ETV Bharat / entertainment

ಟೈಗರ್ 3: ಗರಿಗೆದರಿದ ಕುತೂಹಲ, ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್ - Tiger 3 release date

ಬಹುನಿರೀಕ್ಷಿತ ಟೈಗರ್ 3 ಟ್ರೇಲರ್​ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

Tiger 3
ಟೈಗರ್ 3
author img

By ETV Bharat Karnataka Team

Published : Oct 6, 2023, 5:19 PM IST

ಬಾಲಿವುಡ್​ ನಟರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ 'ಟೈಗರ್ 3'. ಮುಂದಿನ ತಿಂಗಳು ತೆರೆಕಾಣಲಿರುವ ಮೋಸ್ಟ್ ಎಕ್ಸ್​​ಪೆಕ್ಟೆಡ್​ ಮೂವಿ ಇದು. ಟೈಗರ್ ಕಾ ಮೆಸೇಜ್​​ ಶೀರ್ಷಿಕೆಯ ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ ಬಳಿಕ ಚಿತ್ರ ತಯಾರಕರೀಗ ಟ್ರೇಲರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಚಿತ್ರತಂಡ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್ ಶುರು ಮಾಡಿದೆ.

ಯಶ್ ರಾಜ್ ಫಿಲ್ಮ್ಸ್ ಟ್ವೀಟ್: 'ಟೈಗರ್ 3'ಗೆ ಬಂಡವಾಳ ಹೂಡಿರುವ ಯಶ್ ರಾಜ್ ಫಿಲ್ಮ್ಸ್ (YRF) ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಅಪ್​ಡೇಟ್ಸ್ ಹಂಚಿಕೊಂಡಿದೆ. ಅಭಿಮಾನಿಗಳಿಗೆ ಟ್ರೇಲರ್ ರಿಲೀಸ್​ ಡೇಟ್ ನೆನಪಿಸಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ, "ಕೌಂಟ್‌ಡೌನ್ ಬಿಗಿನ್ಸ್​, ಟೈಗರ್ 3 ಟ್ರೇಲರ್ ರಿಲೀಸ್​ಗೆ 10 ದಿನಗಳು ಬಾಕಿ, ಅಕ್ಟೋಬರ್ 16ರಂದು ಅನಾವರಣ, ಈ ದೀಪಾವಳಿ ಸಂದರ್ಭ ಚಿತ್ರಮಂದಿರಗಳಿಗೆ ಎಂಟ್ರಿ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಟ್ರೇಲರ್​ಗೆ 10 ದಿನಗಳು'' ಎಂದು ಬರೆದುಕೊಂಡಿದೆ.

ಸಿನಿಮಾದಲ್ಲಿದೆ ಸಾಕಷ್ಟು ಟ್ವಿಸ್ಟ್​: ಟೈಗರ್ 3 ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಸಲ್ಮಾನ್​ ಖಾನ್​, "ಟೈಗರ್ಸ್ ಅತ್ಯಂತ ಅಪಾಯಕಾರಿ ಮಿಷನ್". ಇದಕ್ಕಾಗಿ ಟೈಗರ್​ ತನ್ನ ಪ್ರಾಣವನ್ನು ಪಣಕ್ಕಿಡಬೇಕಾಗುತ್ತದೆ ಎಂದು ತಿಳಿಸಿದ್ದರು. ಕಥಾಹಂದರದ ಬಗ್ಗೆ ಹೆಚ್ಚಿನ ವಿಷಯ ಬಹಿರಂಗಪಡಿಸಿದ ಸೂಪರ್‌ ಸ್ಟಾರ್, ಚಿತ್ರವು ಸಾಕಷ್ಟು ಟ್ವಿಸ್ಟ್​​ಗಳಿಂದ ತುಂಬಿದೆ ಎಂದಷ್ಟೇ ತಿಳಿಸಿದ್ದರು.

"ಟ್ರೇಲರ್ ಮತ್ತು ಸಿನಿಮಾದಲ್ಲಿ ಅನಿರೀಕ್ಷಿತವಾದದ್ದನ್ನೇ ನಿರೀಕ್ಷಿಸಿ. ವಿಭಿನ್ನ, ಗಟ್ಟಿ ಕಥಾಹಂದರವನ್ನು ಹೊಂದಿರುವ ಆ್ಯಕ್ಷನ್ ಎಂಟರ್‌ಟೈನ್ಮೆಂಟ್​ಗೆ ರೆಡಿಯಾಗಿ. ಟೈಗರ್ 3 ಕಥೆ ನನ್ನನ್ನು ತಕ್ಷಣವೇ ಸೆಳೆಯಿತು. ನಿರ್ಮಾಪಕ ಆದಿ ಮತ್ತು ತಂಡ ತಂದಿರುವ ಔಟ್​​ಪುಟ್​ ಅನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಸಿನಿಮಾ ವೀಕ್ಷಿಸಿ'' - ನಟ ಸಲ್ಮಾನ್​ ಖಾನ್​.

ಇದನ್ನೂ ಓದಿ: 'ಸುಶಾಂತ್ ಮಾನಸಿಕ ಪರಿಸ್ಥಿತಿ ನನಗೆ ತಿಳಿದಿತ್ತು': ಗೆಳತಿ ರಿಯಾ ಚಕ್ರವರ್ತಿ

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಮನೀಶ್ ಶರ್ಮಾ ಆ್ಯಕ್ಷನ್​ ಕಟ್​ ಹೇಳಿರುವ ಟೈಗರ್ 3 ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲೆರಡು ಭಾಗಗಳಲ್ಲಿಯೂ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಸ್ಕ್ರೀನ್​ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಭಾಸ್​ - ಕೃತಿ ಸನೋನ್ ಡೇಟಿಂಗ್​ ವದಂತಿ: ನಟಿಯ ಬಾಳಸಂಗಾತಿಯಾಗುವವರಲ್ಲಿ ಈ ಗುಣಗಳಿರಬೇಕಂತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.