ಹಲವು ವಿವಾದಗಳ ಬಳಿಕ ಮದುವೆ, ಚುಂಬನದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿರುವ ಸೆಲೆಬ್ರಿಟಿ ಜೋಡಿ ಅಂದ್ರೆ ಅದು ತೆಲುಗು ನಟ ನರೇಶ್ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್. ನಟ ನರೇಶ್ ಮೂರನೇ ಪತ್ನಿಗೆ ವಿಚ್ಛೇದನ ನೀಡದೇ ಈ ಜೋಡಿ ಮದುವೆಯಾದರು ಎಂದು ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಯಿತು. ಇದರ ಬೆನ್ನಲ್ಲೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮ ರಿಯಲ್ ಸ್ಟೋರಿಯನ್ನು 'ಮತ್ತೆ ಮದುವೆ' ಎಂಬ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ತರಲು ಸಜ್ಜಾಗಿದ್ದಾರೆ ಎಂಬುದು ಬೆಳಕಿಗೆ ಬಂತು. ಕೆಲ ದಿನಗಳ ಹಿಂದೆ 'ಮತ್ತೆ ಮದುವೆ' ಸಿನಿಮಾ ಟೀಸರ್ ರಿವೀಲ್ ಆಗಿತ್ತು. ಇದೀಗ ಉರುಳೋ ಕಾಲವೇ ಎಂಬ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ.
- " class="align-text-top noRightClick twitterSection" data="">
ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿರುವ ಹಾಡಿಗೆ ಸಂತೋಷ್ ವೆಂಕಿ ದನಿಯಾಗಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ 'ಉರುಳೋ ಕಾಲವೇ' ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯವಯಸ್ಸಿನಲ್ಲಿ ಪ್ರೀತಿಯಿಂದ ವಂಚಿತರಾಗುವ ಜೋಡಿ, ಹೇಗೆ ಪರಸ್ಪರ ಪ್ರೀತಿಯನ್ನು ಕಂಡುಕೊಂಡು ಒಂದಾಗುತ್ತಾರೆ ಎಂಬ ಕಥೆ ಹೊಂದಿದೆ ಈ ಸಿನಿಮಾ.
ಮೂಲಗಳ ಪ್ರಕಾರ, ನರೇಶ್ ಅವರೇ ತಮ್ಮ ಕಥೆಯನ್ನು ಸಿನಿಮಾ ಮೂಲಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ನರೇಶ್ ಮತ್ತು ಪವಿತ್ರಾ ಪ್ರೀತಿ ಕುರಿತು ಸಾಕಷ್ಟು ಸುದ್ದಿಯಾಗಿರುವ ಹಿನ್ನೆಲೆ, ಈ ಕುರಿತು ಎಲ್ಲಾ ಪ್ರಶ್ನೆಗಳಿಗೂ ಚಿತ್ರದಲ್ಲಿ ಉತ್ತರ ಸಿಗಲಿದೆ ಎನ್ನಲಾಗಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಲ್ಲದೇ ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧು ಅವರನ್ನು ಒಳಗೊಂಡ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.
- " class="align-text-top noRightClick twitterSection" data="">
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ನರೇಶ್ ನಿರ್ಮಾಣ ಮಾಡಿರುವ 'ಮತ್ತೆ ಮದುವೆ' ಚಿತ್ರಕ್ಕೆ ಎಂ.ಎಸ್. ರಾಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ದೈವದೊಂದಿಗೆ ಡಿವೈನ್ ಸ್ಟಾರ್: ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿ, ವಿಡಿಯೋ ನೋಡಿದ್ರಾ?
ಈ ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನವಿದ್ದು, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಮೇ ತಿಂಗಳಲ್ಲಿ ಥಿಯೇಟರ್ ಅಂಗಳ ಪ್ರವೇಶಿಸಲಿದೆ.
ಇದನ್ನೂ ಓದಿ: ಪುನಿತ್ - ಯುವ ರಾಜ್ಕುಮಾರ್ ನಡುವೆ ಸಾಮ್ಯತೆ ಹುಡುಕುತ್ತಿರುವ ಫ್ಯಾನ್ಸ್: '5'ರ ಸೀಕ್ರೆಟ್ ಇಲ್ಲಿದೆ
ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಟೀಸರ್ ನರೇಶ್ ಮತ್ತು ಪವಿತ್ರಾ ಅವರ ನಿಜ ಕಥೆಯಂತಿದೆ. ತೆಲುಗು ನಟ ನರೇಶ್ ಅವರ ಮೂರನೇ ಪತ್ನಿ ನಡೆಸಿದ ಗಲಾಟೆ, ಮೈಸೂರಿನ ಹೋಟೆಲ್ನಲ್ಲಿ ನಡೆದ ಘಟನೆ, ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ನಲ್ಲಿದೆ. ತಮ್ಮ ನಿಜ ಜೀವನದಲ್ಲಿ ನಡೆದ ಘಟನೆಯನ್ನೇ ಕಥೆಯಾಗಿ ತೆಗೆದುಕೊಂಡಂತಿದ್ದು, ಇದು ರಿಯಲ್ ಲೈಫ್ ಸ್ಟೋರಿಯಂತೆ ಭಾಸವಾಗಿದೆ. ಇತ್ತೀಚೆಗೆ ಬಂದ ಮದುವೆ ವಿಡಿಯೋ, ಚುಂಬನದ ವಿಡಿಯೋ ಕೂಡ ಸಿನಿಮಾದ್ದೇ ಎಂದು ಹೇಳಲಾಗುತ್ತಿದ್ದು, ಚಿತ್ರ ಬಿಡುಗಡೆ ಆದ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ.