ETV Bharat / entertainment

'ವಿಕೆಂಡ್​ ವಿತ್​ ರಮೇಶ್​​' ಸೀಟ್​ನಲ್ಲಿ ಕುಳಿತು ಸಾಹಿತ್ಯ ರಚಿಸಿದ ವಿ. ನಾಗೇಂದ್ರ ಪ್ರಸಾದ್ - Lyricist v nagendra prasad

ಈ ವಾರದ 'ವಿಕೆಂಡ್​ ವಿತ್​ ರಮೇಶ್ ಶೋ'ನಲ್ಲಿ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅತಿಥಿಯಾಗಿ ಆಗಮಿಸಲಿದ್ದಾರೆ.

weekend with Ramesh show
ವಿಕೆಂಡ್​ ವಿತ್​ ರಮೇಶ್ ಶೋ
author img

By

Published : May 16, 2023, 6:40 PM IST

ಚಂದನವನದ ಪ್ರತಿಭಾನ್ವಿತ ನಟ, ನಿರೂಪಕ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಪ್ರೇಕ್ಷಕರ ಅಚ್ಚುಮೆಚ್ಚಿನ ಕಾರ್ಯಕ್ರಮ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಐದನೇ ಸೀಸನ್​ ಪ್ರಸಾರ ಆಗುತ್ತಿದೆ. ಈವರೆಗೆ ಸುಮಾರು 90ಕ್ಕೂ ಹೆಚ್ಚು ಸಾಧಕರು ಈ ಸೀಟ್​ನಲ್ಲಿ ಕುಳಿತು ತಮ್ಮ ಸಾಧನೆಯ ಕಥೆ ಅನಾವರಣಗೊಳಿಸಿದ್ದಾರೆ. ಈ ವಾರಾಂತ್ಯ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಲಿದ್ದಾರೆ.

ಜೀ ಕನ್ನಡ ವಾಹಿನಿ ಈ ವಾರದ ಕಾರ್ಯಕ್ರಮದ ಪ್ರೋಮೋ ರಿಲಿಸ್​ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ರಿಲೀಸ್​​ ಮಾಡಿರುವ ವಾಹಿನಿ, ''ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ. ನಾಗೇಂದ್ರ ಪ್ರಸಾದ್‌ ಅವರು ಈ ವಾರದ ನಮ್ಮ ವೀಕೆಂಡ್‌ ಅತಿಥಿ! ವೀಕೆಂಡ್ ವಿತ್ ರಮೇಶ್ - 5'' ಎಂದು ಬರೆದುಕೊಂಡಿದೆ.

ಸಾಂಗ್ಸ್​ ಇಲ್ಲದೇ ಸಿನಿಮಾಗಳಿಲ್ಲ. ಬಹುತೇಕ ಎಲ್ಲಾ ಚಿತ್ರಗಳು ಹಾಡುಗಳನ್ನು ಹೊಂದಿರುತ್ತವೆ. ಸಿನಿಮಾಗೂ ಮೊದಲೇ ಬಿಡುಗಡೆ ಆಗುವ ಹಾಡುಗಳು ಜನಮನ ತಲುಪಿ, ಚಲನಚಿತ್ರಗಳು ಯಶಸ್ವಿ ಆಗಲು ಕಾರಣವಾಗುತ್ತದೆ. ಸಂಗೀತ ಎಷ್ಟು ಮುಖ್ಯವೋ, ಸಾಹಿತ್ಯವೂ ಅಷ್ಟೇ ಮುಖ್ಯ. ಸಾಹಿತ್ಯದ ಒಂದೊಂದು ಪದಗಳೂ ಸಹ ಪ್ರೇಕ್ಷಕರ ಮನ ತಲುಪುವುದುಂಟು. ಹೀಗೆ ಅದೆಷ್ಟೋ ಸಿನಿಮಾ ಸಾಂಗ್​ಗೆ ಸಾಹಿತ್ಯ ಬರೆದಿರುವ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಈ ವೀಕೆಂಡ್​ನ ಅತಿಥಿ. ವಿ. ನಾಗೇಂದ್ರ ಪ್ರಸಾದ್ ಅವರ ಬಾಲ್ಯ, ಶಿಕ್ಷಣ, ವೃತ್ತಿಜೀವನ, ಏಳು ಬೀಳು ಎಲ್ಲವೂ ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ. ಅಲ್ಲದೇ 'ವಿಕೆಂಡ್​ ವಿತ್​ ರಮೇಶ್​​' ಸೀಟ್​ನಲ್ಲೇ ಕುಳಿತು ಸಾಹಿತ್ಯ ರಚಿಸಿದ್ದಾರೆ. ಆ ಹಾಡನ್ನು ಅದೇ ವೇದಿಕೆಯಲ್ಲಿ ಹಾಡಲಾಗಿದೆ. ಸದ್ಯ ಪ್ರೋಮೋ ಸದ್ದು ಮಾಡುತ್ತಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಇದನ್ನೂ ಓದಿ: ರಾಜ್ ಪಥ್​ನಲ್ಲಿ 'ಸ್ಪೈ' ಟೀಸರ್​​ ರಿಲೀಸ್​​: ಸುಭಾಷ್‌ ಚಂದ್ರಬೋಸ್‌ ನಿಗೂಢ ಸಾವು ಬೆನ್ನತ್ತಿದ ನಿಖಿಲ್ ಸಿದ್ದಾರ್ಥ್

ನೆಟ್ಟಿಗರ ಪ್ರತಿಕ್ರಿಯೆ: ಜೀ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ನಾ ಕಂಡ ಸಾಹಿತ್ಯಗಾರರಲ್ಲಿ ಇವರು ಕೂಡ ಒಬ್ಬರು' ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರ ಕಾಮೆಂಟ್​ ಮಾಡಿದರೆ, ಮತ್ತೋರ್ವರು 'ಕನ್ನಡದ ಕಾಳಿದಾಸ' ಎಂದು ಹೇಳಿದ್ದಾರೆ. 'ಕರ್ನಾಟಕದಲ್ಲಿ ಸಮಾಜ ಸೇವಕರು ಯಾರು ಇಲ್ವಾ? ಪದ್ಮ ಪ್ರಶಸ್ತಿ ವಿಜೇತರು ಇಲ್ವಾ? ಕೇವಲ ಚಲನಚಿತ್ರ ನಟ ನಟಿಯರಿಗೆ ಕಾರ್ಯಕ್ರಮ ಸೀಮಿತವೇ?' ಎಂದು ಓರ್ವರು ಅಸಮಧಾನ ವ್ಯಕ್ತಪಡಿಸಿದ್ದಾರೆ. 'ಈ ಎಪಿಸೋಡ್​​ಗಾಗಿ ಹೆಚ್ಚು ಕಾಯಲು ಸಾಧ್ಯವಿಲ್ಲ' ಎಂದು ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ವೀಕೆಂಡ್ ವಿತ್ ರಮೇಶ್' ಶೋ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಉಪಾಸನಾ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ವ್ಯಕ್ತಿಯನ್ನು ಥಳಿಸಿದ ರಾಮ್​​ ಚರಣ್​ ಬೆಂಬಲಿಗರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.