ಬಾಲಿವುಡ್ ಲವ್ ಬರ್ಡ್ಸ್ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರು ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಿರುವ ಈ ಜೋಡಿ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂದು ಕೂಡ ತಮ್ಮ ರಜಾ ದಿನದ ಕ್ಷಣಗಳನ್ನು ನಟಿ ಮಲೈಕಾ ಅರೋರಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಅರ್ಜುನ್ ಮತ್ತು ಮಲೈಕಾ ಅವರು ಹಂಚಿಕೊಳ್ಳುವ ಪೋಸ್ಟ್ಗಳಲ್ಲಿ ನೈಸರ್ಗಿಕ ಸೌಂದರ್ಯ, ಆಹಾರ, ಶಾಪಿಂಗ್ ಸೇರಿದಂತೆ ಎಲ್ಲವೂ ಇರುತ್ತದೆ. ಇವರಿಬ್ಬರೂ ಕಳೆದ ಕ್ಷಣಗಳನ್ನು ನೋಡಲು ಅಭಿಮಾನಿಗಳೂ ಸಹ ಕಾತರರಾಗಿರುತ್ತಾರೆ. ಸದ್ಯ ಮಲೈಕಾ ಅರೋರಾ ಶೇರ್ ಮಾಡಿರುವ ಇನ್ಸ್ಟಾ ಸ್ಟೋರಿನಲ್ಲಿ, ಅರ್ಜುನ್ ಜೊತೆಗಿನ ರೋಡ್ ಟ್ರಿಪ್ ಕ್ಲಿಪ್ ಇದೆ.
ಇದಕ್ಕೂ ಮುನ್ನ ಮಲೈಕಾ ತಮ್ಮ ಮತ್ತು ಅರ್ಜುನ್ ಅವರ ನೆರಳಿನ ಚಿತ್ರವನ್ನು ಹಂಚಿಕೊಂಡಿದ್ದರು. ತಮ್ಮ ಕೈಗಳಿಂದ ಹೃದಯದ ಚಿಹ್ನೆಯನ್ನು ಮಾಡುತ್ತಿರುವ ಫೋಟೋ ಅದಾಗಿತ್ತು. ಇನ್ಸ್ಟಾಗ್ರಾಮ್ನಲ್ಲಿ ವೈಟ್ ಹಾರ್ಟ್ ಎಮೋಜಿಯೊಂದಿಗೆ ತಮ್ಮ ಪ್ರೀತಿಯ ಚಿತ್ರವನ್ನು ಹಂಚಿಕೊಂಡಿದ್ದರು. ಮಲೈಕಾ ಮತ್ತು ಅರ್ಜುನ್ ಬರ್ಲಿನ್‌ನಲ್ಲಿ ಎಂಜಾಯ್ ಮಾಡುತ್ತಿದ್ದು, ಚಿತ್ರ, ವಿಡಿಯೋಗಳು ಇಂಟರ್ನೆಟ್ನಲ್ಲಿ ಬಿಸಿ ಏರಿಸಿವೆ. ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಕಿಂಗ್ ಖಾನ್ 'ಜವಾನ್' ಸಿನಿಮಾದಲ್ಲಿ ಅಲ್ಲು ಅರ್ಜುನ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ
ಮಲೈಕಾ 2019ರಲ್ಲಿ ಅರ್ಜುನ್ ಅವರ ಜೊತೆಗಿನ ತಮ್ಮ ಸಂಬಂಧವನ್ನು ಘೋಷಿಸಿದರು. ನಟಿ ಮಲೈಕಾ ಅರೋರಾ 49ರ ಹರೆಯದವರು. ಅರ್ಜುನ್ ಕಪೂರ್ ವಯಸ್ಸು 37. ಈ ಹಿನ್ನೆಲೆ ಈ ಜೋಡಿ ಸಾಕಷ್ಟು ಟೀಕೆ, ಟ್ರೋಲ್ಗಳನ್ನು ಎದುರಿಸಿದೆ. ಅಲ್ಲದೇ ನಟಿ ಮಲೈಕಾ ಅವರು 2017ರಲ್ಲಿ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಅರ್ಬಾಜ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಜೊತೆಗೂ ಅರ್ಜುನ್ ಕಪೂರ್ ಹೆಸರು ಕೇಳಿಬಂದಿತ್ತು. ಈ ಎಲ್ಲದರ ಹಿನ್ನೆಲೆ ಕೆಲ ನೆಟ್ಟಿಗರು ಈ ಜೋಡಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೆಲ್ಲದರ ಹೊರತಾಗಿಯೂ ಈ ಜೋಡಿಯ ಸಂಬಂಧ ಬಲವಾಗಿ ಸಾಗುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಲೈಕಾ ತಾನು ಅರ್ಜುನ್ ಜೊತೆ ಮನೆಯನ್ನು ಸ್ಥಾಪಿಸಲು ಎದುರು ನೋಡುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಟೀಕೆ, ಟ್ರೋಲ್ಗಳನ್ನು ಎದುರಿಸಿ ಮಾದರಿ ದಂಪತಿಯಾದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್
ಈ ಜೋಡಿಯ ಕೆಲಸದ ವಿಚಾರ ಗಮನಿಸುವುದಾದರೆ, ಅರ್ಜುನ್ ಕಪೂರ್ ಕೊನೆಯದಾಗಿ ಆಸ್ಮಾನ್ ಭಾರದ್ವಾಜ್ ನಿರ್ದೇಶನದ ಕುಟ್ಟೆಯಲ್ಲಿ ಕಾಣಿಸಿಕೊಂಡರು. ಮುಂದೆ ಅಜಯ್ ಬಹ್ಲ್ ಅವರ ದಿ ಲೇಡಿ ಕಿಲ್ಲರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಈ ಥ್ರಿಲ್ಲರ್ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮಲೈಕಾ ಅವರು ಇತ್ತೀಚೆಗೆ ಗುರು ರಾಂಧವಾ ಅವರ ತೇರಾ ಕಿ ಖಯಾಲ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.