ETV Bharat / entertainment

ಮಲಯಾಳಂ ಹಾಸ್ಯನಟ ಮಾಮುಕ್ಕೋಯ ನಿಧನ - comedian Mamukkoya is no more

ಮಲಯಾಳಂ ಹಾಸ್ಯನಟ ಮಾಮುಕ್ಕೋಯ ಅವರು ಹೃದಯಾಘಾತದಿಂದ ಕೋಯಿಕ್ಕೋಡ್​ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಲಯಾಳಂ ಹಾಸ್ಯನಟ ಮಾಮುಕ್ಕೋಯ
ಮಲಯಾಳಂ ಹಾಸ್ಯನಟ ಮಾಮುಕ್ಕೋಯ
author img

By

Published : Apr 26, 2023, 3:48 PM IST

ಕೋಯಿಕ್ಕೋಡ್ (ಕೇರಳ): ಮಲಯಾಳಂ ಹಾಸ್ಯನಟ ಮಾಮುಕ್ಕೋಯ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರನ್ನು ಕೋಯಿಕ್ಕೋಡ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದ ಜೊತೆಗೆ ಮಿದುಳಿನ ರಕ್ತಸ್ರಾವವೂ ಆಗಿತ್ತು ಎಂಬುದು ತಿಳಿದುಬಂದಿದೆ.

ಮಲಪ್ಪುರಂನ ಕಾಳಿಕಾವು ಎಂಬಲ್ಲಿ ಸೋಮವಾರ ರಾತ್ರಿ (24.04.23) ಮಾಮುಕ್ಕೋಯ ಹೃದಯಾಘಾತಕ್ಕೆ ಒಳಗಾಗಿದ್ದರು. ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಲು ನಟ ಕಾಳಿಕಾವು ಪೂಂಗೊಡೆಗೆ ಬಂದಿದ್ದರು. ಕಾರ್ಯಕ್ರಮ ಆರಂಭವಾಗುವ ಮುನ್ನವೇ ಕುಸಿದು ಬಿದ್ದಿದ್ದರು. ಅನೇಕ ಹಾಸ್ಯ ಪಾತ್ರಗಳ ಮೂಲಕ ಮಲಯಾಳಿಗಳನ್ನು ನಗಿಸಿದ ಮಾಮುಕ್ಕೋಯ ಜನಪ್ರಿಯ ಹಾಸ್ಯನಟ. ತಮ್ಮ 44 ವರ್ಷಗಳ ನಟನಾ ವೃತ್ತಿಯಲ್ಲಿ ಮಲಯಾಳಂ ಚಿತ್ರರಂಗಕ್ಕೆ 450ಕ್ಕೂ ಹೆಚ್ಚು ಪಾತ್ರಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮಾಮುಕೋಯ ಅವರು ನಾಟಕದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದರು. ಅವರು ಜುಲೈ 5, 1946 ರಂದು ಮೊಹಮ್ಮದ್ ಮತ್ತು ಆಯೇಷಾ ದಂಪತಿಗಳಿಗೆ ಕೋಯಿಕ್ಕೋಡ್​​ ಜಿಲ್ಲೆಯ ಚಲಿಕಂಡಿಯಲ್ಲಿ ಜನಿಸಿದರು. ಒಬ್ಬ ಸಹೋದರನೂ (ಕೋಯಕುಟ್ಟಿ) ಇದ್ದಾನೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೋಯಿಕ್ಕೋಡ್‌ನ ಎಂಎಂ ಹೈಸ್ಕೂಲ್‌ನಲ್ಲಿ ಮಾಡಿದರು. ಸುಹಾ ಜೀವನ ಸಂಗಾತಿ. ನಾಲ್ಕು ಮಕ್ಕಳಿದ್ದಾರೆ. ಮುಹಮ್ಮದ್ ನಿಸಾರ್, ಶಾಹಿತಾ, ನದಿಯಾ ಮತ್ತು ಅಬ್ದುಲ್ ರಶೀದ್ ಕೋಝಿಕ್ಕೋಡ್​ನಲ್ಲಿ ವಾಸಿಸುತ್ತಿದ್ದಾರೆ.

ಮೇರುನಟ ಮಮ್ಮುಟ್ಟಿಗೆ ಮಾತೃ ವಿಯೋಗ: ಇತ್ತೀಚೆಗಷ್ಟೇ ಸೌತ್​ ಸಿನಿ ರಂಗದ ಸೂಪರ್‌ ಸ್ಟಾರ್ ಮಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ (Fathima Ismail) (ಏಪ್ರಿಲ್ 21-2023) ಮೃತಪಟ್ಟರು. ತಾಯಿ ನಿಧನದ ಹಿನ್ನೆಲೆ ಮಮ್ಮುಟ್ಟಿ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.

ಫಾತಿಮಾ ಇಸ್ಮಾಯಿಲ್ ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ನಿಧನರಾಗಿದ್ದರು . ಮಮ್ಮುಟ್ಟಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ. ಕೊಚ್ಚಿಯ ಚೆಂಬು ಮುಸ್ಲಿಂ ಜಮಾತ್ ಮಸೀದಿಯಲ್ಲಿ ಅಂತ್ಯಕ್ರಿಯೆ ನೆರವೇರಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಫಾತಿಮಾ ಇಸ್ಮಾಯಿಲ್: ಕಳೆದ ಕೆಲ ವರ್ಷಗಳಿಂದ ಫಾತಿಮಾ ಇಸ್ಮಾಯಿಲ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಲ್ಲಿದ್ದ ಸಂದರ್ಭವೇ ಆಸ್ಪತ್ರೆಯಲ್ಲೇ ಅಂದು ಮುಂಜಾನೆ ಕೊನೆಯುಸಿರೆಳೆದಿದ್ದರು. ಮಮ್ಮುಟ್ಟಿ ಅವರ ತಾಯಿ ನಿಧನದಿಂದ ಕುಟುಂಬ, ಮಲಯಾಳಂ ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದರು.

ಮಮ್ಮುಟ್ಟಿ ಭಾರತೀಯ ಚಿತ್ರರಂಗದ ಅದ್ಭುತ ನಟ. ಮಲಯಾಳಂ ಹಾಗೂ ತೆಲುಗು ಪ್ರೇಕ್ಷಕರ ಮನೆ ಮಾತು. ಹಲವು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಏಜೆಂಟ್ ಅವರ ಮುಂದಿನ ಚಿತ್ರ. ಆದರೆ, ಮಮ್ಮುಟ್ಟಿ ತಮ್ಮ ತಾಯಿಯ ಸಾವಿನ ನಂತರ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಏಜೆಂಟ್ ಚಿತ್ರದ ಪ್ರಚಾರದಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿತ್ತು. ಏಪ್ರಿಲ್ 28ರಂದು ತೆಲುಗು ಜೊತೆಗೆ ಮಲಯಾಳಂನಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಮೇರುನಟ ಮಮ್ಮುಟ್ಟಿಗೆ ಮಾತೃ ವಿಯೋಗ: ಫಾತಿಮಾ ಇಸ್ಮಾಯಿಲ್ ಇನ್ನಿಲ್ಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.