ETV Bharat / entertainment

ಮಲಯಾಳಂ ನಟಿಗೆ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಕಿರುಕುಳ, ಪೊಲೀಸರಿಗೆ ದೂರು - actress harassment case

ವಿಮಾನದಲ್ಲಿ ಪುರುಷ ಪ್ರಯಾಣಿಕನೋರ್ವ ಕಿರುಕುಳ ನೀಡಿರುವುದಾಗಿ ಮಲಯಾಳಂ ನಟಿ ಆರೋಪಿಸಿದ್ದಾರೆ.

Malayalam actress alleges harassment by fellow passenger on flight
ವಿಮಾನದಲ್ಲಿ ಮಲಯಾಳಂ ನಟಿಗೆ ಕಿರುಕುಳ ಆರೋಪ
author img

By ETV Bharat Karnataka Team

Published : Oct 11, 2023, 6:02 PM IST

ಮಂಗಳವಾರ ಮುಂಬೈನಿಂದ ಕೊಚ್ಚಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪುರುಷ ಪ್ರಯಾಣಿಕನೋರ್ವ ಕಿರುಕುಳ ನೀಡಿದ ಆರೋಪದ ಮೇರೆಗೆ ಮಲಯಾಳಂ ಚಿತ್ರರಂಗದ ನಟಿಯೋರ್ವರು ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದಾರೆ. ಘಟನೆಯನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಅವರು ವಿವರಿಸಿದ್ದಾರೆ.

ಪುರುಷ ಪ್ರಯಾಣಿಕರೋರ್ವರು ಕುಡಿದ ಮತ್ತಿನಲ್ಲಿ ನನಗೆ ಕಿರುಕುಳ ನೀಡಿದರು ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಪಟ್ಟ ಏರ್ಲೈನ್ಸ್ ನೀಡಿದ ಪ್ರತಿಕ್ರಿಯೆಯನ್ನು ನಟಿ ಟೀಕಿಸಿದ್ದಾರೆ. ವಿಮಾನ ಟೇಕ್‌ ಆಫ್‌ ಆಗುವ ಮುನ್ನ ತಮ್ಮನ್ನು ಬೇರೆ ಸೀಟಿಗೆ ಸ್ಥಳಾಂತರಿಸಿದ್ದು ಬಿಟ್ಟರೆ ಹೆಚ್ಚಿನ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ವಿಮಾನ ಲ್ಯಾಂಡ್​ ಆದ ನಂತರ ನಟಿ, ವಿಮಾನ ನಿಲ್ದಾಣದ ಸಂಬಂಧಪಟ್ಟ ಅಧಿಕಾರಿಗಳಿಗೆ ಘಟನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡುವಂತೆ ನಿರ್ದೇಶಿಸಿದ್ದಾರೆ. ಇಮೇಲ್ ಮೂಲಕ ನೀಡಿದ ದೂರಿನ ಪ್ರತಿಯನ್ನೂ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕ, ತನ್ನ ಸೀಟನ್ನು ಹೇಗೆ ತೆಗೆದುಕೊಂಡರು? ಅನುಚಿತವಾಗಿ (ದೈಹಿಕ) ಹೇಗೆ ವರ್ತಿಸಿದರು? ಹಾಗು ವಾಗ್ವಾದ ನಡೆಸಿದ ವಿಚಾರವನ್ನು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಅಮಿತಾಭ್​​ ಬಚ್ಚನ್ ಬರ್ತ್​​ಡೇ: ಕಲ್ಕಿ2898ಎಡಿ ಪೋಸ್ಟರ್ ರಿಲೀಸ್;​ ಪ್ರಭಾಸ್​ ಸ್ಪೆಷಲ್​ ವಿಶ್​

ಸ್ಥಳೀಯ ಪೋಲೀಸರು ಇಮೇಲ್ ಸ್ವೀಕರಿಸಿದ್ದು, ಫಾರ್ಮಲ್​ ಕಂಪ್ಲೈಟ್ ಆಗಿ ಪರಿಗಣಿಸುವಂತೆ ನಟಿ ವಿನಂತಿಸಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ. ನಟಿಯೊಂದಿಗೆ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದ ನಂತರ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ: 'ಹುವಾ ಮೈನ್'​ ರೊಮ್ಯಾಂಟಿಕ್​ ಸಾಂಗ್​: ರಣ್​​ಬೀರ್​-ರಶ್ಮಿಕಾ ಕೆಮಿಸ್ಟ್ರಿ ಮೆಚ್ಚಿದ ಫ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.