ETV Bharat / entertainment

'ಮಹಾಭಾರತ'ದ ಶಕುನಿ ವಿಧಿವಶ.. ಬಾಲಿವುಡ್​ ನಟ ಗುಫಿ ಪೈಂಟಲ್ ಇನ್ನಿಲ್ಲ.. - etv bharat kannada

'ಮಹಾಭಾರತ'ದಲ್ಲಿ ಶಕುನಿ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್​ ಹಿರಿಯ ನಟ ಗುಫಿ ಪೈಂಟಲ್​ ಇಂದು ನಿಧನರಾಗಿದ್ದಾರೆ.

Gufi Paintal
ಗುಫಿ ಪೈಂಟಲ್ ನಿಧನ
author img

By

Published : Jun 5, 2023, 1:32 PM IST

ಬಾಲಿವುಡ್​ ಹಿರಿಯ ನಟ ಗುಫಿ ಪೈಂಟಲ್​ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆಯು ಇಂದು ಸಂಜೆ ನಡೆಯಲಿದೆ. ನಟ ಬಿಆರ್​ ಚೋಪ್ರಾ ಅವರ ಧಾರಾವಾಹಿ 'ಮಹಾಭಾರತ'ದಲ್ಲಿ ಶಕುನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕಾಗಿ ಅವರು ಇಡೀ ಭಾರತೀಯರಿಗೆ ಚಿರಪರಿಚಿತರಾಗಿದ್ದರು.

ಗುಫಿ ಪೈಂಟಲ್​ ಬಹಳ ಸಮಯದಿಂದ ಅಸ್ವಸ್ಥರಾಗಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿದ್ದರಿಂದ ಮೇ 30 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರ ಕಿರಿಯ ಸಹೋದರ ಮತ್ತು ಹಾಸ್ಯನಟ ಪೈಂಟಲ್​ ಗುಫಿ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು. ನಟ ಹೃದಯ ಮತ್ತು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದರು.

ಇತ್ತೀಚೆಗೆ, ನಟಿ ಟೀನಾ ಘಾಯ್ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಗುಫಿ ಪೈಂಟಲ್​ ಆರೋಗ್ಯದ ಬಗ್ಗೆ ಮಾತನಾಡಿದ್ದರು. ನಟನ ಫೋಟೋವನ್ನು ಹಂಚಿಕೊಂಡು, ಗುಫಿ ಪೈಂಟಲ್​ ಅವರು ಆರೋಗ್ಯವಾಗಿಲ್ಲ. ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆ ಅವರು ಗುಣಮುಖರಾಗಲು ಅಗತ್ಯವಿದೆ ಎಂದು ಕ್ಯಾಪ್ಶನ್​ ಬರೆದಿದ್ದರು.

ಇದನ್ನೂ ಓದಿ: ಕಾರು - ಪಿಕಪ್​ ಡಿಕ್ಕಿ: ಮಲಯಾಳಂ ನಟ ಕೊಲ್ಲಂ ಸುಧಿ ದುರ್ಮರಣ

ಸಿನಿಮಾ, ಟಿವಿ ಶೋಗಳಲ್ಲಿ ಗುಫಿ ಹೆಜ್ಜೆ: ಗುಫಿ ಪೈಂಟಲ್​ ಸಾಕಷ್ಟು ಧಾರಾವಾಹಿಗಳು, ಟಿವಿ ಶೋ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಹದ್ದೂರ್ ಶಾ ಜಾಫರ್', 'ಮಹಾಭಾರತ', 'ಕಾನೂನ್', 'ಓಂ ನಮಃ ಶಿವಾಯ', 'ಸಿಐಡಿ', 'ಸ್ಸ್ಶ್ಹ್ ಕೋಯಿ ಹೈ', 'ದ್ವಾರಕಾಧೀಶ ಭಗವಾನ್ ಶ್ರೀ ಕೃಷ್ಣ', 'ರಾಧಾಕೃಷ್ಣ', 'ಜೈ ಕನ್ಹಯ್ಯಾ ಲಾಲ್ ಕಿ' ಸೇರಿದಂತೆ ಅನೇಕ ಟಿವಿ ಶೋಗಳಲ್ಲಿ ನಟಿಸಿದ್ದಾರೆ.

ಅವರು 1975 ರ 'ರಫೂ ಚಕ್ಕರ್' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರದಲ್ಲಿ ನಟ 'ದಿಲ್ಲಗಿ', 'ದೇಶ್ ಪರದೇಶ್', ಮತ್ತು 'ಸುಹಾಗ್' ಸೇರಿದಂತೆ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ಗುಫಿ ಪೈಂಟಲ್ ಕೊನೆಯದಾಗಿ 'ಜೈ ಕನ್ಹಯ್ಯಾ ಲಾಲ್ ಕಿ' ಟಿವಿ ಶೋನಲ್ಲಿ ಕಾಣಿಸಿಕೊಂಡರು.

ಇಬ್ಬರು ಹಿರಿಯ ನಟರನ್ನು ಕಳೆದುಕೊಂಡ ಬಾಲಿವುಡ್​: ನಿನ್ನೆ ಸಂಜೆ ಬಾಲಿವುಡ್​ನ ಹಿರಿಯ ನಟಿ ತಾಯಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಸುಲೋಚನಾ ಲಾತ್ಕರ್​ ನಿಧನರಾಗಿದ್ದಾರೆ. 94 ವರ್ಷದವರೆಗೆ ಬದುಕಿ ಜೀವಮಾನಸಾಧನೆಗೈದು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನು ಪ್ರಭಾದೇವಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ. ನಂತರ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ನಟಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಾಕಷ್ಟು ಹಿಟ್​ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ ದೀದಿ ಮರಣ ಹೊಂದಿದ್ದು, ಇಡೀ ಭಾರತೀಯ ಚಿತ್ರರಂಗಕ್ಕೆ ನೋವುಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಖ್ಯಾತ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: 'ವ್ಯಾನಿಶಿಂಗ್ ಪಾಯಿಂಟ್' ಖ್ಯಾತಿಯ ಹಾಲಿವುಡ್​ ಹಿರಿಯ ನಟ ಬ್ಯಾರಿ ನ್ಯೂಮನ್ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.