ETV Bharat / entertainment

ಮೆಟ್ ಗಾಲಾ 2023: ರೆಡ್ ಕಾರ್ಪೆಟ್​ ಮೇಲೆ ಪ್ರಿಯಾಂಕಾ, ಆಲಿಯಾ, ಇಶಾ ಅಂಬಾನಿ ಝಲಕ್! - ಪ್ರಿಯಾಂಕಾ ಚೋಪ್ರಾ

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಇಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಹಾಗೂ ಆಲಿಯಾ ಭಟ್ ಕ್ಯೂಟ್ ಆಗಿ ಕಾಣಿಸಿಕೊಂಡರು.

Met Gala 2023
ಮೆಟ್ ಗಾಲಾ 2023-ಭಾರತದ ತಾರೆಯರು
author img

By

Published : May 2, 2023, 10:56 AM IST

ವಾಷಿಂಗ್ಟನ್: ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್​​ನಲ್ಲಿ 'ಮೆಟ್​ ಗಾಲಾ 2023' ಅದ್ದೂರಿಯಾಗಿ ನೆರವೇರಿತು. ನಟಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ಆಲಿಯಾ ಭಟ್ ಹಾಗೂ ಇಶಾ ಅಂಬಾನಿ ಕಾರ್ಯಕ್ರಮದಲ್ಲಿ ವಿಶೇಷ ದಿರಿಸಿನಲ್ಲಿ ಮಿಂಚಿದರು.

Priyanka Chopra and Nick Jonas
ಪ್ರಿಯಾಂಕಾ ಚೋಪ್ರಾ ಜೊತೆ ಪತಿ ನಿಕ್ ಜೋನಸ್

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಜತೆ ಪತಿ ನಿಕ್ ಜೋನಸ್ ಕೂಡ ಇದ್ದರು. ಇಬ್ಬರೂ ಕಪ್ಪು ಬಣ್ಣದ ಡ್ರೆಸ್​ನಲ್ಲಿ ಕಂಗೊಳಿಸಿದರು. ಪ್ರಿಯಾಂಕಾ 2017 ರಲ್ಲಿ ಮೊದಲ ಬಾರಿಗೆ ಮೆಟ್ ಗಾಲಾದಲ್ಲಿ ಪಾದಾರ್ಪಣೆ ಮಾಡಿದರು. ಅವರು ಇಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ನಾಲ್ಕನೇ ಬಾರಿ. ಕಪ್ಪು ಲೆದರ್ ಜಾಕೆಟ್‌ನಲ್ಲಿ ನಿಕ್ ಹ್ಯಾಂಡ್‌ಸಮ್‌ ಆಗಿ ಕಂಡುಬಂದರು.

Alia Bhatt
ಆಲಿಯಾ ಭಟ್

ಮೊದಲ ಬಾರಿಗೆ ಮೆಟ್​ ಗಾಲಾದಲ್ಲಿ ಆಲಿಯಾ: ನಟಿ ಆಲಿಯಾ ಭಟ್ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ವೇದಿಕೆ ಮೇಲೆ ಅವರು ಮಿಂಚಿದ್ದಾರೆ. ಆದರೆ ಮೆಟ್​ ಗಾಲಾ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಇದೇ ಮೊದಲು. ಹೀಗಾಗಿ ಈ ಕಾರ್ಯಕ್ರಮ ಅವರಿಗೆ ತುಂಬಾನೇ ವಿಶೇಷವಾಗಿತ್ತು. ಎಲ್ಲರೂ ಪ್ರೀತಿಯಿಂದ ಆಲಿಯಾ ಆಲಿಯಾ ಎಂದು ಕೂಗುವಾಗ ಅವರು ಭಾವುಕರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಲಿಯಾ ಭಟ್ ಅವರನ್ನು ನೋಡುತ್ತಿದ್ದಂತೆ ಅಲ್ಲಿದ್ದ ಅಭಿಮಾನಿಗಳು ಆಲಿಯಾ ಐ ಲವ್​ ಯೂ ಎಂದು ಕೂಗಿದರು. ಇದಕ್ಕೆ ಫ್ಲೈಯಿಂಗ್ ಕಿಸ್ ಕೊಟ್ಟ ಅವರು, ಐ ಲವ್​ ಯೂ ಟೂ ಎಂದಿದ್ದಾರೆ.

