ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್- 2 ಸಿನಿಮಾಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಬಿಡುಗಡೆ ಮಳೆ ಜೋರಾಗಿದೆ. ಚಿತ್ರಮಂದಿರಗಳ ಕಡೆ ಸಿನಿಮಾ ಪ್ರೇಕ್ಷಕರು ಬಾರದಿದ್ರೂ ಸಿನಿಮಾ ನಿರ್ಮಾಪಕರು ಜಿದ್ದಿಗೆ ಬಿದ್ದವರಂತೆ ಒಂದು ವಾರಕ್ಕೆ 8 ರಿಂದ 9 ಸಿನಿಮಾಗಳನ್ನ ಬಿಡುಗಡೆ ಮಾಡುತ್ತಿದ್ದಾರೆ.
ಕಳೆದ ವಾರವಷ್ಟೇ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬರೋಬ್ಬರಿ 11 ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವ ಮೂಲಕ ದಾಖಲೆ ಬರೆದಿತ್ತು. ಇದೀಗ ಈ ವಾರವೂ ಕೂಡ ಸ್ಯಾಂಡಲ್‌ವುಡ್ ಸಿನಿಮಾಗಳ ಬಿಡುಗಡೆ ಮಳೆ ಜೋರಾಗಿದೆ.
![ಪ್ರೀತ್ಸು](https://etvbharatimages.akamaized.net/etvbharat/prod-images/kn-bng-01-sandalwoodnali-this-week-cinemagala-suggi-7204735_27052022104644_2705f_1653628604_609.jpg)
ಈ ವಾರ ಕೂಡ ಸ್ಟಾರ್ ನಟ ಲೂಸ್ ಮಾದ ಯೋಗಿ ಕಿರಿಕ್ ಶಂಕರ ಸಿನಿಮಾವನ್ನ ಹೊರತುಪಡಿಸಿದರೆ ಇನ್ನು ಎಂಟು ಸಿನಿಮಾಗಳು ಹೊಸ ನಟ, ನಟಿಯರ ಚಿತ್ರಗಳು ಪ್ರೇಕ್ಷಕರಿಗೆ ದರ್ಶನ ಕೊಡ್ತಾ ಇವೆ. ಅಂಕಿ-ಅಂಶಗಳ ಪ್ರಕಾರ, ಲೂಸ್ ಮಾದ ಯೋಗಿ ಅಭಿನಯದ ಕಿರಿಕ್ ಶಂಕರ, ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಅಭಿನಯದ ಕಾಣೆಯಾದವರ ಬಗ್ಗೆ ಪ್ರಕಟಣೆ, ಶಶಿಕುಮಾರ್ ಪುತ್ರನ ಸೀತಾಯಣ, ವ್ಹೀಲ್ ಚೇರ್ ರೋಮಿಯೋ, ಪಿಸಿಕ್ ಟೀಸರ್, ಪ್ರೀತ್ಸು, ಧೀರನ್ ಹಾಗೂ ಅಂಜನ್ ಜೊತೆಗೆ ತೆಲುಗು ನಟ ವಿಕ್ಟರಿ ವೆಂಕಟೇಶ್ ಅಭಿನಯದ ಎಫ್-3 ಸಿನಿಮಾ ಸೇರಿದಂತೆ ಬರೋಬ್ಬರಿ 9 ಚಿತ್ರಗಳು ಬಿಡುಗಡೆ ಆಗುತ್ತಿವೆ.
![Physics Teacher Cinema Poster](https://etvbharatimages.akamaized.net/etvbharat/prod-images/kn-bng-01-sandalwoodnali-this-week-cinemagala-suggi-7204735_27052022104644_2705f_1653628604_135.jpg)
ಈ ಒಂಬತ್ತು ಸಿನಿಮಾಗಳಲ್ಲಿ ಯೋಗಿ ನಟನೆಯ ಕಿರಿಕ್ ಶಂಕರ, ಸ್ಯಾಂಡಲ್ವುಡ್ನಲ್ಲಿ ಭರವಸೆ ಹುಟ್ಟಿಸಿದೆ. ಈ ಚಿತ್ರದ ಬಳಿಕ ಸ್ವಲ್ಪ ಮಟ್ಟಿಗೆ ಸದ್ದು ಮಾಡುತ್ತಿರುವ ಚಿತ್ರ ಕಾಣೆಯಾದವರ ಬಗ್ಗೆ ಪ್ರಕಟಣೆ. ರ್ಯಾಂಬೋ 2 , ಕೃಷ್ಣರುಕ್ಕು ಸಿನಿಮಾಗಳನ್ನ ನಿರ್ದೇಶನ ಮಾಡಿ ಗಮನ ಸೆಳೆದಿರೋ ಅನಿಲ್ ಕುಮಾರ್, ನಿರ್ದೇಶನದ ಜೊತೆಗೆ ಫಸ್ಟ್ ಟೈಮ್ ಆ್ಯಕ್ಟಿಂಗ್ ಮಾಡಿರೋ ಸಿನಿಮಾ ಇದು.
