ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರದ ಪೋಸ್ಟರ್ ಹಂಚಿಕೊಂಡು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಪ್ರಸ್ತುತ ಚಿತ್ರಕ್ಕೆ SSMB 28 ಎಂದು ಹೆಸರಿಡಲಾಗಿದ್ದು, ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
ಭಾನುವಾರ ಸಂಜೆ ಟ್ವಿಟರ್‌ನಲ್ಲಿ ಮಹೇಶ್ ಬಾಬು ತನ್ನ ಮುಂಬರುವ ಪ್ರಾಜೆಕ್ಟ್ SSMB 28 ಪೋಸ್ಟರ್ ಹಂಚಿಕೊಂಡರು. ರಿಲೀಸ್ ಆದ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಅವರ ರಗಡ್ ಲುಕ್ ನೋಡಬಹುದು. ಸಿಗಾರ್ ಸೇದುತ್ತಾ ಬರುತ್ತಿದ್ದು, ವಿಲನ್‌ಗಳು ಅವರ ಮುಂದೆ ಮಂಡಿಯೂರಿ ಕುಳಿತಿರುವ ದೃಶ್ಯವಿದೆ. ಪೋಸ್ಟರ್‌ನಲ್ಲಿ "13.01.2024! #Save The Date" ಎಂಬ ಶೀರ್ಷಿಕೆಯೊಂದಿಗೆ ಸಿನಿಮಾ ಬಿಡುಗಡೆ ದಿನವನ್ನು ಮಹೇಶ್ ಬಾಬು ಪ್ರಕಟಿಸಿದ್ದಾರೆ.
-
13.01.2024!! #SaveTheDate https://t.co/hrAkrNRR2k
— Mahesh Babu (@urstrulyMahesh) March 26, 2023 " class="align-text-top noRightClick twitterSection" data="
">13.01.2024!! #SaveTheDate https://t.co/hrAkrNRR2k
— Mahesh Babu (@urstrulyMahesh) March 26, 202313.01.2024!! #SaveTheDate https://t.co/hrAkrNRR2k
— Mahesh Babu (@urstrulyMahesh) March 26, 2023
SSMB 28 ಕುರಿತು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಇದೇ ವೇಳೆ ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಸಿನಿಮಾ ಕೂಡ ಮುಂದಿನ ವರ್ಷದ ಜನವರಿ 12 ರಂದು ಸಂಕ್ರಾಂತಿ ಗಿಫ್ಟ್ ಆಗಿ ಬಿಡುಗಡೆಯಾಗಲಿದೆ. ಎರಡೂ ಸಿನಿಮಾಗಳು ಸಂಕ್ರಾಂತಿಯಂದೇ ರಿಲೀಸ್ ಆಗುತ್ತಿರುವುದು ಸದ್ಯದ ಹಾಟ್ ಟಾಪಿಕ್. ಒಂದೇ ದಿನದ ಅಂತರದಲ್ಲಿ ಎರಡು ದೊಡ್ಡ ಸಿನಿಮಾಗಳು ತೆರೆ ಕಂಡರೆ ಏಟು ಬೀಳೋದು ಗ್ಯಾರಂಟಿ ಅನ್ನೋದು ಒಟ್ಟು ಲೆಕ್ಕಾಚಾರ.
ದಿಢೀರ್ ಆಗಿ ಮಹೇಶ್ ಬಾಬು ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೇ "ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ" ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತಾ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.
ಎಸ್. ರಾಧಾಕೃಷ್ಣ (ಚೀನಾ ಬಾಬು) ನಿರ್ಮಾಣ ಸಂಸ್ಥೆ ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಅಡಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಪತ್ನಿ ನಮ್ರತಾ ಶಿರೋಡ್ಕರ್
ಪ್ರಭಾಸ್ vs ಮಹೇಶ್: ವರದಿಗಳ ಪ್ರಕಾರ, ಮಹೇಶ್ ಬಾಬು ಅವರ SSMB 28 ಒಂದು ದೊಡ್ಡ ಪೈಪೋಟಿಗೆ ಸಾಕ್ಷಿಯಾಗಲು ಸಿದ್ಧವಾಗಿದೆ. ಏಕೆಂದರೆ ಇದು ಪ್ರಭಾಸ್ ಅಭಿನಯದ ಪ್ರೊಜೆಕ್ಟ್ ಕೆ ಬಿಡುಗಡೆಯಾಗಿ ಒಂದು ದಿನದ ನಂತರ ಬಿಡುಗಡೆಯಾಗುತ್ತಿದೆ. "ಪ್ರಾಜೆಕ್ಟ್ ಕೆ" ಚಿತ್ರ ಭಾರತೀಯ ಮಹಾಕಾವ್ಯ 'ಮಹಾಭಾರತ'ವನ್ನು ಆಧರಿಸಿದೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ಮತ್ತು ಪ್ರಭಾಸ್ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
PRABHAS VS MAHESH BABU: THE BIGGG CLASH… #Sankrathi2024 will witness the clash of the mighty… #Prabhas [#ProjectK] versus #MaheshBabu [#SSMB28]… #Prabhas’ film will release on 12 Jan, while #MaheshBabu’s film will arrive a day later [13 Jan]. pic.twitter.com/gzzmKCKA0u
— taran adarsh (@taran_adarsh) March 26, 2023 " class="align-text-top noRightClick twitterSection" data="
">PRABHAS VS MAHESH BABU: THE BIGGG CLASH… #Sankrathi2024 will witness the clash of the mighty… #Prabhas [#ProjectK] versus #MaheshBabu [#SSMB28]… #Prabhas’ film will release on 12 Jan, while #MaheshBabu’s film will arrive a day later [13 Jan]. pic.twitter.com/gzzmKCKA0u
— taran adarsh (@taran_adarsh) March 26, 2023PRABHAS VS MAHESH BABU: THE BIGGG CLASH… #Sankrathi2024 will witness the clash of the mighty… #Prabhas [#ProjectK] versus #MaheshBabu [#SSMB28]… #Prabhas’ film will release on 12 Jan, while #MaheshBabu’s film will arrive a day later [13 Jan]. pic.twitter.com/gzzmKCKA0u
— taran adarsh (@taran_adarsh) March 26, 2023
ಚಲನಚಿತ್ರ ವಿಮರ್ಶಕ ಮತ್ತು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ಈ ಪೈಪೋಟಿ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಪ್ರಭಾಸ್ ವರ್ಸಸ್ ಮಹೇಶ್ ಬಾಬು'-ಬಿಗ್ ಕ್ಲಾಶ್… #ಸಂಕ್ರಾಂತಿ 2024 ಪ್ರಬಲರ ಘರ್ಷಣೆಗೆ ಸಾಕ್ಷಿಯಾಗಲಿದೆ ಎಂದಿದ್ದಾರೆ. ಇಬ್ಬರು ಕೂಡ ಸ್ಟಾರ್ ನಟರಾಗಿರುವುದರಿಂದ ಯಾರು ಹೆಚ್ಚು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ: ನನ್ನ ಚಿಕ್ಕ ವಯಸ್ಸಿನ ಕನಸು ನನಸಾಯ್ತು: ಅಮಿತಾಭ್ ಬಚ್ಚನ್ ಬಗ್ಗೆ ಪ್ರಭಾಸ್ ಮೆಚ್ಚುಗೆಯ ಮಾತು