ಹೈದರಾಬಾದ್: ಇಂದಿನಿಂದ ಗೋವಾದಲ್ಲಿ ಬಹುನಿರೀಕ್ಷಿತ ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವ ಆರಂಭವಾಗಿದೆ. ಎಂಟು ದಿನಗಳ ಕಾಲ ನಡೆಯುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ, ನಿರ್ದೇಶಕರು ಮತ್ತು ಗಾಯಕರು ಭಾಗಿಯಾಗಲಿದ್ದು, ತಮ್ಮ ಕಲಾ ಪ್ರದರ್ಶನವನ್ನು ಕೂಡ ನೀಡಲಿದ್ದಾರೆ. ಈ ಸಿನಿಮೋತ್ಸವ ಕುರಿತಾದ ಕೆಲವು ಆಸಕ್ತಿಕರ ವಿಚಾರಗಳು ಇಲ್ಲಿವೆ.
ಈ ಸಿನಿಮೋತ್ಸವವೂ ಜನಪ್ರಿಯವಾಗಿರುವ ಗುಜರಾತಿ ಹಾಡು ಖಲಾಸಿಯೊಂದಿಗೆ ಪ್ರಾರಂಭವಾಗಲಿದೆ. ಇವರ ಬೆನ್ನಲ್ಲೇ ನಾಚ್ ಪಂಜಾಬನ್ ಮತ್ತು ಶಿವಬಾ ಆಮ್ಚಾ ಮಲ್ಹಾರಿ ಸೇರಿದಂತೆ ಇತರ ಭಾಷೆಗಳಿಂದ ಹಾಡುಗಳ ಸಂಯೋಜನೆ. ನುಶ್ರತ್ ಭರುಚ್ಚ ಅವರು ಸಂಗೀತ ಪ್ರದರ್ಶನ ನಡೆಸಲಿದ್ದಾರೆ. ಇದೇ ವೇಳೆ ಶಾರುಖ್ ಖಾನ್ ಅವರ ಪಠಾಣ್ ಚಿತ್ರದ 'ಜೂಮೆ ಜೋ' 'ಪಠಾಣ್' ಹಾಡಿನ ಪ್ರದರ್ಶನ ಕೂಡ ನಡೆಯಲಿದೆ. ಇದರ ಜೊತೆಗೆ 'ಸಾಮಿ ಸಾಮಿ' ಮತ್ತು ಆಸ್ಕರ್ ವಿಜೇತ 'ನಾಟು ನಾಟು' ಹಾಡು ಕೂಡ ನೆರೆದವರನ್ನು ಮೋಡಿ ಮಾಡಲಿದೆ. ನುಶ್ರತ್ ಅವರ ಪ್ರದರ್ಶನದ ಬಳಿಕ ಮಾತುಕತೆಯ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.
ನಟ ವಿಜಯ್ ಸೇತುಪತಿ ಅವರ 'ಗಾಂಧಿ ಟಾಕ್ಸ್' ಎಂಬ ಚಿತ್ರದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ನಟಿ ಶ್ರೀಯಾ ಸರಣ್ ಕೂಡ 'ಪುಷ್ಪ: ದಿ ರೈಸ್ ಅಂಡ್ ಶೋ ಮಿ' ಚಿತ್ರದ 'ಹೂ ಅಂಟಾವಾ' ಮತ್ತು 'ರಾಕಿ ಔರ್ ರಾಣಿ' ಚಿತ್ರದ 'ಜುಮಕಾ' ಹಾಡಿಗೆ ನಡು ಬಳುಕಿಸಲಿದ್ದಾರೆ.
ಇನ್ನು ಎವರ್ಗ್ರೀನ್ ನಟಿಯಾಗಿರುವ ಮಾಧುರಿ ದೀಕ್ಷಿತ್ ತಮ್ಮದೇ ಜನಪ್ರಿಯ ಹಾಡುಗಳಾದ 'ಮಾರು ಡಾಲಾ', 'ಡೋಲಾ ರೆ ಡೋಲ್' ಮತ್ತು 'ಅಜಾ ನಚ್ ಲೆ' ಹಾಡಿಗೆ ನೃತ್ಯ ಪ್ರದರ್ಶಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಐಎಫ್ಎಫ್ಐನಲ್ಲಿ ಪಂಕಜ್ ತ್ರಿಪಾಠಿ ಕೂಡ ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ಅವರು ನಿರ್ದೇಶಕ ವಿರ್ಫ್ ಸರ್ಕಾರಿ ನಿರ್ದೇಶನದ ತಮ್ಮ ಚಿತ್ರ 'ಕಡಕ್ ಸಿಂಗ್'ನ ಪರಿಚಯ ಮಾಡಲಿದ್ದು, ಕವನ ವಾಚಿಸಲಿದ್ದಾರೆ. ಈ ವೇಳೆ ಗಾಯಕಿ ಶ್ರೇಯಾ ಘೋಷಲ್ ಮತ್ತು ಶಾಂತನು ಮೊಯಿತ್ರ ಕೂಡ ಜೊತೆಯಾಗಲಿದ್ದಾರೆ.
ಇವರ ಹೊರತಾಗಿ ನಟ ಶಾಹೀದ್ ಕಪೂರ್, ಹಿನ್ನೆಲೆ ಗಾಯಕ ಸುಖ್ವಿಂದರ್ ಸಿಂಗ್ ಕೂಡ ಕಾರ್ಯಕ್ರಮ ಗಮನಿಸಲಿದ್ದಾರೆ. ಶಾಹೀದ್ ತಮ್ಮ ಹಿಟ್ ಚಿತ್ರಗಳಾದ 'ಜಬ್ ವಿ ಮೆಟ್', 'ನಗಡ ನಗಡ', 'ಕಮಿನೆ' ಮತ್ತು 'ಧನ್ ತೆ ನಾ' ಚಿತ್ರದ ಹಾಡಿಗೆ ಪ್ರದರ್ಶನ ನೀಡಲಿದ್ದಾರೆ. ಇತ್ತ ಸುಖ್ವಿಂದರ್ ಸಿಂಗ್ ದೇಶ ಭಕ್ತಿ ಗೀತೆ ಹೇ ವತನ್ ಹೇ ವತನ್ ಹಾಡಿನ ಮೂಲಕ ಮೋಡಿ ಮಾಡಲಿದ್ದಾರೆ.
ಇವರ ಹೊರತಾಗಿ ನಟಿ ಸಾರಾ ಆಲಿಖಾನ್ ಕೂಡ ಮನರಂಜಿಸಲಿದ್ದು, ನಟ ಸನ್ನಿ ಡಿಯೋಲ್ ಕೂಡ ಇದೇ ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಇದನ್ನೂ ಓದಿ: 'ಲಿಯೋ' ಸಿನಿಮಾ ನೋಡಿಲ್ವಾ?.. ಹಾಗಿದ್ರೆ OTTನಲ್ಲಿ ವೀಕ್ಷಿಸಿ, ಎಲ್ಲಿ? ಯಾವಾಗ?