ಹೈದರಾಬಾದ್: ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಮಿಸ್ ಯೂನಿವರ್ಸ್-2022 ಸ್ಪರ್ಧೆಯಲ್ಲಿ ನೇಪಾಳ ದೇಶವನ್ನು ಪ್ರತಿನಿಧಿಸಿದ್ದ ಖ್ಯಾತ ರೂಪದರ್ಶಿ ಸೋಫಿಯಾ ಭುಜೆಲ್ ವೇದಿಕೆ ಮೇಲೆ ಕಾಳಿ ಮಾತೆ ರೂಪದಲ್ಲಿ ಕಾಣಿಸಿಕೊಂಡರು. ಇದೀಗ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಿಸ್ ಯೂನಿವರ್ಸ್ 2022ರ ಅಂತಿಮ ಆಯ್ಕೆಯು ಭಾನುವಾರ 15 ಜನವರಿ 2023 ರಂದು ಅದ್ಧೂರಿಯಾಗಿ ತೆರೆಬಿದ್ದಿತು. ಈ 71ನೇ ವಿಶ್ವ ಸುಂದರಿ ಗ್ರ್ಯಾಂಡ್ ಫಿನಾಲೆಗೂ ಮುನ್ನ 86 ದೇಶಗಳ ಸ್ಪರ್ಧಿಗಳು ರಾಷ್ಟ್ರೀಯ ವೇಷಭೂಷಣ ಸುತ್ತಿನ ವೇಳೆಯಲ್ಲಿ ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸುವ ಧಿರಿಸಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಮ ಮೆರೆದರು. ಈ ರಾಷ್ಟ್ರೀಯ ವೇಷಭೂಷಣ ಸುತ್ತಿನಲ್ಲಿ ಸೋಫಿಯಾ ಅವರು ಹಿಂದೂ ದೇವತೆ ಕಾಳಿಯಾಗಿ ವೇದಿಕೆಯಲ್ಲಿ ಕಾಣಿಸಿಕೊಂಡು. ಅವರ ನೋಟ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.
- " class="align-text-top noRightClick twitterSection" data="
">
ಈ ಅಂದದ ಫೋಟೋವನ್ನು ಚಂದದ ಶೀರ್ಷಿಕೆಯೊಂದಿಗೆ ಸೋಫಿಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವ ಸುಂದರಿಯರ ವೇದಿಯಲ್ಲಿ ನೇಪಾಳದ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟಿಜನ್ಸ್ ಕೂಡ ತರಹೇವಾರಿಯಾಗಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಲಾಂಭಿಸಿದ್ದಾರೆ.
ಹೊಳೆಯುವ ಕೆಂಪು ಸೀರೆಯೊಂದಿಗೆ ಅದಕ್ಕೆ ಬೇಕಾದ ಎಲ್ಲ ಸೌಂದರ್ಯ ಪರಿಕರಗಳನ್ನು ಹಾಕಿಕೊಂಡಿದ್ದಾರೆ. ಕೊರಳಿಗೆ ಬಂಗಾರದ ಸರ ಧರಿಸಿರುವ ಅವರು, ಹಣೆಗೆ ಸಿಂಧೂರ ಹಚ್ಚಿಕೊಂಡಿರುವುದನ್ನು ನಾವು ಕಾಣಬಹುದು. ಕೈಯಲ್ಲಿ ತ್ರಿಶೂಲ ಹಿಡಿದು ದೇವಿಯಂತೆ ಉಗ್ರರೂಪದಲ್ಲಿ ಕಾಣಿಸಿಕೊಂಡಿರುವುದನ್ನು ನಾವು ಗಮನಿಸಬಹುದು.
ನೇಪಾಳ ಸಂಪ್ರದಾಯಗಳಿಂದ ತುಂಬಿದ ಶ್ರೀಮಂತ ದೇಶ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ನೈಸರ್ಗಿಕ ಮತ್ತು ಸಾಂಸ್ಕೃತಿಕ ಸೌಂದರ್ಯದ ಪ್ರತೀಕ. ಶತ - ಶತಮಾನಗಳಿಂದ ದೇವಿಯನ್ನು ಪೂಜಿಸುವ ಮತ್ತು ಆರಾಧಿಸಿಕೊಂಡು ಬಂದಿರುವ ದೇಶವಿದು. ಇಂದಿನ ವೇಷಭೂಷಣವು ನಮ್ಮೆಲ್ಲರ ಸ್ಫೂರ್ತಿಯ ಸಂಕೇತವಾಗಿದೆ. ಇದೊಂದು ಸೃಷ್ಟಿಯ ಕಾರಂಜಿ. ಕೆಂಪು ಬಣ್ಣವು ರಕ್ತವನ್ನು ಸೂಚಿಸುತ್ತದೆ ಜೊತೆಗೆ ಸೃಷ್ಟಿಯ ಶಕ್ತಿಯನ್ನು ಹೇಳುತ್ತದೆ.
