ETV Bharat / entertainment

ಮೆಟ್​ ಗಾಲಾಗೆ ಆಲಿಯಾ ಚೊಚ್ಚಲ ಪ್ರವೇಶ; ಧೈರ್ಯ ತುಂಬಿದ ಪ್ರಿಯಾಂಕಾ ಚೋಪ್ರಾ - ಈಟಿವಿ ಭಾರತ ಕನ್ನಡ

ಮೆಟ್​ ಗಾಲಾದಲ್ಲಿ ಭಾಗವಹಿಸಲು ಆತಂಕಗೊಂಡಿದ್ದ ನನಗೆ ಪ್ರಿಯಾಂಕಾ ಚೋಪ್ರಾ ಧೈರ್ಯ ತುಂಬಿರುವುದಾಗಿ ನಟಿ ಆಲಿಯಾ ಭಟ್​ ಹೇಳಿದ್ದಾರೆ.

met gala 2023
ಮೆಟ್​ ಗಾಲಾ
author img

By

Published : May 6, 2023, 5:16 PM IST

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಕೆಲ ದಿನಗಳ ಹಿಂದೆ ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್​​ನಲ್ಲಿ 'ಮೆಟ್​ ಗಾಲಾ 2023' ಅದ್ಧೂರಿಯಾಗಿ ನೆರವೇರಿತು. ನಟಿಯರಾದ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಇಶಾ ಅಂಬಾನಿ ಮತ್ತು ಉದ್ಯಮಿ ನತಾಶಾ ಪೂನಾವಾಲಾ ಕಾರ್ಯಕ್ರಮದಲ್ಲಿ ವಿಶೇಷ ದಿರಿಸಿನಲ್ಲಿ ಮಿಂಚಿದ್ದರು.

ಅದರಲ್ಲೂ ಪ್ರಿಯಾಂಕಾ ಮತ್ತು ಆಲಿಯಾ ವಿಶೇಷವಾಗಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರು. ಪ್ರಿಯಾಂಕಾ ಮೆಟ್​ ಗಾಲಾದಲ್ಲಿ ಕಾಣಿಸಿಕೊಂಡಿದ್ದು ಇದು ನಾಲ್ಕನೇ ಬಾರಿ. ಆದರೆ ಆಲಿಯಾಗೆ ಈ ವೇದಿಕೆ ಹೊಸತು. ಹೀಗಾಗಿಯೇ ನಟಿ ಕೊಂಚ ನರ್ವಸ್​ ಆಗಿದ್ದರು. ಚೊಚ್ಚಲ ಪ್ರವೇಶದ ಬಗ್ಗೆ ಅವರು ಆತಂಕಗೊಂಡಿದ್ದರು.

ಈ ವಿಚಾರವಾಗಿ ಅವರು ವಿಡಿಯೋ ಮೂಲಕ ಮಾತನಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಬಗ್ಗೆಯೂ ವಿಶೇಷವಾಗಿ ಹೇಳಿದ್ದಾರೆ. ಮೆಟ್ ಗಾಲಾ 2023 ರಲ್ಲಿ ತನ್ನ ಚೊಚ್ಚಲ ಪ್ರವೇಶ ಮತ್ತು ಆತಂಕದ ಬಗ್ಗೆ ಆಲಿಯಾ ಬಹಿರಂಗಪಡಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ವಿಡಿಯೋ ಸಖತ್​ ವೈರಲ್​ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಿಡಿಯೋದಲ್ಲೇನಿದೆ?: ಮೆಟ್​ ಗಾಲಾ 2023 ರ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವ ಮೊದಲು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಆಲಿಯಾ ಮಾತನಾಡಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ. ಅಲ್ಲಿನ ವಾತಾವರಣವನ್ನು ತಿಳಿಗೊಳಿಸಲು ಪ್ರಿಯಾಂಕಾ ಪ್ರಯತ್ನಿಸಿದ್ದರಂತೆ. ಆಲಿಯಾ ತಮ್ಮ ವೈರಲ್​ ವಿಡಿಯೋದಲ್ಲಿ, 'ನಾನು ಚಿತ್ರರಂಗದಲ್ಲಿದ್ದರೂ ತುಂಬಾ ನಾಚಿಕೆ ಸ್ವಭಾವದವಳು. ನನಗೂ ತಿಳಿದಿಲ್ಲ, ನಾನು ಹೇಗೆ ಈ ವೃತ್ತಿಯಲ್ಲಿ ಇದ್ದೇನೆ ಎಂದು. ನಾನು ಮಾಡುವ ಚೇಷ್ಟೆಗಳಿಂದಲೇ ಬೆಳಕಿಗೆ ಬಂದಿದ್ದೇನೆ, ಬರುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಇಳಿಕೆಯಾದ ಸಲ್ಮಾನ್ ಸಿನಿಮಾ ಗಳಿಕೆ: ಅದ್ಧೂರಿ ವೆಚ್ಚದಲ್ಲಿ ತಯಾರಾಗ್ತಿದೆ ಮುಂದಿನ ಚಿತ್ರ!

