ETV Bharat / entertainment

ಯಕ್ಷಗಾನದ ಸಿಂಹದ ಪಾತ್ರಕ್ಕಾಗಿ 8 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ: ರೂಪೇಶ್ ಶೆಟ್ಟಿ - ರೂಪೇಶ್ ಶೆಟ್ಟಿ ಮಂಕು ಭಾಯ್ ಫಾಕ್ಸಿ ರಾಣಿ

Manku Bhai Foxy Rani trailer: ಮಂಕು ಭಾಯ್ ಫಾಕ್ಸಿ ರಾಣಿ ಟ್ರೈಲರ್ ರಿಲೀಸ್ - ಜನವರಿ 13ರಂದು ಬಿಡುಗಡೆಯಾಗಲಿದೆ ಸಿನಿಮಾ - ರೂಪೇಶ್ ಶೆಟ್ಟಿ ನಟನೆಯ ಚಿತ್ರದ ಮೇಲೆ ಹೆಚ್ಚಿದ ನಿರೀಕ್ಷೆ.

Manku Bhai Foxy Rani
ಮಂಕು ಭಾಯ್ ಫಾಕ್ಸಿ ರಾಣಿ
author img

By

Published : Jan 7, 2023, 1:30 PM IST

Updated : Jan 8, 2023, 2:27 PM IST

ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಜೊತೆಗೆ ಹೊಸ ಕಥೆಯನ್ನು ಒಳಗೊಂಡಿರುವ ಚಿತ್ರಗಳು ಬರುತ್ತಿವೆ. ಈ ಸಾಲಿನಲ್ಲಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಮತ್ತು ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಹಾಗು ಪಂಚಮಿ ರಾವ್ ಮುಖ್ಯ ಭೂಮಿಕೆಯಲ್ಲಿರುವ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ ಇಂಥಹದ್ದೇ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಗಗನ್ ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

Manku Bhai Foxy Rani
ಮಂಕು ಭಾಯ್ ಫಾಕ್ಸಿ ರಾಣಿ ತಂಡ

ಸಿಂಹದ ವೇಷ ಹಾಕುವ ಯುವಕನ ಪ್ರೇಮಕಥೆ: ಟ್ರೈಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಗಗನ್ ಎಂ ಮಾತನಾಡಿ, ಈವರೆಗೆ ಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಮಂಕು ಭಾಯ್ ಫಾಕ್ಸಿ ರಾಣಿ ನನ್ನ ನಿರ್ದೇಶನದ ಮೊದಲ ಸಿನಿಮಾ. ಮೊದಲು ಇದನ್ನು ಶಾರ್ಟ್ ಮೂವಿ ಮಾಡೋಣ ಎಂದು ಪ್ಲಾನ್ ಮಾಡಿಕೊಂಡಿದ್ದೆ. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಸಿದ್ಧ ಮಾಡಿಕೊಂಡೆವು. 2019ರಲ್ಲಿ ಆರಂಭವಾದ ಸಿನಿಮಾ ಇದು. ಸದ್ಯ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಯುವಕನ ಜೀವನದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂದು ತಿಳಿಸಿದರು.

  • " class="align-text-top noRightClick twitterSection" data="">

ಬಿಗ್ ಬಾಸ್ ಬಗ್ಗೆ ರೂಪೇಶ್ ಶೆಟ್ಟಿ ಮಾತು: ನಟ ರೂಪೇಶ್ ಶೆಟ್ಟಿ ಮಾತನಾಡಿ, ಈ ಸಿನಿಮಾ ಚಿತ್ರೀಕರಣ ಆಗಿ ಮೂರು ವರ್ಷ ಆಯ್ತು. ಚಿತ್ರದಲ್ಲಿ 'ಕಂಟೆಂಟ್' ಹೀರೋ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಕಥೆ ಚಿತ್ರದಲ್ಲಿದೆ. ಸ್ನೇಹಿತರೇ ಆತನಿಗೆ ಪ್ರಪಂಚ. ಇದರೊಂದಿಗೆ ಒಂದು ಮುಗ್ಧ ಲವ್ ಸ್ಟೋರಿ ಇರುವ ಸಿನಿಮಾ. ನಿರ್ದೇಶಕ ಗಗನ್ ಒಂದು ಕನ್ನಡ ಸಿನಿಮಾ ಮಾಡೋಣ ಎಂದಾಗ ಒಪ್ಪಿಕೊಂಡೆ. ನಾನು ಸಿನಿಮಾ ಕಮರ್ಶಿಯಲ್ ಆಗಿರಬೇಕು, ಹೀಗಿರಬೇಕು ಅಂದುಕೊಂಡಿದ್ದೆ. ಆದ್ರೆ ಈ ಸಿನಿಮಾ ಪ್ಲಾಟ್ ಹಾಗಿರಲಿಲ್ಲ. ಚಿತ್ರಕ್ಕೆ ದಪ್ಪ ಆಗಬೇಕು, ದಾಡಿ ತೆಗೆಯಬೇಕು, ಯಕ್ಷಗಾನದಲ್ಲಿ ಸಿಂಹದ ಪಾತ್ರ ಮಾಡುವ ವ್ಯಕ್ತಿಯ ಪಾತ್ರ ಎಂದು ನಿರ್ದೇಶಕರು ಹೇಳಿದ್ರು. ಚಿತ್ರಕ್ಕಾಗಿ ಎಂಟು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಕನ್ನಡದಲ್ಲಿ ಲೀಡ್ ನಟನಾಗಿ ಅಭಿನಯಿಸುತ್ತಿರುವ ಐದನೇ ಸಿನಿಮಾವಿದು. ಡೇಂಜರ್ ಝೋನ್, ಅನುಷ್ಕಾ, ನಿಶಬ್ಧ 2, ಗೋವಿಂದ ಗೋವಿಂದ ಸಿನಿಮಾ ಮಾಡಿದ್ದೇನೆ. ಆಗೆಲ್ಲಾ ಆ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಆದ್ರೆ ಫಸ್ಟ್ ಟೈಂ ರೂಪೇಶ್ ಶೆಟ್ಟಿ ಸಿನಿಮಾ ಬರುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ, ಇದು ತುಂಬಾ ಖುಷಿ ಕೊಡ್ತಿದೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ. ಜನವರಿ 13ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