ಸ್ಯಾಂಡಲ್ವುಡ್ನ ಬಹು ಬೇಡಿಕೆಯ ಪೋಷಕ ಕಲಾವಿದರಾದ ರಂಗಾಯಣ ರಘು, ಆರ್ಮುಗಂ ರವಿಶಂಕರ್, ತಬಲ ನಾಣಿ ಹಾಗೂ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿರುವ ಚಿತ್ರವಾಗಿದೆ. ಇದರ ಜೊತೆಗೆ ಶಶಿಕುಮಾರ್ ಸುಪುತ್ರ ಅಕ್ಷಿತ್ ಶಶಿಕುಮಾರ್ ನಟಿಸಿರೋ ಸೀತಾಯಣ ಚಿತ್ರ. ಶಶಿಕುಮಾರ್ ಮಗನ ಮೊದಲ ಸಿನಿಮಾ ಆದ್ದರಿಂದ ಸಹಜವಾಗಿ ನಿರೀಕ್ಷೆ ಇದೆ. ಇನ್ನುಳಿದಂತೆ ಹೊಸ ನಟ ವ್ಹೀಲ್‌ಚೇರ್ ರೋಮಿಯೋ, ಪಿಸಿಕ್ ಟೀಚರ್, ಪ್ರೀತ್ಸು, ಧೀರನ್ ಹಾಗೂ ಅಂಜನ್ ಚಿತ್ರಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿವೆ.
![wheel chair romeo](https://etvbharatimages.akamaized.net/etvbharat/prod-images/kn-bng-01-sandalwoodnali-this-week-cinemagala-suggi-7204735_27052022104644_2705f_1653628604_428.jpg)
ಚಿತ್ರಮಂದಿರಗಳಿಂದ 3ನೇ ದಿನಕ್ಕೆ 9 ಸಿನಿಮಾ ಹೊರಗೆ : ಹೀಗೆ ವಾರಕ್ಕೆ 8 ರಿಂದ 9 ಸಿನಿಮಾಗಳು ಬಿಡುಗಡೆ ಆಗುವುದರಿಂದ ಲಾಭ ಮಾಡುವುದಕ್ಕಿಂತ ನಷ್ಟವೇ ಜಾಸ್ತಿ. ಹೀಗೆ 9 ಸಿನಿಮಾಗಳು ಒಂದೇ ದಿನ ರಿಲೀಸ್ ಆಗುವುದರಿಂದ ಸಿನಿಮಾ ಪ್ರೇಕ್ಷಕ ಕೂಡ ಯಾವ ಸಿನಿಮಾ ನೋಡಬೇಕು ಅಂತಾ ಗೊಂದಲಕ್ಕೆ ಬೀಳುತ್ತಾನೆ.
ಅದ್ಯಾಕೋ ಸಿನಿಮಾ ನಿರ್ಮಾಪಕರು ಹಠಕ್ಕೆ ಬಿದ್ದವರಂತೆ ಐದಾರು ಸಿನಿಮಾಗಳ ಮಧ್ಯೆ ಬಿಡುಗಡೆ ಮಾಡುವ ಮೂಲಕ ನಷ್ಟ ಅನುಭವಿಸುತ್ತಾರೆ. ಕಳೆದ ವಾರ 11 ಸಿನಿಮಾಗಳಲ್ಲಿ ಒಂದು ಅಥವಾ ಎರಡು ಸಿನಿಮಾ ಮಾತ್ರ ಎರಡನೇ ವಾರಕ್ಕೆ ಪ್ರದರ್ಶನ ಕಾಣುತ್ತಿದೆ. ಆದರೆ, ಉಳಿದ 9 ಸಿನಿಮಾಗಳು ಮೂರೇ ದಿನಕ್ಕೆ ಚಿತ್ರಮಂದಿರಗಳಿಂದ ಕಾಲುಕೀಳುತ್ತಿವೆ.
