಂಬಾ ದೊಡ್ಡವರು ಎಂಬ ಮಾತು ಪ್ರತಿದಿನ ಕೇಳಸಿಗುತ್ತದೆ. ಆದರೆ ಒಬ್ಬ ವ್ಯಕ್ತಿ ತನಗಿಂತ 20 ಅಥವಾ 30 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾದಾಗ ಅವನು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾನೆ. ತಮಗಿಂತ ದೊಡ್ಡ ರಾಜನಿಲ್ಲ ಎಂದು ಅವರು ಭಾವಿಸುತ್ತಾರೆ, ಆದರೆ ಮಹಿಳೆ ತನಗಿಂತ ಕಿರಿಯ ಹುಡುಗನೊಂದಿಗೆ ಸೇರಿದಾಗ ಅದು ಕೆಟ್ಟದು ಎಂದು ಕರೆಯಲ್ಪಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

'ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ನನ್ನವರೇ ಹೆಚ್ಚು ವ್ಯಂಗ್ಯವಾಡಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನನಗೆ ಹೊರಗಿನವರ ಬಗ್ಗೆ ಚಿಂತೆ ಇಲ್ಲ. ಆದರೆ ನಮ್ಮವರೇ ಮಾತನಾಡಿದಾಗ ಬೇಸರವಾಗುವುದು ಸಹಜ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.