ಕಾಲಿವುಡ್ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳೋ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸಿಕೊಡೋದು ಪಕ್ಕಾ. ಅದಕ್ಕೆ ಉದಾಹರಣೆಯೇ ಕೈದಿ, ಮಾಸ್ಟರ್, ವಿಕ್ರಮ್. ಇವೆಲ್ಲವೂ ಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳು. ಇವರ ಮುಂದಿನ ಚಿತ್ರ 'ಲಿಯೋ'. ದಳಪತಿ ವಿಜಯ್ ನಟಿಸುತ್ತಿರುವ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇದಲ್ಲದೇ ಸೂಪರ್ಸ್ಟಾರ್ ರಜನಿಕಾಂತ್ 171ನೇ ಸಿನಿಮಾಗೆ ಇವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಆದರೆ, ಲೋಕೇಶ್ ಇನ್ನೇನು ಬೆರಳೆಣಿಕೆಯ ಸಿನಿಮಾಗಳ ನಂತರ ನಿರ್ದೇಶಕನ ಪ್ರಯಾಣಕ್ಕೆ ಅಂತ್ಯ ಹಾಡಲಿದ್ದಾರೆ. ಪ್ಯಾನ್ ಇಂಡಿಯಾ ಪ್ರಭಾಸ್ ಮತ್ತು ಲೋಕೇಶ್ ಕನಕರಾಜ್ ಕಾಂಬೋದಲ್ಲಿ ಚಿತ್ರವೊಂದು ತಯಾರಾಗುತ್ತಿದೆ. 'ಲಿಯೋ' ಬಿಡುಗಡೆಯ ನಂತರ ಈ ಸಿನಿಮಾದ ಕೆಲಸಗಳು ಪ್ರಾರಂಭವಾಗಲಿದೆ. ಸುದೀರ್ಘಕಾಲ ನಿರ್ದೇಶಕನಾಗಿ ಮುಂದುವರೆಯಲು ಇಷ್ಟವಿಲ್ಲ ಎಂದು ಈ ಹಿಂದೆ ಹೇಳಿದ್ದ ಲೋಕೇಶ್ ಕನಕರಾಜ್, ಪ್ರಭಾಸ್ ಅಭಿನಯದ ಈ ಚಿತ್ರದ ಮೂಲಕ ತಮ್ಮ ಆ್ಯಕ್ಷನ್ ಕಟ್ ಪ್ರಯಾಣವನ್ನು ಮುಕ್ತಾಯಗೊಳಿಸುವ ಸಾಧ್ಯತೆಯಿದೆ.
-
Excited to be joining hands with Thalaivar @rajinikanth Sir for #Thalaivar171 with @sunpictures
— Lokesh Kanagaraj (@Dir_Lokesh) September 11, 2023 " class="align-text-top noRightClick twitterSection" data="
An @anirudhofficial Musical
An @anbariv stunt https://t.co/ISP10GqyxY
">Excited to be joining hands with Thalaivar @rajinikanth Sir for #Thalaivar171 with @sunpictures
— Lokesh Kanagaraj (@Dir_Lokesh) September 11, 2023
An @anirudhofficial Musical
An @anbariv stunt https://t.co/ISP10GqyxYExcited to be joining hands with Thalaivar @rajinikanth Sir for #Thalaivar171 with @sunpictures
— Lokesh Kanagaraj (@Dir_Lokesh) September 11, 2023
An @anirudhofficial Musical
