ಟ್ರೈಲರ್ ಹಾಗೂ ಟೈಟಲ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ಸಿನಿಮಾ ಮತ್ತೆ ಮದುವೆ. ಟಾಲಿವುಡ್ ನಟ ನರೇಶ್ ಹಾಗೂ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್ ವಿಚಾರವಾಗಿ ದಕ್ಷಿಣ ಭಾರತದಲ್ಲಿ ಇತ್ತೀಚಿಗೆ ಭಾರಿ ಸುದ್ದಿಯಾದ ಸೆಲೆಬ್ರಿಟಿ ಜೋಡಿ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ವೈಯಕ್ತಿಕ ಜೀವನ ಆಧರಿಸಿದ ಸಿನಿಮಾ ಮತ್ತೆ ಮದುವೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ನಿರ್ಮಾಣ ಆಗಿದ್ದು, ಈಗಾಗಲೇ ಈ ಸಿನಿಮಾ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಇದೇ ತಿಂಗಳು 9ರಂದು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಪ್ರಚಾರಕ್ಕೆ ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಮಾಧ್ಯಮಗೋಷ್ಟಿ ನಡೆಸಿದರು. ನಟ ನರೇಶ್ ಮಾತನಾಡಿ, ಈಗಾಗಲೇ ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರನ್ನು ರಂಜಿಸಿದೆ. ಅಷ್ಟೇ ಅಲ್ಲ, ನಮ್ಮ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ಮಾಡುವ ಯೋಜನೆ ಇಲ್ಲಾ. ಒಳ್ಳೆಯ ಕಂಟೆಂಟ್ ಇರುವ, ಸದ್ಯ ಸಮಾಜದಲ್ಲಿ ಗಂಡ, ಹೆಂಡತಿ ಸಂಬಂಧಗಳ ಕುರಿತ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾ ನೋಡಿದವರೆಲ್ಲ ಚೆನ್ನಾಗಿದೆ ಎಂದು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಷ್ಟೇ ಸಾಕು ಎಂದು ಹೇಳಿದರು.
ಈಗ ಕನ್ನಡದಲ್ಲಿ ಜೂನ್ 9ರಂದು ಮತ್ತೆ ಮದುವೆ ಸಿನಿಮಾ ಬಿಡುಗಡೆ ಆಗುತ್ತಿದೆ. ರಂಗಸ್ಥಳಂ ಹಾಗೂ ಆರ್ಆರ್ಆರ್, ಪುಷ್ಪ ಅಂತಹ ಪರಭಾಷೆಯ ಸಿನಿಮಾಗಳಿಗೆ ಕನ್ನಡದಲ್ಲಿ ಡಬ್ಬಿಂಗ್ ಜೊತೆಗೆ ಹಾಡುಗಳನ್ನ ಬರೆದಿರುವ ವರದರಾಜ್ ಚಿಕ್ಕಬಳ್ಳಾಪುರ ಮತ್ತೆ ಮದುವೆ ಸಿನಿಮಾಗೆ ಬಹಳ ಅಚ್ಚುಕಟ್ಟಾಗಿ ಡಬ್ಬಿಂಗ್ ಜೊತೆಗೆ ಅದ್ಭುತ ಹಾಡುಗಳನ್ನ ಕನ್ನಡದಲ್ಲಿ ಬರೆದಿದ್ದಾರೆ. ಇವರ ಸಹಾಯದಿಂದ ಮತ್ತೆ ಮದುವೆ ಚಿತ್ರದ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ. ಅದು ತುಂಬಾ ಖುಷಿ ಕೊಟ್ಟಿದೆ ಎಂದರು.
ನನಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡೋದಿಕ್ಕೆ ಪವಿತ್ರಾ ಲೋಕೇಶ್ ತುಂಬಾನೇ ಸಹಾಯ ಮಾಡಿದರು. ಪವಿತ್ರ ಹೇಳಿದಂತೆ ನಾನು ಕನ್ನಡದ ಕಲಿಯುತ್ತೇನೆ. ನನಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಜೊತೆ ತುಂಬಾನೇ ಒಡನಾಟ ಇದೆ. ನನ್ನ ಆತ್ಮೀಯ ಗೆಳೆಯರಲ್ಲಿ ಅಂಬರೀಶ್ ಮೊದಲಿಗರಾಗಿದ್ದರು. ಶಿವರಾಜ್ ಕುಮಾರ್ ನನ್ನ ಕಾಲೇಜ್ ಮೇಟ್.. ಹೀಗೆ ಕನ್ನಡ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳ ಜೊತೆ ನನ್ನ ಗೆಳೆತನ ಇದೆ ಎಂದು ನರೇಶ್ ನೆನೆದರು.
ಸದ್ಯ ಮತ್ತೆ ಮದುವೆ ಚಿತ್ರ ಬಿಡುಗಡೆ ಖುಷಿಯಲ್ಲಿರೋ ನಟ ನರೇಶ್ ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೆ ಪಾತ್ರ ಬಂದರೆ ಕನ್ನಡದಲ್ಲೂ ಅಭಿನಯಿಸುತ್ತೇನೆ. ಈ ಹಿಂದೆ ಸಾಕಷ್ಟು ಸಿನಿಮಾಗಳಿಗೆ ಆಫರ್ ಬಂದಿತ್ತು. ಆದರೆ ಆಗ ಸಿನಿಮಾ ಡೇಟ್ ನಿಂದಾಗಿ ಆಗಲಿಲ್ಲ. ಈಗ ಒಳ್ಳೆ ಕ್ಯಾರೆಕ್ಟರ್ ಸಿಕ್ಕರೆ ಕನ್ನಡದಲ್ಲಿ ಅಭಿನಯಿಸುತ್ತೇನೆ ಅಂದರು. ಇದರ ಜೊತೆಗೆ ಕನ್ನಡದ ಯಂಗ್ ಟ್ಯಾಲೆಂಟ್ ನಿರ್ದೇಶಕರು ಹಾಗು ನಟರು ಒಳ್ಳೆ ಸಿನಿಮಾ ಕಥೆ ಬಂದರೆ ವಿಜಯ ಕೃಷ್ಣ ಮೂವೀಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ನಟ ನರೇಶ್ ಹೇಳಿದರು. ಯಾಕಂದ್ರೆ ಇಡೀ ಇಂಡಿಯಾದಲ್ಲಿ ಕನ್ನಡ ಹಾಗೂ ತೆಲುಗು ಭಾಷೆ ಅಗ್ರಸ್ಥಾನದಲ್ಲಿವೆ ಎಂದು ನರೇಶ್ ತಿಳಿಸಿದರು.
ಇದನ್ನೂ ಓದಿ:ದಾಂಪತ್ಯದಲ್ಲಿ 50 ವರ್ಷ ಪೂರೈಸಿದ ಅಮಿತಾಭ್ ಬಚ್ಚನ್- ಜಯಾ: ಮಗಳಿಂದ ಸ್ಪೆಷಲ್ ಫೋಟೋ ಶೇರ್