Manku Bhai Foxy Rani
ಮಂಕು ಭಾಯ್ ಫಾಕ್ಸಿ ರಾಣಿ ತಂಡ

ಮಂಗಳೂರು ಕನ್ನಡ ಕಲಿತಿದ್ದೇನೆ: ಗೀತಾ ಭಾರತಿ ಭಟ್ ಮಾತನಾಡಿ, ನನಗೆ ಈ ಪ್ರಾಜೆಕ್ಟ್ ವೈಯಕ್ತಿಕವಾಗಿ ಬಹಳ ಸ್ಪೆಷಲ್. ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದೇನೆ. ಆದ್ರೆ ಲೀಡ್ ರೋಲ್​ನಲ್ಲಿ ಅಭಿನಯ ಮಾಡಿರೋದು ಇದೇ ಮೊದಲು. ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಆರಂಭದಲ್ಲಿ ಮಂಗಳೂರು ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದ್ರೆ ಶೂಟಿಂಗ್ ಮುಗಿಯುವ ಹೊತ್ತಿಗೆ ಪೂರ್ತಿ ಮಂಗಳೂರು ಕನ್ನಡ ಕಲಿತಿದ್ದೇನೆ. ಸಿನಿಮಾ ಎರಡೂವರೆ ವರ್ಷದ ನಂತರ ತೆರೆ ಮೇಲೆ ಬರಲು ಸಜ್ಜಾಗಿದೆ. ನನ್ನನ್ನು ನಾನು ತೆರೆ ಮೇಲೆ ನೋಡಿಕೊಂಡಾಗ ಇನ್ನಷ್ಟು ಮುಂದೆ ಹೋಗಲು ಆತ್ಮ ವಿಶ್ವಾಸ ಬಂದಿದೆ ಎಂದು ತಿಳಿಸಿದರು.

ಕಥೆ ವಿಭಿನ್ನವಾಗಿದೆ: ನಟಿ ಪಂಚಮಿ ರಾವ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ನಾನು ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು. ಸಿನಿಮಾ ರಂಗದ ಮೇಲೆ ಮೊದಲಿನಿಂದಲೂ ಆಸಕ್ತಿ ಇತ್ತು. ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ನಿರ್ದೇಶಕರು ಕಥೆ ಹೇಳಿದಾಗ ಕಥೆ ತುಂಬಾ ಯೂನಿಕ್ ಎನಿಸಿತು. ಹಾಗಾಗಿ ಈ ಚಿತ್ರ ಒಪ್ಪಿಕೊಂಡೆ ಎಂದು ತಿಳಿಸಿದರು.

ಇದನ್ನೂ ಓದಿ: ಗಡಿ ವಿಚಾರ: 'ರಾಜಕಾರಣಿಗಳು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿಪಡಿಸಬೇಕು'- ಶಿವಣ್ಣ

ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ಜೋಶ್ವ ಜೈಶಾನ್ ಕ್ರಾಸ್ತ, ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನ್ಯಾಸ್ ಮದ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ ಷಜಹಾನ್ ಕ್ಯಾಮರಾ ವರ್ಕ್, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಚಿತ್ರಕ್ಕಿದೆ. ಸೆನ್ಸಾರ್​​ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರ ಜನವರಿ 13ರಂದು ತೆರೆಕಾಣಲಿದೆ.

Last Updated : Jan 8, 2023, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.