ETV Bharat / entertainment

ಅಭಿಮಾನಿಗಳ ಜೊತೆ ಮೊದಲ ಶೋ ವೀಕ್ಷಿಸಿದ ಮಹೇಶ್​ಬಾಬು; ಟಾಲಿವುಡ್​ ಪ್ರಿನ್ಸ್​​ ಕುಟುಂಬಕ್ಕೆ ಹೂವಿನ ಸ್ವಾಗತ - ಗುಂಟೂರ್​ ಖಾರಂ ಚಿತ್ರ ಬಿಡುಗಡೆ

ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ 'ಗುಂಟೂರ್​ ಖಾರಂ' ಚಿತ್ರ ಇಂದು ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

Mahesh Babu and family watched the movie in sudharshn theater

author img

By ETV Bharat Karnataka Team

Published : Jan 12, 2024, 3:41 PM IST

Updated : Jan 12, 2024, 4:10 PM IST

ಹೈದರಾಬಾದ್​​: ನಟ ಮಹೇಶ್​ ಬಾಬು ಅಭಿನಯದ ಬಹು ನಿರೀಕ್ಷಿತ ಚಿತ್ರ 'ಗುಂಟೂರ್​ ಖಾರಂ' ಇಂದು ಅಭಿಮಾನಿಗಳ ಸಂಭ್ರಮಾಚರಣೆಯೊಂದಿಗೆ ಭರ್ಜರಿಯಾಗಿ ತೆರೆ ಕಂಡಿದೆ. ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಎರಡು ವರ್ಷಗಳ ಅಂತರದ ಬಳಿಕ ನಟ ಮಹೇಶ್​ ಬಾಬು ಅದ್ದೂರಿಯಾಗಿ ಬೆಳ್ಳೆತೆರೆ ಮೇಲೆ ಕಾಣಿಸಿಕೊಂಡಿದ್ದು, ಜನರು ಮೆಚ್ಚಿದ್ದಾರೆ.

ಚಿತ್ರ ಬಿಡುಗಡೆ ಮೊದಲ ದಿನದ ಬೆಳಗ್ಗೆ ತ್ರಿವಿಕ್ರಂ ಶ್ರೀನಿವಾಸ್​​ ಮತ್ತು ಎಸ್​ ಥಾಮನ್​ ಒಟ್ಟಿಗೆ ಚಿತ್ರ ವೀಕ್ಷಣೆ ಮಾಡಿದ್ದಾರೆ. ನಟ ಮಹೇಶ್​ ಬಾಬು ಹೆಂಡತಿ ನಮ್ರತಾ ಮತ್ತು ಮಗಳು ಸಿತಾರಾ ಜೊತೆಯಲ್ಲಿ ಸುದರ್ಶನ್​ ಥಿಯೇಟರ್​ನಲ್ಲಿ ಮೊದಲ ಶೋ ವೀಕ್ಷಿಸಿದ್ದಾರೆ. ಈ ವೇಳೆ, ನಟನಿಗೆ ಅಭಿಮಾನಿಗಳು ಹೂವಿನ ಮಳೆ ಸುರಿಸಿ ಸ್ವಾಗತಿಸಿದ್ದು, ಈ ವಿಡಿಯೋವನ್ನು ಪ್ಯಾಪಾರಾಜಿಗಳು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ಯಾಪಾರಾಜಿಗಳು, ಸೂಪರ್​ಸ್ಟಾರ್​ ಮಹೇಶ್​ ಬಾಬು ದೀರ್ಘಕಾಲದ ಬಳಿಕ ಸುದರ್ಶನ್​ ಥಿಯೇಟರ್​ನಲ್ಲಿ ಗುಂಟೂರ್​​ ಖಾರಂ ವೀಕ್ಷಣೆ ಮಾಡಿದ್ದಾರೆ. ನಟ ಥಿಯೇಟರ್​ನಲ್ಲಿ ಕೆಂಪು ಬಣ್ಣದ ಶರ್ಟ್​ನಲ್ಲಿ ಕ್ಯಾಶುವಲ್​ ಲುಕ್​ನಲ್ಲಿ ಕಂಡು ಬಂದಿದ್ದರೆ, ನಮ್ರತಾ ಪಿಂಕ್​ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದರು. ಇನ್ನು ಮಗಳು ಸಿತಾರಾ ನೀಲಿ ಬಣ್ಣದ ಟೀ ಶರ್ಟ್​​ಗೆ ಬಿಳಿ ಬಣ್ಣದ ಜೀನ್ಸ್​ ಪ್ಯಾಂಟ್​ ತೊಟ್ಟಿದ್ದರು.

ಆ್ಯಕ್ಷನ್​ ಡ್ರಾಮಾದ ಕಥೆ ಹೊಂದಿರುವ ಚಿತ್ರವೂ ಸಿನಿಮಾ ಥಿಯೇಟರ್​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತ್ರಿವಿಕ್ರಂ ಶ್ರೀನಿವಾಸ್​ ನಿರ್ದೇಶನದ ಈ ಚಿತ್ರದಲ್ಲಿ ನಟ ಮಹೇಶ್​ ಬಾಬುಗೆ ನಟಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಜೊತೆಯಾಗಿದ್ದಾರೆ. ಮಹೇಶ್​ ಬಾಬು ಸಿಕ್ಕಾಪಟ್ಟೆ ರಗಡ್​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಹೈ ಎನರ್ಜಿಟಿಕ್​ ಆಗಿ ನಟಿಸಿದ್ದಾರೆ. ನಗರದ ಅಪರಾಧ ಚಟುವಟಿಕೆಯನ್ನು ತೋರಿಸುವಂತೆ ಕೇಳುವ ಪತ್ರಕರ್ತೆಯ ಜೊತೆಗೆ ನಟ ಪ್ರೀತಿಗೆ ಬೀಳುವ ಕಥೆಯನ್ನು ಇದು ಹೊಂದಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟನ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆ ಬ್ಲಾಕ್​ ಬಸ್ಟರ್​ ಸಿನಿಮಾಗಳಾದ 'ಅತಡು' ಮತ್ತು 'ಖಲೇಜಾ' ಚಿತ್ರದ ಮೂಲಕ ಮೋಡಿ ಮಾಡಿದ್ದ ತ್ರಿವಿಕ್ರಂ ಶ್ರೀನಿವಾಸ್​​ ಮತ್ತು ಮಹೇಶ್​ ಬಾಬು 12 ವರ್ಷಗಳ ಬಳಿಕ ಈ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್, ಪ್ರಕಾಶ್​ ರಾಜ್​ ಮತ್ತು ಸುನೀಲ್ ಸೇರಿದಂತೆ ಹಲವರು ಅಭಿನಯಿಸಿದ್ದರು.

ಇದನ್ನೂ ಓದಿ: ಮೆರಿ ಕ್ರಿಸ್ಮಸ್​​ ಬಿಡುಗಡೆಗೂ ಮುನ್ನ ಸಿನಿಮಾದ ಫೋಟೋ ಹಂಚಿಕೊಂಡು ಕುತೂಹಲ ಹೆಚ್ಚಿಸಿದ ಕತ್ರಿನಾ

Last Updated : Jan 12, 2024, 4:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.