ETV Bharat / entertainment

Guntur Kaaram: ಪೂಜಾ ಹೆಗ್ಡೆ ಸ್ಥಾನಕ್ಕೆ ಶ್ರೀಲೀಲಾ - 'ಗುಂಟೂರು ಕಾರಂ'ಗೆ ಮೀನಾಕ್ಷಿ ಛೌಧರಿ ಹೊಸ ಎಂಟ್ರಿ - Sreeleela

'ಗುಂಟೂರ್ ಕಾರಂ' ಚಿತ್ರತಂಡದಲ್ಲಿ ಕೆಲ ಬದಲಾವಣೆ ಆಗಿದೆ.

Meenakshii Chaudhary to Guntur Kaaram
'ಗುಂಟೂರು ಕಾರಂ'ಗೆ ಮೀನಾಕ್ಷಿ ಛೌಧರಿ
author img

By

Published : Jun 25, 2023, 5:22 PM IST

'ಗುಂಟೂರ್ ಕಾರಂ' ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ. ಟಾಲಿವುಡ್​​ ಸೂಪರ್​ ಸ್ಟಾರ್​ ಮಹೇಶ್ ಬಾಬು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿ ಬರುತ್ತಿರುವ 'ಗುಂಟೂರ್ ಕಾರಂ' ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ, ಸಂಗೀತ ನಿರ್ದೇಶಕ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಮಾಡುತ್ತಾ ಸಖತ್​ ಸುದ್ದಿಯಲ್ಲಿದೆ.

ಚಿತ್ರದ ನಾಯಕ ನಟಿ ಪೂಜಾ ಹೆಗ್ಡೆ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನಿಂದ ಹೊರಗುಳಿದ ನಂತರ ಮಹೇಶ್ ಬಾಬು ಅವರ 'ಗುಂಟೂರ್ ಕಾರಂ' ಸಖತ್​ ಸುದ್ದಿ ಮಾಡಿತು. ಅದಕ್ಕೂ ಮುನ್ನ, ಸಂಗೀತ ಸಂಯೋಜಕ ಥಮನ್ ಕೂಡ ಚಿತ್ರತಂಡದಿಂದ ಹೊರಗುಳಿಯುತ್ತಾರೆ ಎಂದು ಹೇಳಲಾಯಿತು. ಶೂಟಿಂಗ್​​ ಡೇಟ್ಸ್ ಕೊರತೆ ಹಿನ್ನೆಲೆ, ಪೂಜಾ ಹೆಗ್ಡೆ ಈ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆ ಚಿತ್ರಕ್ಕಾಗಿ ಇನ್ನೋರ್ವ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ಮುಂದಾಯಿತು.

ವರದಿಗಳ ಪ್ರಕಾರ, ಮೀನಾಕ್ಷಿ ಛೌಧರಿ (Meenakshii Chaudhary) ಗುಂಟೂರು ಕಾರಂ ತಂಡವನ್ನು ಸೇರಲಿದ್ದಾರೆ. ಆದರೆ ನಟಿ ಪೂಜಾ ಹೆಗ್ಡೆ ಸ್ಥಾನಕ್ಕೆ ಮೀನಾಕ್ಷಿ ಚೌಧರಿ ಬರುತ್ತಿಲ್ಲ. ಶ್ರೀಲೀಲಾ ಅವರಿಗೆ ಆಫರ್ ಮಾಡಿದ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅಂದ್ರೆ ನಟಿ ಶ್ರೀಲೀಲಾ ಕೂಡ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಭಾಗವಾಗೋದು ಡೌಟ್​ ಅಂತೀರಾ. ಇಲ್ಲ, ಹಾಗೇನಿಲ್ಲ. ನಟಿ ಶ್ರೀಲೀಲಾ 'ಗುಂಟೂರ್ ಕಾರಂ'ನಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಶ್ರೀಲೀಲಾ ಜೀವ ತುಂಬಬೇಕೆಂದು ಚಿತ್ರ ತಯಾರಕರು ನಿರ್ಧರಿಸಿದ್ದಾರೆ. ಹಾಗಾಗಿ ಮೀನಾಕ್ಷಿ ಚೌಧರಿ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯಾಗಿದ್ದರೂ ಶೂಟಿಂಗ್​ನಲ್ಲಿ ಭಾಗಿ: 'ಹಾರ್ಟ್ ಆಫ್​ ಸ್ಟೋನ್'​ ಅನುಭವ ಹಂಚಿಕೊಂಡ ಆಲಿಯಾ ಭಟ್​

ಮೀನಾಕ್ಷಿ ಛೌಧರಿ 2021 ರಲ್ಲಿ ಬಿಡುಗಡೆಯಾದ ತೆಲುಗು ಚಲನಚಿತ್ರ ಇಚಟ ವಾಹನಮುಲು ನಿಲುಪರಡು (Ichata Vahanamulu Niluparadu) ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಅವರು ಮಿಸ್ಟರಿ ಥ್ರಿಲ್ಲರ್ 'ಹಿಟ್ : ದಿ ಫಸ್ಟ್ ಕೇಸ್‌'ನ ಸೀಕ್ವೆಲ್​​ನ ನಾಯಕಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡರು.

ಇದನ್ನೂ ಓದಿ: 'ಗುಂಟೂರ್ ಕಾರಂ'ನಿಂದ ಹೊರಬಂದ ಪೂಜಾ ಹೆಗ್ಡೆ​​: ಮಹೇಶ್ ಬಾಬು ಜೊತೆ ಸ್ಕ್ರೀನ್​ ಶೇರ್ ಮಾಡಿಲಿರುವ ನಟಿ ಯಾರು?

ಸಂಗೀತ ಸಂಯೋಜಕ ಥಮನ್ ಚಿತ್ರದಿಂದ ಹೊರಗುಳಿದ ನಂತರ ಚಿತ್ರ ತಯಾರಕರು ಅನಿರುದ್ಧ್ ರವಿಚಂದರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪೂಜಾ ಅವರು ಚಿತ್ರದಿಂದ ಹೊರನಡೆಯಲು ಕಾರಣ ಶೂಟಿಂಗ್​ ಡೇಟ್ಸ್ ಸಮಸ್ಯೆ ಎಂದು ಹೇಳಲಾಗಿದ್ದರೂ, ಥಮನ್ ಏಕೆ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬುದರ ಕುರಿತು ಏನೂ ತಿಳಿದುಬಂದಿಲ್ಲ. ಮಹೇಶ್ ಬಾಬು ಅವರ 28ನೇ ಚಿತ್ರವಾಗಿರುವ ಗುಂಟೂರು ಕಾರಂ, ಜನವರಿ 13, 2024 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಫ್ಲ್ಯಾನ್​ ಮಾಡಿಕೊಂಡಿದೆ. ಆದ್ರೆ ಚಿತ್ರತಂಡದಲ್ಲಿ ಹಲವು ಬದಲಾವಣೆ ಆಗುತ್ತಿದ್ದು, ಸಿನಿಮಾ ವಿಳಂಬವಾಗುವ ಸಾಧ್ಯತೆ ಕೂಡ ಇದೆ. ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.