ಕೊಲ್ಹಾಪುರ (ಮಹಾರಾಷ್ಟ್ರ): ರಸ್ತೆ ಅಪಘಾತದಲ್ಲಿ ಮರಾಠಿ ನಟಿ ಕಲ್ಯಾಣಿ ಕುರಾಲೆ ಜಾಧವ್ ಮೃತಪಟ್ಟಿದ್ದು, ಅಭಿಮಾನಿಗಳು ದುಃಖಿತರಾಗಿದ್ದಾರೆ. ಟಿವಿ ಶೋ ತುಜ್ಞಾತ್ ಜೀವ್ ರಂಗ್ಲಾ ಮತ್ತು ದಖಂಚ ರಾಜ ಜ್ಯೋತಿಬಾ ಮೂಲಕ ಖ್ಯಾತಿ ಗಳಿಸಿದ್ದ ಕಲ್ಯಾಣಿ ಕುರಾಲೆ ನಿನ್ನೆ ರಾತ್ರಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ನಟಿ ತಮ್ಮ ರೆಸ್ಟೋರೆಂಟ್ ಅನ್ನು ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಕೊಲ್ಹಾಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಸಾಂಗ್ಲಿ-ಕೊಲ್ಲಾಪುರ ಹೆದ್ದಾರಿಯ ಡಿವೈಡರ್ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ ಎಂದು ಕೊಲ್ಲಾಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 'ಮಿರ್ಜಾ ಮಲಿಕ್ ಶೋ'.. ಬೇರ್ಪಡೆ ವದಂತಿ ನಡುವೆ ಒಟ್ಟಿಗೆ ಕೆಲಸ ಮಾಡಲು ಮುಂದಾದ ದಂಪತಿ
ಕಲ್ಯಾಣಿ ಸಾಯುವ 22 ಗಂಟೆಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸಲಾಡ್ ತಿನ್ನುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಕಲ್ಯಾಣಿ ಅವರು ಹೋ ನಾ ಹೋ ಹಾಡಿಗೆ ಹೆಜ್ಜೆ ಹಾಕಿರುವ ಅವರ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು. ಇದೀಗ ಅವರು ಇಲ್ಲ ಎನ್ನುವ ಸುದ್ದಿ ಕೇಳಿ ಕುಟುಂಬಸ್ಥರು, ಆತ್ಮೀಯರು, ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.