ETV Bharat / entertainment

ನಟಿ ತ್ರಿಶಾ ವಿರುದ್ಧ ಅಶ್ಲೀಲ ಹೇಳಿಕೆ: ಮನ್ಸೂರ್​ ಅಲಿ ಖಾನ್ ಸ್ಪಷ್ಟನೆ ಹೀಗಿದೆ​ - ತ್ರಿಶಾ ಮನ್ಸೂರ್

ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿರುವ ನಟ ಮನ್ಸೂರ್​ ಅಲಿ ಖಾನ್ ಮೌನ ಮುರಿದಿದ್ದಾರೆ.

Mansoor Ali Khan clarification to his comments on Trisha
ತ್ರಿಶಾ ಕುರಿತ ಹೇಳಿಕೆಗೆ ಮನ್ಸೂರ್​ ಅಲಿ ಖಾನ್ ಸ್ಪಷ್ಟನೆ
author img

By ETV Bharat Karnataka Team

Published : Nov 19, 2023, 5:31 PM IST

ದಕ್ಷಿಣ ಚಿತ್ರರಂಗದ ನಟ ಮನ್ಸೂರ್ ಅಲಿ ಖಾನ್ ಅವರು 'ಲಿಯೋ' ಚಿತ್ರದ ಸಹ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಾಕಷ್ಟು ಟೀಕೆ ಎದುರಿಸಿದ್ದರು. ತಮ್ಮ ಹೇಳಿಕೆ ಸುತ್ತ ಸೃಷ್ಟಿಯಾಗಿರುವ ವಿವಾದವನ್ನು ಉದ್ದೇಶಿಸಿ ನಟ ಮಾತನಾಡಿದ್ದಾರೆ. ತಮ್ಮ ಹೇಳಿಕೆಗಳು ವ್ಯಾಪಕ ಟೀಕೆ ಎದುರಿಸಿದ ನಂತರ, ಮನ್ಸೂರ್​ ಅಲಿ ಖಾನ್ ತಮ್ಮ ಕಾಮೆಂಟ್‌ಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿದ್ದಾರೆ. ನನ್ನ ಹೇಳಿಕೆಗಳು ಸಾಮಾನ್ಯವಾಗಿ ಮತ್ತು ತಮಾಷೆಯಾಗಿ ವ್ಯಕ್ತವಾಗಿವೆ ಎಂದು ತಿಳಿಸಿದ್ದಾರೆ.

ಮನ್ಸೂರ್​ ಅಲಿ ಖಾನ್ ಸ್ಪಷ್ಟನೆ: ನಟ ಮನ್ಸೂರ್​ ಅಲಿ ಖಾನ್ ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ, ನಟಿ ತ್ರಿಷಾ ಕೃಷ್ಣನ್ ಅವರಿಗೆ ಕಾಂಪ್ಲಿಮೆಂಟ್ಸ್ ಕೊಡುವ ಉದ್ದೇಶದಿಂದ ಆ ಹೇಳಿಕೆಗಳನ್ನು ನೀಡಿದ್ದೇನೆ ಎಂದಿದ್ದಾರೆ. ಲಿಯೋ ಚಿತ್ರದಲ್ಲಿ ನಟಿ ತ್ರಿಷಾ ಕೃಷ್ಣನ್ ಪಾತ್ರವನ್ನು ''ಪರ್ವತವನ್ನು ಹೊತ್ತ ಹನುಮಂತ''ನಿಗೆ ಹೋಲಿಸಲಾಗಿದೆ. ಚಿತ್ರದಲ್ಲಿ ಅವರ ಪಾತ್ರ ಬಹಳ ಪ್ರಮುಖವಾಗಿದೆ. ಅವರಿಗೆ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದೇನೆ. ವಿಷಾದನೀಯ ಸಂಗತಿ ಎಂದರೆ, ನನ್ನ ತಮಾಷೆಯ ಹೇಳಿಕೆಯನ್ನು ತೆಗೆದುಹಾಕಲಾಗಿದೆ, ಕೆಲ ಹೇಳಿಕೆಗಳನ್ನಷ್ಟೇ ಎಡಿಟ್​ ಮಾಡಿ ವೈರಲ್ ಮಾಡಲಾಗಿದೆ" ಎಂದು ಮನ್ಸೂರ್​ ಅಲಿ ಖಾನ್ ತಮಿಳಿನಲ್ಲಿ ಬರೆದುಕೊಂಡಿದ್ದಾರೆ.

ವಿವಾದನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಖಾನ್ ಅವರು, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ತಪ್ಪಾಗಿ ನಿರೂಪಿಸಲಾಗುತ್ತಿದೆ. ರಾಜಕೀಯದ ನಡೆ, ಸಿನಿಮಾಗಳ ಮೇಲೆ ಪ್ರಭಾವ ಬೀರಲು ಈ ರೀತಿ ಮಾಡಲಾಗುತ್ತಿದೆ ಎಂಬರ್ಥದಲ್ಲಿ ಮನ್ಸೂರ್ ಅಲಿ ಖಾನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮಹಿಳೆಯರ ಗೌರವದ ಬಗ್ಗೆ ಒತ್ತಿಹೇಳಿದರು. ಈ ಹಿಂದೆ ಹಲವು ನಟಿಮಣಿಯರೊಂದಿಗೆ ಕೆಲಸ ಮಾಡಿರುವುದು ಮತ್ತು ತಮ್ಮ ಹೆಣ್ಣುಮಕ್ಕಳನ್ನು ಬೆಳೆಸಿರುವ ರೀತಿ ತಮ್ಮ ವರ್ತನೆ, ಮೌಲ್ಯಗಳಿಗೆ ಸಾಕ್ಷಿಯಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…

    — Trish (@trishtrashers) November 18, 2023 " class="align-text-top noRightClick twitterSection" data=" ">

ಇದನ್ನೂ ಓದಿ: ತ್ರಿಶಾ ಬಗ್ಗೆ ಅವಹೇಳನಕಾರಿ ಹೇಳಿಕೆ: ಮನ್ಸೂರ್​ ಅಲಿ ಖಾನ್​ಗೆ ಚಿತ್ರರಂಗದಿಂದ ಛೀಮಾರಿ

ಮನ್ಸೂರ್​ ಅಲಿ ಖಾನ್ ಹೇಳಿಕೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ತಮ್ಮ ಅಸಮಧಾನ ಹೊರಹಾಕಿದ್ದಾರೆ. ನಟಿ ಖುಷ್ಬು ಸುಂದರ್, ನಿರ್ದೇಶಕ ಲೋಕೇಶ್ ಕನಕರಾಜ್, ಗಾಯಕಿ ಚಿನ್ಮಯಿ ಶ್ರೀಪಾದ ಸೇರಿದಂತೆ ಹಲವರು ನಟನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ: 'ಧೂಮ್' ಸಿನಿಮಾ ನಿರ್ದೇಶಕ ಸಂಜಯ್ ಗಧ್ವಿ ಹೃದಯಾಘಾತದಿಂದ ನಿಧನ

ಮನ್ಸೂರ್​ ಅಲಿ ಖಾನ್ ಹೇಳಿಕೆಯೇನು? ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ಮನ್ಸೂರ್ ಅಲಿ ಖಾನ್, ತ್ರಿಷಾ ಅವರೊಂದಿಗೆ ಅಂತಹ ದೃಶ್ಯಗಳಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದರು. ಇತರೆ ನಟಿಯರೊಂದಿಗಿನ ಆತ್ಮೀಯ ದೃಶ್ಯಗಳ (intimate scenes) ಬಗ್ಗೆ ಉಲ್ಲೇಖಿಸಿ, ತ್ರಿಷಾ ಜೊತೆ ಅಂತಹ ದೃಶ್ಯವಿರಲಿಲ್ಲ ಎಂದು ಹೇಳಿದ್ದರು. ಇದು ಸ್ವತಃ ನಟಿ ತ್ರಿಶಾ ಕೃಷ್ಣನ್ ಸೇರಿದಂತೆ ಹಲವರಿಂದ ಟೀಕೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.