ETV Bharat / entertainment

ಅನಿರುದ್ಧ್​ ರವಿಚಂದರ್​ ಕೈಹಿಡಿದು 'ಲಿಯೋ' 'locked and loaded' ಎಂದ ಲೋಕೇಶ್​ ಕನಕರಾಜ್​ - ಈಟಿವಿ ಭಾರತ ಕನ್ನಡ

'ಲಿಯೋ' ನಿರ್ದೇಶಕ ಲೋಕೇಶ್​ ಕನಕರಾಜ್ ಅವರು ಸಂಗೀತ ಸಂಯೋಜಕ ಅನಿರುದ್ಧ್​ ರವಿಚಂದರ್​ ಜೊತೆಗಿನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

Lokesh Kanagaraj, Anirudh Ravichander drop picture as Leo locked and loaded for box office rampage
ಅನಿರುದ್ಧ್​ ರವಿಚಂದರ್​ ಕೈಹಿಡಿದು 'ಲಿಯೋ' 'locked and loaded' ಎಂದ ಲೋಕೇಶ್​ ಕನಕರಾಜ್​
author img

By ETV Bharat Karnataka Team

Published : Oct 15, 2023, 10:40 PM IST

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲೋಕೇಶ್​ ