ETV Bharat / entertainment

Sathish Ninasam: ನಟ ಸತೀಶ್​ ನೀನಾಸಂ ಹುಟ್ಟುಹಬ್ಬ- ಹೊಸ ಪೋಸ್ಟರ್‌ ಮೂಲಕ 'ಮ್ಯಾಟ್ನಿ' ಚಿತ್ರತಂಡದಿಂದ ಶುಭಾಶಯ

ನಟ ಸತೀಶ್​ ನೀನಾಸಂ ಹುಟ್ಟುಹಬ್ಬಕ್ಕೆ 'ಮ್ಯಾಟ್ನಿ' ಚಿತ್ರತಂಡ ಹೊಸ ಪೋಸ್ಟರ್​ನೊಂದಿಗೆ ಶುಭಾಶಯ ಕೋರಿದ್ದಾರೆ. ​

sathish ninasam
ಸತೀಶ್​ ನಿನಾಸಂ
author img

By

Published : Jun 20, 2023, 5:41 PM IST

ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ, ಅಭಿನಯ ಚತುರ ಸತೀಶ್​ ನೀನಾಸಂಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಸ್ನೇಹಿತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಸತೀಶ್​ ಬರ್ತ್​ಡೇಗೆ ವಿಶ್​ ಮಾಡುತ್ತಿದ್ದಾರೆ. 'ಮ್ಯಾಟ್ನಿ' ಚಿತ್ರತಂಡ ನಟನಿಗೆ ಹೊಸ ಪೋಸ್ಟರ್​ನೊಂದಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ಪೋಸ್ಟರ್​ ಸತೀಶ್​ ಅಭಿಮಾನಿಗಳ ವಲಯದಲ್ಲಿ ಟ್ರೆಂಡಿಂಗ್​ ಆಗಿದೆ.

ಸದ್ಯ ಸತೀಶ್​ ನೀನಾಸಂ 'ಮ್ಯಾಟ್ನಿ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಮನೋಹರ್ ಕಂಪಲ್ಲಿಯವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಲವ್ ಸ್ಟೋರಿ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡಿದೆ. 'ಅಯೋಗ್ಯ' ಸಿನಿಮಾದ ಬಳಿಕ ಸತೀಶ್​ ಮತ್ತು ರಚಿತಾ ಮ್ಯಾಟ್ನಿ ಚಿತ್ರದ ಮೂಲಕ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅದಿತಿ ಪ್ರಭುದೇವ್​ ಕೂಡ ನಾಯಕಿಯಾಗಿ ನಟಿಸಿದ್ದಾರೆ.

ಮ್ಯಾಟ್ನಿ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್​ ರಾಜ್ ಮತ್ತು​ ಕೀರ್ತನ್​ ಪೂಜಾರಿ ಛಾಯಾಗ್ರಹಣ, ಕೆ.ಎಂ ಪ್ರಕಾಶ್​ ಸಂಕಲನವಿದೆ. ಚಿತ್ರವನ್ನು ಪಾರ್ವತಿ ಎಸ್​ ಗೌಡ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರೇಮಿಗಳ ದಿನಕ್ಕೆ ಟೀಸರ್​ ಅನ್ನು ಚಿತ್ರತಂಡ ಉಡುಗೊರೆಯಾಗಿ ನೀಡಿತ್ತು. ಟೀಸರ್​ ಬಗ್ಗೆ ಎಲ್ಲೆಡೆ ಮೆಚ್ಚುಗೆ ಕೇಳಿಬಂದಿತ್ತು. ಅತೀ ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆಗೂ ಪ್ಲಾನ್​ ಮಾಡಿಕೊಂಡಿದೆ.

