ETV Bharat / entertainment

'ಆರ್​​ಜಿವಿ ನನ್ನ ಮೊದಲ ಆಸ್ಕರ್': RRR ನಾಟು ನಾಟು ಸಂಗೀತ ಸಂಯೋಜಕ ಕೀರವಾಣಿ

ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ರಾಮ್ ಗೋಪಾಲ್ ವರ್ಮಾ ಬಗ್ಗೆ ಗುಣಗಾನ ಮಾಡಿದ್ದಾರೆ.

MM Keeravani praises RGV
ಆರ್​​ಜಿವಿ ಬಗ್ಗೆ ಕೀರವಾಣಿ ಗುಣಗಾನ
author img

By

Published : Mar 26, 2023, 5:50 PM IST

ವಿಶ್ವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ತಮ್ಮ ಮೊದಲ ಆಸ್ಕರ್ ಸ್ಥಾನವನ್ನು ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ನೀಡಿದ್ದಾರೆ. 1991ರಲ್ಲಿ ಬಿಡುಗಡೆ ಕಂಡ 'ಕ್ಷಣ ಕ್ಷಣಂ' ಸಿನಿಮಾ ಮೂಲಕ ಅವರು ಈ ಉದ್ಯಮದಲ್ಲಿ ನೆಲೆಯೂರಲು ನನಗೆ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಸಂಗೀತ ಸಂಯೋಜಕ ಎಂಎಂ ಕೀರವಾಣಿ ತಮ್ಮ ಆರಂಭದ ದಿನಗಳ ಬಗ್ಗೆ ಮೆಲುಕು ಹಾಕಿದರು. ಆ ಸಂದರ್ಭ ರಾಮ್ ಗೋಪಾಲ್ ವರ್ಮಾ ಹೆಚ್ಚು ಸುದ್ದಿಯಲ್ಲಿದ್ದರು. ಆರ್‌ಜಿವಿ 'ಶಿವ' ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ಮಾಡಿದ್ದರು. ಆ ಸಮಯದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೀರವಾಣಿ ಅವರಿಗೆ ಅವಕಾಶ ನೀಡಿದರು. ಈ ಹಿನ್ನೆಲೆ ಚಲನಚಿತ್ರ ಉದ್ಯಮದಲ್ಲಿ ಗಮನ ಸೆಳೆಯಲು ಸಾಧ್ಯವಾಯಿತು.

ಸಂದರ್ಶನದಲ್ಲಿ ಎಂ.ಎಂ. ಕೀರವಾಣಿ ಅವರಿಗೆ ಯಶಸ್ಸಿನ ಬಗ್ಗೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಕೀರವಾಣಿ, ''ರಾಮ್ ಗೋಪಾಲ್ ವರ್ಮಾ ನನ್ನ ಮೊದಲ ಆಸ್ಕರ್, ಇತ್ತೀಚೆಗೆ ಪಡೆದಿರುವುದು ನನ್ನ ಎರಡನೇ ಆಸ್ಕರ್ ಪ್ರಶಸ್ತಿ'' ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ಎಲ್ಲರಂತೆ ನಾನೂ ಕೂಡ ಸರಿ ಸುಮಾರು 51 ಜನರನ್ನು ಸಂಪರ್ಕಿಸಿದೆ, ಬಹುಶಃ ಅವರಲ್ಲಿ ಕೆಲವರು ನನ್ನ ಆಡಿಯೋ ಕ್ಯಾಸೆಟ್ ಅನ್ನು ಕಸದ ಬುಟ್ಟಿಗೆ ಎಸೆದಿರಬಹುದು. ಆ ಸಂದರ್ಭ ನನ್ನ ಬಗ್ಗೆ ಯಾರೂ ಕೇಳಿಲ್ಲ, ಹಾಗಾಗಿ ಯಾರು ಕಾಳಜಿ ವಹಿಸುತ್ತಾರೆ? ಎಂದು ಆರಂಭದ ದಿನಗಳ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: ವರ್ಷ ಪೂರೈಸಿದ 'RRR'.. ಈಗಲೂ ಇದೆ ನಾಟು ನಾಟು ಕ್ರೇಜ್​​

ಆ ಸಂದರ್ಭ ರಾಮ್ ಗೋಪಾಲ್ ವರ್ಮಾ ಅವರ 'ಕ್ಷಣ ಕ್ಷಣಂ' ಚಿತ್ರಕ್ಕೆ ಕೆಲಸ ಮಾಡಲು ನನಗೆ ಅವಕಾಶ ನೀಡಿದರು. ಆದರೆ ಅವರು 'ಶಿವ' ರಾಮ್ ಗೋಪಾಲ್ ವರ್ಮಾ ಆಗಿ ಗುರುತಿಸಿಕೊಂಡರು. 'ಶಿವ' ಆರ್​ಜಿವಿ ಅವರಿಗೆ ಆಸ್ಕರ್. ಏಕೆಂದರೆ ಇದು ಅವರ ಚೊಚ್ಚಲ ಚಿತ್ರ. ಮೊದಲ ಸಿನಿಮಾ ಮೆಗಾ ಹಿಟ್ ಆಗಿದ್ದು, ರಾಮ್ ಗೋಪಾಲ್ ವರ್ಮಾ ನನ್ನ ವೃತ್ತಿಜೀವನದಲ್ಲಿ ಆಸ್ಕರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗಾಗಿ ಅವರು ನನ್ನ ಆಸ್ಕರ್. ಹಾಗಾದರೆ ಈ ಕೀರವಾಣಿ ಯಾರು?. ನೀವು ಅವರ ಬಗ್ಗೆ ಕೇಳಿಲ್ಲದಿರಬಹುದು (ಆ ಸಂದರ್ಭ). ಆದರೆ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ 4 ಯೋಜನೆಗಳಿವೆ. ಈ ರೀತಿಯಾಗಿ ಅವರ ಜೊತೆ ಕೆಲಸ ಆರಂಭಿಸಿದ್ದು, ನನಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಹಾಯ ಮಾಡಿತು. ಅವರು ನನಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: 'RC15' ಸೆಟ್​ನಲ್ಲಿ RRR ಸ್ಟಾರ್ ಪ್ರೀ ಬರ್ತ್‌ಡೇ ಸೆಲೆಬ್ರೇಶನ್: ಆಸ್ಕರ್‌ ತಾರೆಗೆ ಹೂಮಳೆ

ಕೀರವಾಣಿ ಹೇಳಿಕೆಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ: ಎಂಎಂ ಕೀರವಾಣಿ ಅವರ ಈ ಗುಣಗಾನಕ್ಕೆ ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಕೀರವಾಣಿ ಸಂದರ್ಶನದ ವಿಡಿಯೋ ಹಂಚಿಕೊಂಡು, 'ಹೇ ಕೀರವಾಣಿ, ನಾನು ಸತ್ತಂತೆ ಭಾವಿಸುತ್ತೇನೆ, ಏಕೆಂದರೆ ಈ ರೀತಿಯ ಹೊಗಳಿಕೆಯನ್ನು ಸತ್ತವರಿಗೆ ಮಾತ್ರ ನೀಡಲಾಗುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.