ETV Bharat / entertainment

'ಲವ್ ಜಿಹಾದ್​ನಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ': ಪಿಎಂ ಮೋದಿಗೆ ಮನವಿ ಮಾಡಿದ ಮಾಡೆಲ್

author img

By

Published : May 31, 2023, 6:50 PM IST

Updated : May 31, 2023, 6:56 PM IST

ಲವ್ ಜಿಹಾದ್​ನಲ್ಲಿ ಸಿಲುಕಿದ್ದೇನೆ ಎಂದು ಮಾಡೆಲ್ ಹೇಳಿಕೊಂಡಿದ್ದಾರೆ.

love jihad case
ಮಾಡೆಲ್ ಲವ್ ಜಿಹಾದ್​ ಕೇಸ್

ರಾಂಚಿ: ಮಾಡೆಲ್​ ಒಬ್ಬರು ತಾವು ಕೆಲಸ ಮಾಡುವ ಸಂಸ್ಥೆಯ ಮಾಲೀಕನ ಮೇಲೆ ಲವ್ ಜಿಹಾದ್‌ ಆರೋಪ ಹೊರಿಸಿದ್ದಾರೆ. ತಮ್ಮ (ಆರೋಪಿ) ಹೆಸರನ್ನು ಬದಲಾಯಿಸುವ ಮೂಲಕ ತನ್ನ ಸಂಸ್ಥೆಯ ಮಾಲೀಕರು ಲವ್ ಜಿಹಾದ್‌ನಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದು, ತನ್ನನ್ನು ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

  • #WATCH | "He was putting pressure on me to marry him and convert my religion. All this started in the year 2020 when I joined his modelling agency. Earlier he told me that his name is Yash but after 4 months, I got to know that his real name is Tanveer Akhtar. He is sending my… pic.twitter.com/Tp0UiMw9fy

    — ANI (@ANI) May 31, 2023 " class="align-text-top noRightClick twitterSection" data=" ">

ರಾಂಚಿಯ ಮಾಡೆಲಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಮಾಡೆಲ್​​, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಕಂಪನಿಯ ಮಾಲೀಕರೊಬ್ಬರು ತಮ್ಮನ್ನು ಯಶ್ ಎಂದು ಪರಿಚಯಿಸಿಕೊಂಡು, ಲವ್ ಜಿಹಾದ್‌ಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರದಂದು ಯುವತಿ ಆತನ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ತನ್ವೀರ್ ತನಗೆ ಮತಾಂತರ ಮತ್ತು ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಮಾಡೆಲ್​ ಹೇಳಿಕೊಂಡಿದ್ದಾರೆ.

ಮಾಲೀಕನ ಹೆಸರು ತಿಳಿದಾಗ, ಭಾಗಲ್ಪುರಕ್ಕೆ ಬಂದು ತನ್ನ ವೃತ್ತಿಜೀವನದ ಸಲುವಾಗಿ ಮುಂಬೈಗೆ ಪ್ರಯಾಣ ಬೆಳೆಸಿದೆ. ಆದರೆ, ಸಂಸ್ಥೆಯ ಮಾಲೀಕ ಮುಂಬೈಗೆ ಬಂದು ನನ್ನನ್ನು ಕೊಲ್ಲಲು ಪ್ರಯತ್ನಿಸಿದನು ಎಂದು ಸಹ ಆರೋಪಿಸಿದ್ದಾರೆ. ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಅವರು, ''ನಾನು ಸಾಯುತ್ತೇನೆ ಆದರೆ ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳೇ ನನ್ನನ್ನು ಈ ರಾಕ್ಷಸನಿಂದ ರಕ್ಷಿಸಿ, ನಾಳೆ ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ, ನಾನು ಹಿಂದೂ, ಎಂದಿಗೂ ಅನ್ಯ ಧರ್ಮದವರನ್ನು ಮದುವೆ ಆಗುವುದಿಲ್ಲ" ಎಂದು ತಿಳಿಸಿದ್ದಾರೆ.

ತಾನು ರಾಂಚಿಯ ಒಂದು ಸಂಸ್ಥೆಗೆ ಸೇರಿ ಒಂದೂವರೆ ವರ್ಷ ಕೆಲಸ ಮಾಡಿದ್ದು, ತನ್ವೀರ್‌ನಿಂದ ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಿದ್ದೇನೆ. ಆ ಮಾಲೀಕ ತನ್ನ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ, ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಮಾಡೆಲ್​​ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಉಚಿತ ಅಕ್ಕಿ ಕೊಟ್ಟರೆ ಸೋಮಾರಿಗಳಾಗ್ತಾರೆ ಎಂಬುದು ತಪ್ಪು ಹೇಳಿಕೆ: ಡಾಲಿ ಧನಂಜಯ್

ಈ ಹಿಂದೆ ಆತನ ವಿರುದ್ಧ ದೂರು ಸಲ್ಲಿಸಿದಾಗ ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕೋರ್ಟ್‌ನಲ್ಲಿ ಅಫಿಡವಿಟ್ ನೀಡಿದ್ದ. ನಂತರ ತನ್ನ ದೂರನ್ನು ಮಾನ್ವಿ ಹಿಂಪಡೆದಿದ್ದರು. ಆದರೂ ಮಾಲೀಕನ ಚಿತ್ರಹಿಂಸೆ ಮುಂದುವರಿದಿತ್ತು. ಮೇ. 23 ದೂರು ನೀಡಿರುವ ಮಾಡೆಲ್​ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಎಫ್‌ಐಆರ್ ಅನ್ನು ಉಲ್ಲೇಖಿಸಿ ಪೊಲೀಸರು ಈ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ದಶಕ ಪೂರೈಸಿದ ನಟರಾಕ್ಷಸ ಡಾಲಿ ಧನಂಜಯ್

ಆದರೆ ಮಾಡೆಲ್​​​ ತನ್ನ ವ್ಯವಹಾರದಲ್ಲಿ ತನಗೆ ಮೋಸ ಮಾಡಿದ್ದಾಳೆ. ಹಣ ಕೇಳಿದಾಗ ಈ ರೀತಿಯ ಆರೋಪ ಮಾಡುತ್ತಿದ್ದಾಳೆ. ಪ್ರಧಾನಿಗೆ ದೂರು ನೀಡಿರುವ ಮಾಡೆಲ್​ ಕೂಡ ನನ್ನ ನಗ್ನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿ ತನ್ವೀರ್ ಆರೋಪಿಸಿದ್ದಾರೆ. ಮುಂಬೈ ಪೊಲೀಸರು ಹೆಚ್ಚಿನ ತನಿಖೆಗಾಗಿ ರಾಂಚಿ ಪೊಲೀಸರೊಂದಿಗೆ ಪ್ರಕರಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ಚುರುಕುಗೊಂಡಿದೆ.

Last Updated : May 31, 2023, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.