ETV Bharat / entertainment

'9 ದಿನ ಆಸ್ಪತ್ರೆಯಲ್ಲಿ..' ಪತಿ ಜೊತೆಗಿನ ಫೋಟೋ ಹಂಚಿಕೊಂಡು ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಮೌನಿ ರಾಯ್​ - ಈಟಿವಿ ಭಾರತ ಕನ್ನಡ

ಮೌನಿ ರಾಯ್, ಪತಿ ಸೂರಜ್ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ನಟಿಯ ಕೈಗೆ ಡ್ರಿಪ್ ಸೆಟ್ ಸಿರಿಂಜ್ ಅನ್ನು ಹಾಕಲಾಗಿದೆ.

Mouni Roy
ಮೌನಿ ರಾಯ್​
author img

By

Published : Jul 22, 2023, 3:59 PM IST

ಹಿಂದಿ ಕಿರುತೆರೆ ನಟಿ ಮೌನಿ ರಾಯ್​ ತಮ್ಮ ಅದ್ಭುತ ಲುಕ್​ನಿಂದಲೇ ಸದಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ನಟನೆ, ಫ್ಯಾಷನ್​ನಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ, ಕೆಲವು ದಿನಗಳಿಂದ ಇವರು ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಇರಲಿಲ್ಲ. ಮೂರು ದಿನಗಳ ಹಿಂದೆ ಒಂದು ಪೋಸ್ಟ್​ ಹಂಚಿಕೊಂಡಿದ್ದರು. ಅದು ವೈಯಕ್ತಿಕವಲ್ಲದೇ, ವೃತ್ತಿಪರವಾಗಿತ್ತು. ಇದೀಗ ನಟಿ ಶೇರ್​ ಮಾಡಿರುವ ಫೋಟೋ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದೆ.

​ಮೌನಿ ರಾಯ್ ಅವರು ಪತಿ ಸೂರಜ್ ನಂಬಿಯಾರ್ ಅವರೊಂದಿಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ನಟಿಯ ಕೈಗೆ ಡ್ರಿಪ್ ಸೆಟ್ ಸಿರಿಂಜ್ ಅನ್ನು ಹಾಕಲಾಗಿದೆ. ಇದನ್ನು ಕಂಡ ಅವರ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಮೌನಿ ರಾಯ್ ಈ ಪೋಸ್ಟ್‌ನೊಂದಿಗೆ ತಮ್ಮ ಆರೋಗ್ಯದ ಚೇತರಿಕೆ ಬಗ್ಗೆ ಹೇಳಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಮೌನಿ ರಾಯ್ ಪೋಸ್ಟ್​: "9 ದಿನ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ನಾನು ಎಲ್ಲಕ್ಕಿಂತ ಆಂತರಿಕವಾಗಿ ಹೆಚ್ಚು ಸಂತೋಷವಾಗಿದ್ದೇನೆ. ನಾನು ಈಗ ಮನೆಗೆ ಮರಳಿದ್ದೇನೆ ಮತ್ತು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಸಂತೋಷದ ಆರೋಗ್ಯಕರ ಜೀವನ ಮುಖ್ಯ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ಇದ್ದು ಕಾಳಜಿ ವಹಿಸಿದ್ದಕ್ಕಾಗಿ ಮತ್ತು ನನ್ನೊಂದಿಗೆ ಇದ್ದ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಸೂರಜ್, ಜಗತ್ತಿನಲ್ಲಿ ನಿನ್ನಂತೆ ಯಾರೂ ಇಲ್ಲ, ನಾನು ನಿಮಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ, ಓಂ ನಮಃ ಶಿವಾಯ." ಎಂದು ಹೇಳಿದ್ದಾರೆ. ಆದರೆ ತನಗೇನಾಗಿತ್ತು ಎಂಬುದನ್ನು ನಟಿ ಬಹಿರಂಗಪಡಿಸಿಲ್ಲ.

ಬಹುಬೇಡಿಕೆಯ ತಾರೆ.. 2006 ರಲ್ಲಿ 'ಕ್ಯೂಂಕಿ ಸಾಸ್​ ಬಿ ಕಬಿ ಬಹು ತಿ' ಎಂಬ ಟಿವಿ ಧಾರಾವಾಹಿ ಮೂಲಕ ನಟಿ ಮೌನಿ ರಾಯ್​ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 2011 ರಲ್ಲಿ ಪಂಜಾಬಿ ಸಿನಿಮಾ 'ಹೀರೋ ಹಿಟ್ಲರ್​​ ಇನ್​ ಲವ್'ನಲ್ಲಿ ಮೊದಲ ಬಾರಿಗೆ ನಟಿಸಿದರು. ಇತ್ತೀಚೆಗೆ 'ದೊತರಾ' ಎಂಬ ಮ್ಯೂಸಿಕ್​ ಆಲ್ಭಂನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆ ಆಲ್ಭಂ ಸಾಂಗ್​ಗೆ ಜುಬಿನ್​ ನೌಟಿಯಾಲ್​ ಮತ್ತು ಪಯಲ್​ ದೇವಿ ಧ್ವನಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಈ ವಿಡಿಯೋ ಯುಟ್ಯೂಬ್​ನಲ್ಲಿ 24 ಮಿಲಿಯನ್ ಹೆಚ್ಚು​ ವಿವ್ಯೂ ಗಳನ್ನು ಪಡೆದುಕೊಂಡಿದೆ.

ಮೌನಿ ರಾಯ್ ಕೊನೆಯದಾಗಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಅಬ್ಬಸ್​ ಆಲಿಬಾಯಿ ಬುರ್ಮಾವಾಲಾ ಮಸ್ತನ್​ ಮತ್ತು ಆಲಿಬಾಯ್​ ಬುರ್ಮಾವಾಲಾ ಅವರ ಕ್ರೈಂ, ಸಸ್ಪೆನ್ಸ್​, ಥ್ರಿಲ್ಲರ್​ ಚಿತ್ರ 'ಪೆಂಟಾಹೌಸ್'​ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್​ ಮತ್ತು ಅರ್ಜುನ್​ ರಾಂಪಾಲ್​ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇದರ ಜೊತೆಗೆ ನಟಿ, ಸಂಜಯ್​ ದತ್​ ಅವರ 'ದಿ ವರ್ಜಿನ್​ ಟ್ರೀ ಇನ್​ ಆರ್​​ ಕಿಟ್ಟಿ'ಯಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. 'ಕೆಜಿಎಫ್'​ ಚಿತ್ರದ ಹಿಂದಿ ವರ್ಷನ್​ನಲ್ಲಿ ನಟಿ ಪ್ರಮುಖ ಹಾಡಿಗೆ ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ: Mouni Roy: ಸೀರೆಯುಟ್ಟು ಮೈ ಬಳುಕಿಸಿದ ಮೌನಿ ಸೌಂದರ್ಯದ ಖನಿ! - Photos ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.