ಮುಂಬೈ: ಬಾಲಿವುಡ್ ನಿರ್ದೇಶಕ ಮಧು ಮಂಟೆನಾ, ಬರಹಗಾರ್ತಿ ಹಾಗೂ ಯೋಗ ಶಿಕ್ಷಕಿಯಾಗಿರುವ ಇರಾ ತ್ರಿವೇದಿ ಅವರೊಂದಿಗೆ ಸಪ್ತಪದಿಗಳನ್ನು ತುಳಿದಿದ್ದಾರೆ. ಭಾನುವಾರ ನಡೆದ ಈ ಮದುವೆ ಸಂದರ್ಭದ ಈ ಅದ್ಬುತ ಕ್ಷಣಗಳ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಧು ಬಿಳಿ ಕುರ್ತಾ ಮತ್ತು ಧೋತಿಯಲ್ಲಿ ಕಂಡು ಬಂದರೆ, ಇರಾ ಗುಲಾಬಿ ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಧುಮಗಳಾಗಿ ಮಿಂಚಿದರು.
ಮದುವೆ ಬಳಿಕ ಕ್ಯಾಮೆರಾ ಮುಂದೆ ತಮ್ಮ ಬಾಳ ಸಂಗಾತಿ ಇರಾಗೆ ಮಧು ಮುತ್ತಿಕ್ಕಿದ್ದು, ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೊಸ ಜೀವನದ ಫೋಟೋ ಹಂಚಿಕೊಂಡಿರುವ ಇರಾ, ಇದೀಗ ಸಂಪೂರ್ಣಳಾಗಿದ್ದೇನೆ ಎಂದು ಬರೆದಿದ್ದಾರೆ. ಮುಂಬೈನಲ್ಲಿ ಸಂಪ್ರದಾಯದ ಪ್ರಕಾರ ಮದುವೆಯಾದ ಈ ಜೋಡಿ ಇದಾದ ಕೆಲವೇ ಗಂಟೆಗಳಲ್ಲಿ ತಮ್ಮ ಸಿನಿ ಉದ್ಯಮದ ಮಂದಿಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಬಾಲಿವುಡ್ ತಾರಾಂಗಣ, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಹಾಜರಿದ್ದರು.
ಆರತಕ್ಷತೆ ಕಾರ್ಯಕ್ರಮದಲ್ಲಿ ಮಧು ಮಂಟೆನಾ ನೀಲಿ ಬಣ್ಣದ ಸಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದರೆ, ಇರಾ ಬಿಳಿ ಬಣ್ಣದ ಲೆಹಾಂಗಾದಲ್ಲಿ ಅದ್ಬುತವಾಗಿ ಕಂಡರು. ಇದಕ್ಕೆ ಅವರು ಧರಿಸಿದ್ದ ಪಂಚೆ ಜೊತೆಗಿನ ವಜ್ರದ ಆಭರಣ ಎಲ್ಲರ ಕಣ್ಸೆಳೆಯಿತು. ಬಾಲಿವುಡ್ ನಟ ಆಮೀರ್ ಖಾನ್ ಸೇರಿದಂತೆ ಅನೇಕ ಮಂದಿ ನೂತನ ಜೋಡಿಗೆ ಶುಭ ಕೋರಿದರು.
ಆಮೀರ್ ಖಾನ್ ಕೂಡ ಬಿಳಿ ಬಣ್ಣದ ಕುರ್ತಾ ಪೈಜಾಮದ ಸಂಪ್ರದಾಯಿಕ ಉಡುಪಿನಲ್ಲಿ ಕಂಡು ಬಂದರು. ಇನ್ನು ಇದೆ ವೇಳೆ, ಅವರ ಮಗ ಜುನೈದ್ ಖಾನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದರು. ಇನ್ನು ನಟ ಹೃತಿಕ್ ರೋಷನ್ ಕೂಡ ತಮ್ಮ ಪ್ರೀತಿಯ ಸಂಗಾತಿ ಸಬಾ ಆಜಾದ್ ಅವರೊಂದಿಗೆ ಕ್ಯಾಮೆರಾ ಮುಂದೆ ಫೋಸ್ ನೀಡಿದರು. ಸಬಾ ಗುಲಾಬಿ ಬಣ್ಣದ ಸೆಲ್ವಾರ್ ಕಮಿಜ್ನಲ್ಲಿ ಕಂಡು ಬಂದರೆ, ಹೃತಿಕ್ ಬ್ಲೆಸರ್ ಮತ್ತು ಟ್ರೊಸರ್ನಲ್ಲಿ ಗಮನ ಸೆಳೆದರು.
