ತಮ್ಮ ಚೊಚ್ಚಲ ಚಿತ್ರ 'ಸಾಮ್ರಾಟ್ ಪೃಥ್ವಿರಾಜ್' ತೆರೆಕಂಡ ಹಿನ್ನೆಲೆ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಅವರು ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಅಕ್ಷಯ್ ಕುಮಾರ್ ಬಣ್ಣ ಹಚ್ಚಿರುವ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಜೂನ್ 3ರಂದು ತೆರೆ ಕಂಡಿದೆ. ಚಿತ್ರದಲ್ಲಿ ಅಕ್ಷಯ್ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಪಾತ್ರ ನಿರ್ವಹಿಸಿದರೆ, ಮಾನುಷಿ ರಾಜನ ಪ್ರೀತಿಯ ರಾಜಕುಮಾರಿ ಸಂಯೋಗಿತಾ ಪಾತ್ರದಲ್ಲಿ ನಟಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾನುಷಿ ಚಿಲ್ಲರ್, ಬಹು ನಿರೀಕ್ಷಿತ ಐತಿಹಾಸಿಕ ಚಿತ್ರಕ್ಕಾಗಿ ಗಣೇಶನ ಆಶೀರ್ವಾದ ಪಡೆಯಲು ಬಂದಿರುವೆ. ನಾನು ಉತ್ಸಾಹ ಮತ್ತು ಆತಂಕದಲ್ಲಿದ್ದೇನೆ. ನನ್ನ ಚೊಚ್ಚಲ ಚೆನ್ನಾಗಿರಲಿ ಎಂದು ನಾನು ಬಯಸುತ್ತೇನೆ. ಇದು ಹಿಂದಿ ಚಿತ್ರರಂಗದಲ್ಲಿ ನನ್ನ ವೃತ್ತಿಜೀವನ ಆರಂಭದ ಅತ್ಯಂತ ಪ್ರಮುಖವಾದ ದಿನವಾಗಿದೆ ಎಂದರು.
ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ, ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಇದನ್ನೂ ಓದಿ: ವಾರಾಣಸಿಯಲ್ಲಿ ಪೂಜೆ ಸಲ್ಲಿಸಿದ 'ಸಾಮ್ರಾಟ್ ಪೃಥ್ವಿರಾಜ್'.. ಹರ್ ಹರ್ ಮಹಾದೇವ್ ಘೋಷಣೆ!