ಗಂಗೂಬಾಯಿ'ಗೆ 'ದೇಸಿ ಗರ್ಲ್​' ಸಲಹೆ: ಮುಂದುವರೆದು ಹೇಳಿದ ಆಲಿಯಾ, ನನ್ನ ಸಂಕಷ್ಟವನ್ನು ಕಂಡು ಪ್ರಿಯಾಂಕಾ ಚೋಪ್ರಾ ಸಲಹೆ ನೀಡಿದ್ದಾರೆ ಎಂದಿದ್ದಾರೆ. ‘ನೀವು ವೇದಿಕೆಗೆ ಹೋಗಿ, ವಾತಾವರಣ ಅರ್ಥ ಮಾಡಿಕೊಳ್ಳಿ, ತಲ್ಲೀನರಾಗಿ, ಭಯಪಡಬೇಡಿ’ ಎಂದು ಪ್ರಿಯಾಂಕಾ ಧೈರ್ಯ ತುಂಬಿರುವುದಾಗಿ ಆಲಿಯಾ ಹೇಳಿದ್ದಾರೆ. ಇದಕ್ಕೆ ಆಲಿಯಾ, ನೀವು ನನ್ನೊಂದಿಗೆ ಬಾತ್​ರೂಮ್ ಅಲ್ಲೂ ಜೊತೆಯಾಗಿರಿ ಎಂದು ತಮ್ಮ ಆತಂಕವನ್ನು ಈ ರೀತಿಯಾಗಿ ಪ್ರಿಯಾಂಕಾ ಜೊತೆ ಹಂಚಿಕೊಂಡಿದ್ದಾರೆ. ಇಂತಹ ಆಪ್ತ ಮಾತುಕತೆ ವಿಡಿಯೋದಲ್ಲಿದೆ. ಆಲಿಯಾ ಇಂತಹ ಸಣ್ಣ ವಿಷಯಕ್ಕಾಗಿ ಸದ್ಯ ಸುದ್ದಿಯಾಗಿದ್ದಾರೆ.

ಆಲಿಯಾ ವಿಡಿಯೋಗೆ ದೀಪಿಕಾ ಕಮೆಂಟ್: ಆಲಿಯಾ ಭಟ್​ ಈ ವಿಡಿಯೋದಲ್ಲಿ ತಾವು ಮೊದಲ ಬಾರಿಗೆ ಮೆಟ್​​ ಗಾಲಾದಲ್ಲಿ ಭಾಗವಹಿಸಲು ಆತಂಕಗೊಂಡಿರುವುದಾಗಿ ಹೇಳಿದ್ದಾರೆ. ಈ ವಿಡಿಯೋಗೆ ನಟಿ ದೀಪಿಕಾ ಪಡುಕೋಣೆ ಕಮೆಂಟ್​ ಮಾಡಿದ್ದಾರೆ. "ನೀವು ಇದನ್ನು ಸಾಧಿಸಿದ್ದೀರಿ" ಎಂದು ಬರೆದು, ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಆನ್​ಲೈನ್​ನಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದ ಆಲಿಯಾಗೆ ಈ ಕಮೆಂಟ್​ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ.

ಇದನ್ನೂ ಓದಿ: ರಾಘವ್​​ ಶರ್ಟ್ ಧರಿಸಿ ಬಂದ ಪರಿಣಿತಿ: ಮದುವೆ ಯಾವಾಗ? ಎಂದು ಪ್ರಶ್ನಿಸಿದ ಫ್ಯಾನ್ಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.