ಇದನ್ನೂ ಓದಿ: 'ನಿಲ್ಲಲೇ ಬೇಕು ಎಲ್ಲ ಧಿಮಾಕು'..ಮಲಯಾಳಂ ಜೊತೆ ಕನ್ನಡದಲ್ಲೂ 'ಧೂಮಂ' ರಿಲೀಸ್​

ಸಹನಟನಿಂದ ನಾಯಕ ನಟನವರೆಗೆ...: ಮಂಡ್ಯ ಮೂಲದ ಸತೀಶ್​ ನೀನಾಸಂ 2008ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 'ಲೈಫ್​ ಇಷ್ಟೇನೆ', 'ಪಂಚರಂಗಿ' ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೆ ಪರಿಚಯವಾದರು. ಬಳಿಕ ಇವರಿಗೆ ಬಿಗ್​ ಬ್ರೇಕ್​ ಕೊಟ್ಟಿದ್ದು ಮಾತ್ರ 'ಡ್ರಾಮಾ' ಚಿತ್ರ. ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಅಭಿನಯದ ಈ ಸಿನಿಮಾದಲ್ಲಿನ ಸತೀಶ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.​

ಇದಾದ ನಂತರ ಪವನ್​ ನಿರ್ದೇಶನದ 'ಲೂಸಿಯಾ' ಸಿನಿಮಾದಲ್ಲಿ ಸತೀಶ್​ ನಾಯಕ ನಟನಾಗಿ ಅಭಿನಯಿಸಿದರು. ಮೊದಲನೇ ಚಿತ್ರಕ್ಕೆ ಭರವಸೆಯ ನಾಯಕ ನಟನಾಗಿ ಗುರುತಿಸಿಕೊಂಡರು. ಈ ಚಿತ್ರ ಅವರಿಗೆ ಹಿಟ್​ ನೀಡಿತು. ಅದರ ನಂತರ 'ಕ್ವಾಟ್ಲೆ ಸತೀಶ್​' ಸಿನಿಮಾ ಬಂತು. ಕಾಮಿಡಿ ಮಾಡುವ ಮೂಲಕವೂ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಸತೀಶ್​ ಯಶಸ್ವಿಯಾದರು.

ಆ ನಂತರ ಬಂದ 'ಲವ್​ ಇನ್​ ಮಂಡ್ಯ', 'ರಾಕೆಟ್​', 'ಬ್ಯೂಟಿಫುಲ್​ ಮನಸ್ಸುಗಳು', 'ಟೈಗರ್​ ಗಲ್ಲಿ' ಬಂದವು. ಬಳಿಕ ಬಂದ 'ಅಯೋಗ್ಯ' ಸಿನಿಮಾ ಸೂಪರ್​ ಹಿಟ್​ ಆಯಿತು. ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಆ ನಂತರ ಬಂದ 'ಡಿಯರ್​ ವಿಕ್ರಮ್​' ಯಶಸ್ವಿಯಾಯಿತು. ಉತ್ತಮ ಸಿನಿಮಾವಾಗಿ ಗುರುತಿಸಿಕೊಂಡಿತು. 'ಪಗೈವನುಕು ಅರುಳ್ಳಾಯ್' ತಮಿಳು ಸಿನಿಮಾದಲ್ಲೂ ಸತೀಶ್​ ನಟಿಸಿದ್ದಾರೆ.

ಸದ್ಯ ನೀನಾಸಂ ಕೈಯಲ್ಲಿ ಮೂರು ಪ್ರಾಜೆಕ್ಟ್​ಗಳಿವೆ. 'ದಸರಾ', 'ಮ್ಯಾಟ್ನಿ', 'ಅಶೋಕ ಬ್ಲೇಡ್'​ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ 'ಮ್ಯಾಟ್ನಿ' ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Guinness Record: 30 ದಿನದಲ್ಲಿ ಸಿನಿಮಾ ನಿರ್ಮಾಣ! ಗಿನ್ನೆಸ್​ ದಾಖಲೆ ತುಡಿತದಲ್ಲಿ 'ದೇವರ ಆಟ ಬಲ್ಲವರಾರು' ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.