ETV Bharat / entertainment

ಮಾಜಿ ಪತಿಯ 2ನೇ ಮದುವೆ ಬೆನ್ನಲ್ಲೇ ಕ್ರಿಸ್​ಮಸ್​ ಆಚರಣೆ ಫೋಟೋ ಹಂಚಿಕೊಂಡ ಮಲೈಕಾ - ವೈವಾಹಿಕ ಜೀವನ

Malaika Arora shared Christmas post: ಭಾನುವಾರ ರಾತ್ರಿ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್​ ಖಾನ್​ ಅವರು ಮೇಕಪ್​ ಕಲಾವಿದೆ ಶುರಾ ಖಾನ್​ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕ್ರಿಸ್​ಮಸ್​ ಆಚರಣೆ ಫೋಟೋ ಹಂಚಿಕೊಂಡ ಮಲೈಕಾ ಅರೋರಾ
malaika arora shares first post after arbaaz khan marriage with sshura khan
author img

By ETV Bharat Karnataka Team

Published : Dec 25, 2023, 4:06 PM IST

ಹೈದರಾಬಾದ್​: ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್ ಖಾನ್ ಅವರು​ ಮೇಕಪ್​ ಕಲಾವಿದೆ ಶುರಾ ಖಾನ್​ ಜೊತೆಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಭಾಗವಹಿಸಿರದ ಮಲೈಕಾ ಅರೋರಾ, ಮಾಜಿ ಪತಿಯ ಮದುವೆ ನಂತರ ಸೋಶಿಯಲ್​ ಮೀಡಿಯಾದಲ್ಲಿ ಮೊದಲ ಪೋಸ್ಟ್​ ಹಂಚಿಕೊಂಡಿದ್ದಾರೆ. ಮಧ್ಯರಾತ್ರಿ ಸ್ನೇಹಿತರೊಂದಿಗೆ ಅವರು ಕ್ರಿಸ್‌ಮಸ್​ ಹಬ್ಬ ಆಚರಿಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ 18.7 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಮಲೈಕಾ ಅರೋರಾ, ತಮ್ಮ ಅಭಿಮಾನಿಗಳಿಗೆ ಕೇಕ್​ ಹಿಡಿದಿರುವ ಫೋಟೋ ಜೊತೆಗೆ ಕ್ರಿಸ್​ಮಸ್​ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅರ್ಬಾಜ್​ ಖಾನ್​ ಮದುವೆಯಲ್ಲಿ ಮಗ ಅರ್ಹಾನ್​ ಖಾನ್​ ಭಾಗವಹಿಸಿದ್ದರು.

ಹಬ್ಬದ ಉಡುಗೆಯಲ್ಲಿದ್ದ ಅರೋರಾ, ಕೇಕ್​ ಹಿಡಿದು ನಿಂತಿರುವ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. "ಮೆರಿ ಕ್ರಿಸ್​ಮಸ್​" ಎಂಬ ಶೀರ್ಷಿಕೆಯೊಂದಿಗೆ ಬೆಚ್ಚಗಿನ ಶುಭಾಶಯಗಳನ್ನು ಹೇಳಿದ್ದಾರೆ. ಬಿಳಿ ಬಣ್ಣದ ಚಿಕ್ಕ ಉಡುಗೆ ಧರಿಸಿದ್ದರು. ಕ್ರಿಸ್​ಮಸ್​ ಥೀಮ್​ಗೆ ತಕ್ಕಂತೆ ಕೆಂಪು ಹೇರ್​ಬ್ಯಾಂಡ್​ಗಳನ್ನು ತಮ್ಮ ಸ್ಟೈಲಿಶ್​ ಪೋನಿಟೇಲ್​ಗೆ ಕಟ್ಟಿಕೊಂಡಿದ್ದಾರೆ. ಉಳಿದ ಫೋಟೋಗಳಲ್ಲಿ ಹಬ್ಬಕ್ಕೆ ತಿಂಡಿಗಳನ್ನು ಜೋಡಿಸಿಟ್ಟಿರುವ ಡೈನಿಂಗ್​ ಟೇಬಲ್, ಹಬ್ಬದ ಅಲಂಕಾರ, ಮಗ ಅರ್ಹಾನ್​ ಖಾನ್​ ಮನೆಯ ನಾಯಿಯೊಂದಿಗೆ ಆಡುತ್ತಿರುವುದು ಇದೆ.

ಮಲೈಕಾ ಅವರ ಹಬ್ಬದ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬರುತ್ತಿವೆ. ಕಾಮೆಂಟ್​ ಬಾಕ್ಸ್​ಗಳಲ್ಲಿ ಅರ್ಬಾಜ್​ ಖಾನ್​ ಅವರ ಎರಡನೇ ಮದುವೆ ವಿಷಯವನ್ನು ಪಾಪರಾಜಿಗಳು ಎಳೆದು ತಂದಿದ್ದು, ಟ್ರೋಲ್​ ಕೂಡ ಮಾಡಲಾಗಿದೆ. ಆದರೆ ಇದ್ಯಾವುದಕ್ಕೂ ಹಿಂಜರಿಯದ ಮಲೈಕಾ, ಸಂತೋಷದಿಂದಲೇ ಅಭಿಮಾನಿಗಳ ಹಬ್ಬದ ಶುಭಾಶಯಗಳಿಗೆ ಪ್ರತಿಕ್ರಿಯಿಸಿದ್ದಾರೆ.

1998ರಲ್ಲಿ ಮದುವೆಯಾಗಿದ್ದ ಮಲೈಕಾ ಅರೋರಾ ಹಾಗೂ ಅರ್ಬಾಜ್​ ಖಾನ್ 19 ವರ್ಷಗಳ ಕಾಲ ಜೊತೆಯಾಗಿ ಜೀವನ ನಡೆಸಿದ್ದರು. 2016 ಮಾರ್ಚ್​ನಲ್ಲಿ ತಾವು ಪ್ರತ್ಯೇಕವಾಗುವುದಾಗಿ ಘೋಷಣೆ ಮಾಡಿದ್ದರು. 2017 ಮೇ ಯಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಅರ್ಬಾಜ್​ ಖಾನ್​ಗೆ ಡಿವೋರ್ಸ್​ ನೀಡಿದ ಬಳಿಕ ಮಲೈಕಾ, ಅರ್ಜುನ್​ ಕಪೂರ್​ ಜೊತೆ ರಿಲೇಶನ್​ಶಿಪ್​ನಲ್ಲಿದ್ದಾರೆ.

ಇದನ್ನೂ ಓದಿ: ಮೇಕಪ್ ಆರ್ಟಿಸ್ಟ್​​ ಶುರಾ ಖಾನ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅರ್ಬಾಜ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.