ಆಲಿಯಾ ಈಗ ಬಾಲಿವುಡ್​ಗೆ ಮಾತ್ರ ಸೀಮಿತ ಆಗಿಲ್ಲ. ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. 'ಹಾರ್ಟ್ ಆಫ್​ ಸ್ಟೋನ್' ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ಆಲಿಯಾ ಭಟ್ ಅವರ ಉಡುಗೆ ಎಲ್ಲರ ಗಮನ ಸೆಳೆಯಿತು. ಅವರ ಡ್ರೆಸ್​​ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Isha Ambani
ಇಶಾ ಅಂಬಾನಿ

ಕಪ್ಪು ಗೌನ್‌ನಲ್ಲಿ ಮಿಂಚಿದ ಇಶಾ ಅಂಬಾನಿ: ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಕೂಡಾ ಕಪ್ಪು ರೇಷ್ಮೆ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.

ಏನಿದು ಮೆಟ್​ ಗಾಲಾ?: ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ವಿಶೇಷ ಫ್ಯಾಷನ್​ ಹಬ್ಬವಾಗಿದೆ. ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್​ ಗಾಲಾ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಸೆಲೆಬ್ರಿಟಿಗಳು ಧರಿಸುವ ಕಾಸ್ಟ್ಯೂಮ್​ಗಳು ಸಖತ್​ ಗಮನ ಸೆಳೆಯುತ್ತವೆ. ಇಲ್ಲಿ ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ ಸೆಲೆಬ್ರಿಟಿಗಳು ಹೆಜ್ಜೆ ಹಾಕುತ್ತಾರೆ.

ಈ ವರ್ಷದ ಥೀಮ್: 20ನೇ ಶತಮಾನದ ಅತ್ಯಂತ ಮೆಚ್ಚುಗೆ ಪಡೆದ ವಸ್ತ್ರ ವಿನ್ಯಾಸಕ ಕಾರ್ಲ್ ಲಾಗರ್‌ಫೆಲ್ಡ್ ಅವರಿಗೆ ಗೌರವ ಸಲ್ಲಿಸಲು "ಕಾರ್ಲ್ ಲಾಗರ್‌ಫೆಲ್ಡ್: ಎ ಲೈನ್ ಆಫ್ ಬ್ಯೂಟಿ" ಈ ವರ್ಷದ ಥೀಮ್​. ಐಕಾನಿಕ್ ಡಿಸೈನರ್‌ನ ಕೆಲಸವನ್ನು ಅನ್ವೇಷಿಸುವ ಹಾಗೂ ಹೊಸ ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್ ಪ್ರದರ್ಶನವನ್ನು ಇದು ಆಧರಿಸಿದೆ. ಮೆಟ್ ಗಾಲಾ ಕಾರ್ಯಕ್ರಮವನ್ನು ನಟ ಮತ್ತು ನಿರ್ಮಾಪಕ ಲಾ ಲಾ ಆಂಥೋನಿ, ಬರಹಗಾರ ಡೆರೆಕ್ ಬ್ಲಾಸ್‌ಬರ್ಗ್ ಮತ್ತು ಸ್ಯಾಟರ್ಡೇ ನೈಟ್ ಲೈವ್‌ನ ಕ್ಲೋಯ್ ಫೈನ್‌ಮ್ಯಾನ್ ಆಯೋಜಿಸಿದ್ದಾರೆ.

ಇದನ್ನೂ ಓದಿ: ಮೂರೇ ದಿನದಲ್ಲಿ 150 ಕೋಟಿ ಬಾಚಿದ 'ಪೊನ್ನಿಯನ್​ ಸೆಲ್ವನ್​ 2': ವಿಕ್ರಮ್​, ಐಶ್ವರ್ಯ ಚಿತ್ರ ಸೂಪರ್​ ಹಿಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.