ETV Bharat / entertainment

ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ಶಾಸಕ ಪ್ರದೀಪ್ ಈಶ್ವರ್ - MLA Pradeep Eshwar

ಬಿಗ್​ ಬಾಸ್ ಮನೆಗೆ ತೆರಳಿದ್ದ ಶಾಸಕ ಪ್ರದೀಪ್ ಈಶ್ವರ್ ಒಂದೇ ದಿನಕ್ಕೆ ಹೊರ ಬಂದಿದ್ದಾರೆ.

MLA Pradeep Eshwar left the Bigg Boss house for a single day

author img

By ETV Bharat Karnataka Team

Published : Oct 10, 2023, 10:30 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ‌ ಬಿಗ್​ ಬಾಸ್ ಮನೆಯೊಳಗೆ ತೆರಳಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮನೆಯಿಂದ ಹೊರ ಬಂದಿದ್ದಾರೆ. ಸೋಮವಾರ ಅವರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಹೋಗ್ತಿದ್ದಂತೆ ದೊಡ್ಮನೆಯಲ್ಲಿ ಸಂಚಲನ ಸೃಷ್ಟಿಸಿದ್ದರು.

ಶಾಸಕ ಬಿಗ್​ ಬಾಸ್ ಮನೆಗೆ ತೆರಳುತ್ತಿದ್ದಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಯೂ ಶುರುವಾಗಿತ್ತು. ಆದರೆ, ಅತಿಥಿಯಾಗಿ ಹೋಗಿದ್ದ ಅವರು ಒಂದೇ ದಿನದಲ್ಲಿ ಮತ್ತೆ ಮನೆಯಿಂದ ಹೊರಬಂದರು.

ಶಾಸಕ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್

ವೈಟ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮನೆ ಪ್ರವೇಶಿಸಿದ್ದ ಪ್ರದೀಪ್ ಈಶ್ವರ್, ಮನೆ ಸದಸ್ಯರಿಗೆ ಕೈಮುಗಿಯುತ್ತಲೇ ಹೆಜ್ಜೆ ಹಾಕಿದ್ದರು. ಈ ಸಂದರ್ಭದಲ್ಲಿ ಮನೆ ಸದಸ್ಯರು ಅರೆಕ್ಷಣ ಅಚ್ಚರಿಗೊಂಡಿದ್ದರು. ಒಂದು ದಿನದ ಅತಿಥಿಯಾಗಿ ಮನೆಯೊಳಗೆ ಹೋಗಿದ್ದ ಪ್ರದೀಪ್ ಈಶ್ವರ್, ಅಷ್ಟೇ ಬೇಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ‌.

ಶಾಸಕರ ನಡೆಯನ್ನು ಮಾಜಿ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದ್ದರು. "ಒಬ್ಬ ಎಂಎಲ್​ಎ ಬಿಗ್ ಬಾಸ್‌​ಗೆ ಹೋದ ಉದಾಹರಣೆಯೇ ಇಲ್ಲ. ಇದು ನಗೆಪಾಟಲು. ಇಡೀ ರಾಜ್ಯದಲ್ಲಿ ಎಲ್ಲೂ ಒಬ್ಬ ಎಂಎಲ್ಎ ಬಿಗ್ ಬಾಸ್​ಗೆ ಹೋಗಿ ಕುಣಿದಾಡಿರುವ ಉದಾಹರಣೆ ಇಲ್ಲ. ಇದೊಂದು ನಾಚಿಕೆಗೇಡಿನ ಸಂಗತಿ. ದೇಶದ ಮಟ್ಟಕ್ಕೆ ಕೊಂಡೊಯ್ದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನು ಈ ಮೂಲಕ ಹಾಳು ಮಾಡಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕಲರ್​ಫುಲ್​ ಬಿಗ್​ ಬಾಸ್​ ಮನೆಗೆ ಎಂಎಲ್​ಎ ಪ್ರದೀಪ್​ ಈಶ್ವರ್​ ಎಂಟ್ರಿ

ಕನ್ನಡದ ಜನಪ್ರಿಯ ರಿಯಾಲಿಟಿ ಶೋನ 10ನೇ ಸೀಸನ್​ ಭಾನುವಾರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್​ ಸಾರಥ್ಯದ 100 ದಿನಗಳ ಕಾರ್ಯಕ್ರಮವು ಗ್ರ್ಯಾಂಡ್​​ ಲಾಂಚ್​ ಆಗಿದೆ. ಕಲರ್​ಫುಲ್​ ಬಿಗ್​ ಬಾಸ್​ ಮನೆಗೆ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಇವರೊಂದಿಗೆ ಪ್ರದೀಪ್​ ಈಶ್ವರ್​ ದೊಡ್ಮನೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದರು. ಡೊಳ್ಳು ಕುಣಿತದ ಮೂಲಕ ಅವರನ್ನು ಸ್ವಾಗತಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.