ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ತಾರೆ ಆಲಿಯಾ ಭಟ್ ಶುಕ್ರವಾರ ತಮ್ಮ ಚೊಚ್ಚಲ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಸ್ಪೈ ಥ್ರಿಲ್ಲರ್ ಆಗಿರುವ 'ಹಾರ್ಟ್ ಆಫ್ ಸ್ಟೋನ್' ಚಿತ್ರದಲ್ಲಿ ವಂಡರ್ ವುಮನ್ ತಾರೆ ಗಾಲ್ ಗಾಡೋಟ್ ಮತ್ತು ಬೆಲ್‌ಫಾಸ್ಟ್ ನಟ ಜೇಮೀ ಡೋರ್ನಾನ್ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಟಾಮ್ ಹಾರ್ಪರ್ ನಿರ್ದೇಶಿಸಿದ್ದಾರೆ.
- " class="align-text-top noRightClick twitterSection" data="
">
ನಟಿ ಆಲಿಯಾ ಭಟ್ ಚಿತ್ರೀಕರಣ ಮುಗಿಸಿರುವ ಬಗ್ಗೆ ಚಿತ್ರದ ಸೆಟ್‌ಗಳಲ್ಲಿರುವ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಮರೆಯಲಾಗದ ಅನುಭವ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳಿಂದ ಚಿತ್ರದ ಶೂಟಿಂಗ್‌ಗಾಗಿ ಲಂಡನ್‌ನಲ್ಲಿರುವ ಆಲಿಯಾ, ಇತ್ತೀಚೆಗಷ್ಟೇ ತಾವು ತಾಯಿ ಆಗುತ್ತಿರುವ ಬಗ್ಗೆ ಘೋಷಿಸಿದ್ದರು. ಇದರ ನಡುವೆಯೇ ಅವರು ತಮ್ಮ ಚೊಚ್ಚಲ ಹಾಲಿವುಡ್ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
- " class="align-text-top noRightClick twitterSection" data="
">
ಇತ್ತ, ಆಲಿಯಾ ಭಟ್ ಪೋಸ್ಟ್ಗೆ ಗಾಲ್ ಗಾಡೋಟ್ ಕಾಮೆಂಟ್ ಮಾಡಿದ್ದು, ಆಲಿಯಾ ಅದ್ಭುತ ಪ್ರತಿಭೆ ಎಂದು ಕೊಂಡಾಗಿದ್ದಾರೆ. ಅಲ್ಲದೇ, 'ವಿ ಮಿಸ್ ಯೂ' ಎಂದು ಭಟ್ ಅವರೊಂದಿಗಿನ ಫೋಟೋಗಳನ್ನೂ ಗಾಡೋಟ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ನಿತ್ಯಾನಂದನ ಜೊತೆ ಮದುವೆಯ ಬಯಕೆ: ಜೇಮ್ಸ್ ನಟಿಯ ಹೇಳಿಕೆಯಿಂದ ಅಭಿಮಾನಿಗಳು ತಬ್ಬಿಬ್ಬು