- " class="align-text-top noRightClick twitterSection" data="
">
ತ್ರಿಶೂಲವು ಜೀವನ ಮತ್ತು ಮರಣದ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತದೆ ಎಂದು ತಾವು ಧರಿಸಿಕೊಂಡಿದ್ದ ಪ್ರತಿ ಉಡುಪು ಮತ್ತು ಪ್ರತಿ ಪರಿಕರಗಳ ಬಗ್ಗೆ ವರ್ಣಾನಾತ್ಮಕವಾಗಿ ಸೋಫಿಯಾ ಭುಜೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ವೇಶಭೂಷಣವನ್ನು ಡಿಕೋಡ್ ಮಾಡಿರುವ ಅವರ ಟಿಪ್ಪಣಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಮಿಸ್ ಯೂನಿವರ್ಸ್ 2022ರ ರಾಷ್ಟ್ರೀಯ ವೇಷಭೂಷಣ ಸುತ್ತಿನ ತನ್ನ ನೋಟವು "ನಿಮಗೆ ನಿಮ್ಮ ದೈವತ್ವವನ್ನು ನೆನಪಿಸುತ್ತದೆ. ಮನಸಿನೊಳಗಿನ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ನಿಮ್ಮನ್ನು ಇದು ಪ್ರೋತ್ಸಾಹಿಸುತ್ತದೆ" ಎಂದು ಸಹ ಅವರು ಬರೆದುಕೊಂಡಿದ್ದಾರೆ. ಭಾರತದ ಮತ್ತು ಕರ್ನಾಟಕದ ಮೂಲಕ ದಿವಿತಾ ರೈ ಅವರು ಮಿಸ್ ಯೂನಿವರ್ಸ್ ಅಂಗಳದಲ್ಲಿ ನಡೆದ ರಾಷ್ಟ್ರೀಯ ಉಡುಪು ಸುತ್ತಿನಲ್ಲಿ ಚಿನ್ನದ ಪಕ್ಷಿ ಥೀಮ್‌ನ ಉಡುಪು ಧರಿಸಿ ಕಂಗೊಳಿಸಿದರು.
ಚಿನ್ನದ ಪಕ್ಷಿಯಂಥ ರೆಕ್ಕೆಗಳನ್ನು ವಿನ್ಯಾಸಗೊಳಿಸಲಾಗಿದ್ದು ಈ ಉಡುಪು ಸಹ ವೈರಲ್ ಆಗಿದೆ. ಇದನ್ನು ಫ್ಯಾಷನ್ ಡಿಸೈನರ್ ಅಭಿಷೇಕ್ ಶರ್ಮ ವಿನ್ಯಾಸಗೊಳಿಸಿದ್ದಾರೆ. ಇದು 'ಒಂದು ವಿಶ್ವ ಒಂದು ಕುಟುಂಬ'ದ ಕಲ್ಪನೆಯನ್ನು ತೋರುತ್ತದೆ ಎಂದು ಅವರು ಇದೇ ವೇಳೆ ಹೇಳಿಕೊಂಡರು. ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅಮೆರಿಕದ ಮಿಸ್ ಯುಎಸ್ಎ ಆರ್’ಬೊನಿ ಗೇಬ್ರಿಯಲ್ ಅವರು 2022ರ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಿದ್ದಾರೆ. 28 ವರ್ಷದ ರೂಪದರ್ಶಿ ಗೇಬ್ರಿಯಲ್ ಅವರು ಫ್ಯಾಷನ್ ಡಿಸೈನರ್ ಬೋಧಕರಾಗಿದ್ದಾರೆ. ಅವರು ಮಿಸ್ ಯುಎಸ್ಎ ಕಿರೀಟ ಗೆದ್ದ ಮೊದಲ ಫಿಲಿಪಿನೋ ಅಮೆರಿಕನ್ ಕೂಡ ಆಗಿದ್ದಾರೆ.
ಒಟ್ಟು 84 ಸುಂದರಿಯರಿದ್ದ ಈ ಸ್ಪರ್ಧೆಯಲ್ಲಿ ಆರ್. ಬೊನಿ ಗೇಬ್ರಿಯಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವೆನೆಜುವೆಲಾದ ಡಯಾನಾ ಸಿಲ್ವಾ ಎರಡನೇ ಸ್ಥಾನ ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ಆಮಿ ಪೆನಾ ಮೂರನೇ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಭಾರತ ನಿರಾಸೆ ಅನುಭವಿಸಿದೆ.
ಇದನ್ನೂ ಓದಿ: ಗುಟ್ಟಾಗಿ ರಾಕಿ ಭಾಯ್ ಥಾಯ್ಲೆಂಡ್ಗೆ ಹೋಗಿದ್ದು ಏಕೆ?: ಪ್ಯಾನ್ ವರ್ಲ್ಡ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರಾ ಯಶ್