ಇನ್ನು ನಿರ್ದೇಶಕ ಮಧುರ್ ಬಂಡಾರ್ಕರ್ ಕೂಡ ಹೆಂಡತಿ ಜೊತೆ ಆರತಕ್ಷಣೆಗೆ ಆಗಮಿಸಿ, ಹೊಸ ಜೋಡಿಗೆ ಶುಭ ಕೋರಿದರು. ಇನ್ನು ಕಾರ್ಯಕ್ರಮದಲ್ಲಿ ಮೂವರು ಪ್ರತಿಭಾವಂತರಾದ ರಾಕೇಶ್ ರೋಷನ್, ಅನುಪಮ್ ಖೇರ್ ಮತ್ತು ಅನಿಲ್ ಕಪೂರ್ ಒಂದೇ ಫ್ರೇಂನಲ್ಲಿ ಫೋಟೋಗೆ ಫೋಸ್ ನೀಡಿದರು. ಇವರ ಹೊರತಾಗಿ ಚಿತ್ರ ನಿರ್ದೇಶಕ ನಿತೀಶ್ ತಿವಾರಿ ಅವರ ಹೆಂಡತಿ ಅಶ್ವಿನಿ ಅಯ್ಯರ್ ಜೊತೆ ಸಾಂಪ್ರದಾಯಿಕ ಧಿರಿಸಿರಿನಲ್ಲಿ ಕಂಡು ಬಂದರು.
ಮುಖೇಶ್ ಭಟ್ ಕೂಡ ಹೆಂಡತಿ ಮತ್ತು ಮಗನೊಂದಿಗೆ ಆಗಮಿಸಿದ್ದು, ಪ್ಯಾಪಾರಾಜಿಗಳ ಫೋಟೋಗೆ ಸೆರೆ ಸಿಕ್ಕಿದ್ದಅರೆ. ಇನ್ನು ನಟ ಜಾಕಿ ಶ್ರಾಫ್, ವಿವೇಕ್ ಒಬೆರಾಯ್, ಹೃತಿಕ್ ರೋಷನ್ ಸಂಬಂಧ ಪಶ್ಮಿನ್ ರೋಶನ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶನಿವಾರದಿಂದ ಈ ಜೋಡಿಗಳ ಮದುವೆ ಸಮಾರಂಭ ನಡೆದಿದ್ದು, ಬಾಲಿವುಡ್ನ ಅನೇಕ ಮಂದಿ ಇದರಲ್ಲಿ ಭಾಗಿಯಾದರು ಶನಿವಾರ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್, ನಟ, ರಾಜ್ ಕುಮಾರ್ ರಾವ್ ಮತ್ತು ಅವರ ಹೆಂಡತಿ ಪತ್ರಲೇಖ. ನಿರ್ಮಾಪಕ ನಿಖಿಲ್ ದ್ವಿವೇದಿ ಮತ್ತು ಅವರ ಹೆಂಡತಿ ಗೌರಿ ಪಂಡಿತ್ ಕೂಡ ಭಾಗಿಯಾಗಿದ್ದರು .
ಮಧು ಈ ಹಿಂದೆ ಫ್ಯಾಷನ್ ಡಿಸೈನರ್ ಆಗಿದ್ದ ಮಸಾಬಾ ಅವರನ್ನು 2015ರಲ್ಲಿ ಮದುವೆಯಾಗಿದ್ದರು. 2019ರಲ್ಲಿ ಈ ಜೋಡಿ ಪರಸ್ಪರ ವಿಚ್ಚೇದನ ಪಡೆದರು. ಇದರ ಬೆನ್ನಲ್ಲೇ ಮಸಬಾ, ನಟ ಸತ್ಯದೀಪ್ ಮಿಶ್ರಾ ಅವರನ್ನು ಮದುವೆಯಾದರು. ಇದಕ್ಕೂ ಮುನ್ನ ಮಸಬಾ ನಟ ನಂದನ್ ಸೇನ್ ಜೊತೆಗೆ ಸಂಬಂಧ ಹೊಂದಿದ್ದರು. ಮಧು ಗಜಿನಿ, ಅಗ್ಲಿ, ಕ್ವೀನ್ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಕೃಷ್ಣ ಭಟ್ - ವೇದಾಂತ್ ಸರ್ದಾ ಮದುವೆ ಆರತಕ್ಷತೆಯಲ್ಲಿ ಬಿ - ಟೌನ್ ಸೆಲೆಬ್ರಿಟಿಗಳು!