ETV Bharat / entertainment

ತ್ರಿಶಾ, ಚಿರಂಜೀವಿ, ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮನ್ಸೂರ್ ಅಲಿ ಖಾನ್ - Khushbu

ಮನ್ಸೂರ್ ಅಲಿ ಖಾನ್ ಅವರು ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ತ್ರಿಶಾ ಕೃಷ್ಣನ್​​, ಖುಷ್ಬೂ ಸುಂದರ್, ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

Mansoor Ali Khan to file defamation case against Trisha, Khushbu, Chiranjeevi
ತ್ರಿಶಾ, ಚಿರಂಜೀವಿ, ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿರುವ ಮನ್ಸೂರ್ ಅಲಿ ಖಾನ್
author img

By ETV Bharat Karnataka Team

Published : Nov 26, 2023, 4:04 PM IST

ಚೆನ್ನೈ (ತಮಿಳುನಾಡು): ಲಿಯೋ ಸಹನಟಿ ತ್ರಿಶಾ ಕೃಷ್ಣನ್​​ ಬಗ್ಗೆ ಮಾಡಿದ್ದ ಕಾಮೆಂಟ್‌ಗಳಿಂದಾಗಿ ನಟ ಮನ್ಸೂರ್ ಅಲಿ ಖಾನ್ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದೊಂದು ವಾರದಿಂದ ದಕ್ಷಿಣ ಚಿತ್ರರಂಗದಲ್ಲಿ ಮನ್ಸೂರ್ ಅಲಿ ಖಾನ್ ಹೇಳಿಕೆ ಭಾರಿ​ ಸದ್ದು ಮಾಡುತ್ತಿದೆ. ಸಿನಿಮಾ ವಲಯದ ಖ್ಯಾತನಾಮರು ನಟನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಕಾನೂನು ಪ್ರಕ್ರಿಯೆ ಕೂಡ ಆರಂಭವಾಯ್ತು. ಪ್ರಕರಣ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಸಾರ್ವಜನಿಕವಾಗಿ ನಟಿಯಲ್ಲಿ ಕ್ಷಮೆಯಾಚಿಸಿದ್ದರು. ಅದಾಗ್ಯೂ, ತ್ರಿಶಾ ಕೃಷ್ಣನ್, ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಮತ್ತು ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಮನ್ಸೂರ್ ಘೋಷಿಸಿದ್ದಾರೆ.

  • A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…

    — Trish (@trishtrashers) November 18, 2023 " class="align-text-top noRightClick twitterSection" data=" ">

ಇಂದು ನಟನ ತಂಡ ಹೇಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ, ಮನ್ಸೂರ್ ಅಲಿ ಖಾನ್ ಅವರು ಮಾನನಷ್ಟ ಮೊಕದ್ದಮೆ ಹೂಡುವ ಉದ್ದೇಶವನ್ನು ವಿವರಿಸಲಾಗಿದೆ. ತಮ್ಮ ವಕೀಲರಾದ ಗುರು ಧನಂಜೇಯನ್ ಅವರ ಮೂಲಕ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ನವೆಂಬರ್ 11 ರಂದು ನಡೆದ ಮಾಧ್ಯಮಗೋಷ್ಟಿಯ ಮೂಲ ವಿಡಿಯೋವನ್ನೂ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ನಟಿ ತ್ರಿಶಾ ಅವರ ಬಗ್ಗೆ ತಮ್ಮ ಕಾಮೆಂಟ್‌ಗಳನ್ನು ತಪ್ಪಾಗಿ ಪ್ರತಿನಿಧಿಸುವ ವಿಡಿಯೋ ವೈರಲ್​ ಆಗಿದೆ ಎಂದು ಉಲ್ಲೇಖಿಸಿದ್ದಾರೆ. ಹೆಚ್ಚುವರಿ ಸಾಕ್ಷ್ಯಗಳೊಂದಿಗೆ ಪ್ರಕರಣವನ್ನು ದಾಖಲಿಸುವ ಯೋಜನೆಯನ್ನು ಖಾನ್ ಪ್ರಸ್ತಾಪಿಸಿದ್ದಾರೆ.

  • My attention was drawn to some reprehensible comments made by actor Mansoor Ali Khan about Trisha.

    The comments are distasteful and disgusting not just for an Artiste but for any woman or girl. These comments must be condemned in the strongest words. They reek of perversion.…

    — Chiranjeevi Konidela (@KChiruTweets) November 21, 2023 " class="align-text-top noRightClick twitterSection" data=" ">

ನಟಿ ತ್ರಿಶಾ ಕೃಷ್ಣನ್​​ ಕುರಿತ ಮನ್ಸೂರ್ ಅಲಿ ಖಾನ್ ಹೇಳಿಕೆ ವೈರಲ್​ ಆದ ಬೆನ್ನಲ್ಲೇ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸ್ವತಃ ತ್ರಿಶಾ ಕೃಷ್ಣನ್ ಅವರೇ ಅಸಮಾಧಾನ ಹೊರಹಾಕಿದ ಹಿನ್ನೆಲೆ ಪ್ರಕರಣ ತೀವ್ರ ಸ್ವರೂಪ ಪಡೆಯಿತು. ನಂತರ ಖುಷ್ಬೂ ಸುಂದರ್, ನಿರ್ದೇಶಕ ಲೋಕೇಶ್​ ಕನಕರಾಜ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ನಟನ ವಿರುದ್ಧ ಅಸಮಾಧಾನ ಹೊರಹಾಕಿ ಸೋಷಿಯಲ್​ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದರು. ಇದೀಗ ತ್ರಿಶಾ ಕೃಷ್ಣನ್​​, ಖುಷ್ಬೂ ಸುಂದರ್, ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪೋಷಕ ನಟ ಮನ್ಸೂರ್ ಅಲಿ ಖಾನ್ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ಸಲ್ಮಾನ್​ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಎಚ್ಚರಿಕೆ

ರಾಷ್ಟ್ರೀಯ ಮಹಿಳಾ ಆಯೋಗದ ನಿರ್ದೇಶನದ ನಂತರ ಚೆನ್ನೈನ ಥೌಸಂಡ್ ಲೈಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪೊಲೀಸ್ ವಿಚಾರಣೆ ಸಂದರ್ಭ ಖಾನ್ ತನ್ನ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ನಟಿ ಬಳಿ ಕ್ಷಮೆ ಕೋರಿದ್ದರು. ತ್ರಿಶಾ ಮನ್ಸೂರ್ ಅಲಿ ಖಾನ್ ಹೆಸರನ್ನು ಉಲ್ಲೇಖಿಸದೇ, ಕ್ಷಮೆಯಾಚಿಸಿರುವ ಅರ್ಥದಲ್ಲಿ ಸೀಕ್ರೆಟ್​ ಪೋಸ್ಟ್ ಶೇರ್ ಮಾಡಿದ್ದರು. ಅದಾಗ್ಯೂ, ಪೊಲೀಸ್ ಪ್ರಕರಣ ಸಕ್ರಿಯವಾಗಿದೆ.

ಇದನ್ನೂ ಓದಿ: ತಮನ್ನಾ ಭಾಟಿಯಾ ಗೆಳೆಯನಿಗೆ ಎದುರಾದ ಮದುವೆ ಪ್ರಶ್ನೆ: ವಿಜಯ್​ ವರ್ಮಾ ಉತ್ತರವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.