![Kirik shanker](https://etvbharatimages.akamaized.net/etvbharat/prod-images/kn-bng-01-sandalwoodnali-this-week-cinemagala-suggi-7204735_27052022104644_2705f_1653628604_99.jpg)
ಇನ್ನು ಚಿತ್ರಮಂದಿರಗಳಿಗೆ ಯಾಕೆ ಸಿನಿಮಾ ಪ್ರೇಕ್ಷಕ ಬರುತ್ತಿಲ್ಲ ಎಂಬ ಮಾತಿಗೆ ಥಿಯೇಟರ್ ಮಾಲೀಕರು ಹೇಳೋದು ಹೀಗೆ. ಯಾಕೆಂದರೆ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಸಿನಿಮಾ ಪ್ರೇಕ್ಷಕರು ಸಣ್ಣ ಬಜೆಟ್ ಸಿನಿಮಾಗಳು ಹಾಗೂ ಹೊಸ ನಟರ ಸಿನಿಮಾಗಳನ್ನ ನೋಡಲು ಉತ್ಸಾಹ ತೋರಿಸುತ್ತಿಲ್ಲ. ಸ್ಟಾರ್ ಹೀರೋಗಳ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆದ 20 ದಿನಕ್ಕೆ ಒಟಿಟಿಯಲ್ಲಿ ಬರುವಾಗ ಹೊಸಬರ ಸಿನಿಮಾಗಳು ಒಟಿಟಿಯಲ್ಲೇ ಬರುತ್ತೆವೆ. ಆವಾಗ ನೋಡೋಣ ಎಂಬ ಮನಸ್ಥಿತಿಗೆ ಸಿನಿಮಾ ಪ್ರೇಕ್ಷಕರು ಬಂದಿದ್ದಾರೆ.
ಹೀಗಾಗಿ, ಹೊಸಬರ ಚಿತ್ರಗಳನ್ನ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಿದರು ಸಿನಿಮಾ ಪ್ರೇಕ್ಷಕ ಬರುತ್ತಿಲ್ಲ ಅನ್ನೋದು ಚಿತ್ರಮಂದಿರದ ಮಾಲೀಕರ ಮಾತು. ಮತ್ತೊಂದು ಕಡೆ ದೊಡ್ಡ ಸಿನಿಮಾಗಳು ಬಂದಾಗ ಟಿಕೆಟ್ ಬೆಲೆ ಜಾಸ್ತಿ ಮಾಡಿದಾಗ, ಎಲ್ಲಾ ಬೆಲೆ ಏರಿಕೆ ಬಿಸಿಯಲ್ಲಿರೋ ಜನ ಅಷ್ಟೊಂದು ದುಡ್ಡು ಕೊಟ್ಟು ನೋಡಬೇಕು ಎಂಬ ಮನೋಭಾವಕ್ಕೆ ಸಿನಿಮಾ ಪ್ರೇಕ್ಷಕರು ಬಂದಿದ್ದಾರೆ.
ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರೋದು ಡೌಟ್ : ಹೀಗೆ ಒಂದು ವಾರಕ್ಕೆ ಹತ್ತು ಸಿನಿಮಾಗಳು ಬಿಡುಗಡೆ ಆದರೆ ಸಿನಿಮಾ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳೋದು ಗ್ಯಾರಂಟಿ. ಈ ಬಗ್ಗೆ ಸಿನಿಮಾ ನಟರು, ನಿರ್ಮಾಪಕರು, ಸಿನಿಮಾ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಕುಳಿತು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ಅದು ಆಗಲಿಲ್ಲ ಅಂದ್ರೆ, ಮುಂದಿನ ದಿನಗಳಲ್ಲಿ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರೋದು ಡೌಟ್ ಎನ್ನಲಾಗುತ್ತಿದೆ.
ಓದಿ: ರಾಜ್ಯಕ್ಕೆ ₹65 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸಲು ರಾಜ್ಯ ಸರ್ಕಾರ ಯಶಸ್ವಿ : ಸಿಎಂ ಬೊಮ್ಮಾಯಿ