ETV Bharat / entertainment

ಬಿಡುಗಡೆಗೆ ಸಜ್ಜಾದ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ - Brahmagantu serial actress Geeta

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಬ್ರಹ್ಮಗಂಟು ಸೀರಿಯಲ್ ಕಲಾವಿದೆ ಗೀತಾ ಭಾರತಿ ಭಟ್ ಅಭಿನಯಿಸಿರುವ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ.

Manku Bhai Foxy Rani movie ready to release
ಬಿಡುಗಡೆಗೆ ಸಜ್ಜಾದ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ
author img

By

Published : Sep 15, 2022, 1:09 PM IST

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಡಿಫರೆಂಟ್ ಟೈಟಲ್​ಗಳುಳ್ಳ ಸಿನಿಮಾಗಳು ಬರುತ್ತಿವೆ. ವಿಭಿನ್ನ ಶೀರ್ಷಿಕೆಗಳಿಂದಲೇ ಸಿನಿಪ್ರಿಯರನ್ನು ಆಕರ್ಷಿಸುವ ಟ್ರೆಂಡ್ ಶುರುವಾಗಿದೆ. ಈಗ ಅಂಥಹದ್ದೇ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮೋತ್ಸಾಹಿಗಳ ತಂಡ ತಯಾರಿಸಿರುವ ಈ ಚಿತ್ರ ಸೆನ್ಸಾರ್ ಪಾಸಾಗಿ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ.

Manku Bhai Foxy Rani movie ready to release
ಬಿಡುಗಡೆಗೆ ಸಜ್ಜಾದ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಬ್ರಹ್ಮಗಂಟು ಸೀರಿಯಲ್ ಕಲಾವಿದೆ ಗೀತಾ ಭಾರತಿ ಭಟ್ ಅಭಿನಯಿಸಿದ್ದಾರೆ. ಪ್ರಕಾಶ್‌ ತೂಮಿನಾಡ್‌, ಪಂಚಮಿ ರಾವ್‌, ಅರ್ಜುನ್‌ ಕಜೆ ತಾರಾಬಳಗದಲ್ಲಿದ್ದಾರೆ. ತುಳು ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಗಗನ್ ಎಂ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಎಂ.ಕೆ.ಕೆ.ಷಹಜನ್‌ ಛಾಯಾಗ್ರಹಣ, ವಿನ್ಯಾಸ್‌ ಮದ್ಯ ಶಮೀರ್ ಮುಡಿಪು ಸಂಗೀತ ಹಾಗೂ ಸುಶಾಂತ್‌ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನವಿದೆ. ಜೋಶ್ವ ಜೈಶಾನ್ ಕ್ರಾಸ್ತ ನಿರ್ಮಾಣ ಮಾಡಿರುವ ಈ ಚಿತ್ರದ ಫಸ್ಟ್ ಟ್ರ್ಯಾಕ್ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋನು‌ ನಿಗಂ ಕಂಠದಲ್ಲಿ ಮೂಡಿಬಂದಿರುವ ಮಿಂಚಂತೆ ಮಿನುಗುತಿರೋ ಎಂಬ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್​ನಲ್ಲಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿದೆ. ಸದ್ಯ ಹಾಡಿನಿಂದ ಗಮನ ಸೆಳೆಯುತ್ತಿರೋ ಮಂಕು ಭಾಯ್ ಫಾಕ್ಸಿ ರಾಣಿ‌‌ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ಹೀರೋ ಆಗಲು 20 ಕೆಜಿ ತೂಕ ಇಳಿಸಿಕೊಂಡ ಹಾಸ್ಯ ನಟ ಅಪ್ಪಣ್ಣ: ಹೇಗೆ? ಅವರೇ ಹೇಳಿದ್ದಾರೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.