An @anbariv stunt https://t.co/ISP10GqyxY
ಲೋಕೇಶ್ ಕನಕರಾಜ್ ನಿರ್ದೇಶಕರಾಗಿ ನಿವೃತ್ತಿ ಹೊಂದುವ ಮೊದಲು ತಮ್ಮ ವೃತ್ತಿಜೀವನದಲ್ಲಿ ಕೇವಲ 10 ಚಿತ್ರಗಳನ್ನು ಮಾತ್ರ ಮಾಡುವ ಯೋಜನೆ ಹಂಚಿಕೊಂಡಿದ್ದಾರೆ. "ನನ್ನ ವೃತ್ತಿಜೀವನದಲ್ಲಿ ಜಾಸ್ತಿ ಸಿನಿಮಾಗಳನ್ನು ಮಾಡಬೇಕು ಎಂಬ ಯಾವುದೇ ಆಲೋಚನೆ ಇಲ್ಲ. ನನ್ನದೊಂದಿಷ್ಟು ಕೊಡುಗೆ ಸಿನಿ ಲೋಕಕ್ಕೆ ಇರಲಿ ಎಂಬ ಉದ್ದೇಶದೊಂದಿಗೆ ಇಂಡಸ್ಟ್ರಿಗೆ ಬಂದೆ. ನಾನು LCU ನಲ್ಲಿ ಮಾತ್ರ ಸಿನಿಮಾಗಳನ್ನು ಮಾಡಲು ಬಯಸುತ್ತೇನೆ. ನಾನು LUC ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಬದುಕಲು ಬಯಸುತ್ತೇನೆ. ನಾನು 10 ಸಿನಿಮಾಗಳನ್ನು ಮಾಡಿ ಅಲ್ಲಿಗೆ ನಿಲ್ಲಿಸಿಬಿಡುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Thalaivar171: ಲೋಕೇಶ್ ಕನಕರಾಜ್ ಜೊತೆ ರಜನಿಕಾಂತ್ ಮುಂದಿನ ಸಿನಿಮಾ ಘೋಷಣೆ
ಸದ್ಯ ಅವರು 'ಲಿಯೋ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್, ತ್ರಿಷಾ ಕೃಷ್ಣನ್, ಸಂಜಯ್ ದತ್ತ್, ಗೌತಮ್ ಮೆನೋನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ. ಲಿಯೋ ಕೂಡ ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್ (LCU) ನ ಭಾಗವಾಗಿದೆಯೇ? ಎಂಬುದು ಅವರ ಅಭಿಮಾನಿಗಳ ಪ್ರಶ್ನೆ. ಇದು ಲೋಕೇಶ್ ಅವರ ಮುಂಬರುವ ಯೋಜನೆಗಳ ಬಗ್ಗೆ ನಮಗೆ ಕುತೂಹಲ ಮೂಡಿಸುತ್ತದೆ.
10 ಸಿನಿಮಾಗಳ್ಯಾವುವು?.. ಮಾನಗರಂ, ಕೈದಿ, ವಿಕ್ರಮ್, ಮಾಸ್ಟರ್ ಇವಿಷ್ಟು ತೆರೆ ಕಂಡಿರುವ ಲೋಕೇಶ್ ಕನಕರಾಜ್ ನಿರ್ದೇಶನದ ಈವರೆಗಿನ ಚಿತ್ರಗಳು. ಲಿಯೋ ಹಾಗೂ ತಲೈವಾ 171 ಈಗಾಗಲೇ ಅನೌನ್ಸ್ ಆಗಿದೆ. ಈ ಚಿತ್ರಗಳನ್ನು ಪೂರ್ಣಗೊಳಿಸಿದ ನಂತರ ಡೈರೆಕ್ಟರ್ ಕಾರ್ತಿಯೊಂದಿಗೆ ಕೈದಿ 2 ಮತ್ತು ಕಮಲ್ ಹಾಸನ್ ಜೊತೆ ವಿಕ್ರಮ್ 2 ಮಾಡಲು ಸಿದ್ಧರಾಗಿದ್ದಾರೆ. ಇದಲ್ಲದೇ ಸೂರ್ಯನ ಜೊತೆ ರೋಲೆಕ್ಸ್ ಆಧಾರಿತ ಸ್ಕ್ರೀನ್ ಆಫ್ ಚಿತ್ರ ಮಾಡಲಿದ್ದಾರೆ. ಇಲ್ಲಿಗೆ ಅವರ ಒಟ್ಟು ಸಿನಿಮಾಗಳು ಒಂಭತ್ತು. 10ನೆಯ ಚಿತ್ರದಲ್ಲಿ ಪ್ರಭಾಸ್ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದು ಅವರ ಕೊನೆಯ ಪ್ರಾಜೆಕ್ಟ್ ಎನ್ನಲಾಗಿದೆ.
ಇದನ್ನೂ ಓದಿ: ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್ ಬಿಡುಗಡೆ