ETV Bharat / entertainment

ಬಿಡುಗಡೆಗೂ ಮುನ್ನವೇ ಸ್ಯಾಂಡಲ್​​​ವುಡ್ ನಲ್ಲಿ ಸದ್ದು ಮಾಡುತ್ತಿದೆ ಮಾನ್ಸೂನ್ ರಾಗ ಚಿತ್ರ - monsoon raaga releases on aug 19

ಡಾಲಿ ಧನಂಜಯ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನೆಮಾ ಮಾನ್ಸೂನ್ ರಾಗ ಇದೇ ಬರುವ ಆಗಸ್ಟ್ 19ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ರಾಜ್ಯದ ಬಹುತೇಕ ಥಿಯೇಟರ್ ಗಳಲ್ಲಿ ಸಿನೆಮಾದ ಕಟೌಟ್ ಅಳವಡಿಸಲಾಗಿದೆ.

monsoon-raaga-banner-fixed-all-the-theatres-across-the-state
ಬಿಡುಗಡೆಗೂ ಮುನ್ನವೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಮಾನ್ಸೂನ್ ರಾಗ ಚಿತ್ರ
author img

By

Published : Jul 26, 2022, 8:11 PM IST

ನಾಯಕನಟ, ಖಳನಾಯಕ ಹೀಗೆ ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ಡಾಲಿ ಧನಂಜಯ್. ಸದ್ಯ ಯೂತ್ ಐಕಾನ್ ಆಗಿ ಬೈರಾಗಿ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದ ಡಾಲಿ ಈಗ ಮತ್ತೊಂದು ಹೊಸ ರೂಪದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

monsoon-raaga-banner-fixed-all-the-theatres-across-the-state
ಮಾನ್ಸೂನ್ ರಾಗ ಸಿನೆಮಾದ ಪೋಸ್ಟರ್

ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ಸಿನಿಮಾ ಮನ್ಸೂನ್ ರಾಗ. ಮಾನ್ಸೂನ್ ರಾಗ ಸಿನಿಮಾ ರಿಲೀಸ್‌ಗೆ ಇನ್ನೂ 25 ದಿನ ಬಾಕಿ ಇರುವಾಗಲೇ ಚಿತ್ರಮಂದಿರಗಳಲ್ಲಿ ಮಾನ್ಸೂನ್ ರಾಗ ಚಿತ್ರದ ಕಟೌಟ್‌ಗಳನ್ನು ಹಾಕಲಾಗಿದೆ.

ಆಗಸ್ಟ್‌ 19 ರಂದು ಬಿಡುಗಡೆಯಾಗಲಿರುವ ಮಾನ್ಸೂನ್ ರಾಗ ಸಿನೆಮಾ, ಇದೀಗ ಬಿಡುಗಡೆಗೆ 25 ದಿನ ಮುಂಚಿತವಾಗಿಯೇ ಧನಂಜಯ್ ಮತ್ತು ರಚಿತಾ ರಾಮ್ ಇರುವ ಕಟೌಟ್‌ಗಳನ್ನು ಥಿಯೇಟರ್ ಮುಂದೆ ಇರಿಸಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಹಾಕಿರುವ ಕಟೌಟ್‌ಗಳು ಸಿನಿಪ್ರಿಯರ ಗಮನಸೆಳೆಯುತ್ತಿವೆ.

monsoon-raaga-banner-fixed-all-the-theatres-across-the-state
ಬಿಡುಗಡೆಗೂ ಮುನ್ನವೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಮಾನ್ಸೂನ್ ರಾಗ ಚಿತ್ರ

ಈ ಚಿತ್ರದಲ್ಲಿ ಧನಂಜಯ್‌ ಕ್ಲಾಸ್ ಅಂಡ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಚಿತಾ ರಾಮ್ ಕೂಡ ಇಲ್ಲಿಯವರೆಗೆ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ವಂತೆ. ಈ ಚಿತ್ರದಲ್ಲಿ ರಚಿತಾ ರಾಮ್ ಕಾಸ್ಟೂಮ್ ನಿಂದ ಹಿಡಿದು, ಮೇಕಪ್ ವರೆಗೂ ಬಹಳ ವಿಭಿನ್ನ ಆಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ಚಿತ್ರತಂಡದ ಮಾತು.

  • " class="align-text-top noRightClick twitterSection" data="">

70 - 80ರ ದಶಕದಲ್ಲಿ ನಡೆಯುವ ಕಥೆಯನ್ನು ಸಿನೆಮಾ ಹೊಂದಿದ್ದು, ನಿರ್ದೇಶಕ ರವೀಂದ್ರನಾಥ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಯುವ ನಟಿ ಯಶಾ ಶಿವಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಪರಿಚಯಕ್ಕೆ ಮ್ಯೂಸಿಕಲ್‌ ವಿಡಿಯೊ ಬಿಡುಗಡೆ ಮಾಡಿದ್ದು,ಇದು ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಜನಮನ್ನಣೆ ಗಳಿಸಿದೆ.

ಈ ಮ್ಯೂಸಿಕಲ್‌ ವಿಡಿಯೋದಲ್ಲಿ ಯಶಾ ಶಿವಕುಮಾರ್ ಬೊಂಬಾಟ್ ಡ್ಯಾನ್ಸ್‌, ಸಿನಿಮಾಟೊಗ್ರಫಿ, ಅನೂಪ್‌ ಸೀಳಿನ್‌ ಅವರ ಸಂಗೀತ ನೋಡುಗರನ್ನು ಆಕರ್ಷಿಸಿದೆ. ಚಂಡೆ ಮತ್ತು ವಯಲಿನ್‌ ಜುಗಲ್ಬಂದಿಯಲ್ಲಿ ಮೂಡಿಬಂದಿರುವ ಹಾಡಿಗೆ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಇದ್ದು, ನವೀನ್ ಜಿ ಪೂಜಾರಿ ಈ ಸಿನಿಮಾದ ಛಾಯಾಗ್ರಹಣ ಮಾಡಿದ್ದಾರೆ. ಈ ಹಿಂದೆ ಪುಷ್ಪಕ ವಿಮಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಎ.ಆರ್. ವಿಖ್ಯಾತ್ ಈ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟಾರೆ ಹತ್ತು ಹಲವು ವಿಶೇಷತೆಗಳಿರೋ ಮಾನ್ಸೂನ್ ರಾಗ ಸಿನಿಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.

ಓದಿ : ಮಾದೇವನಿಗೆ ಜೋಡಿಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಥೆರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.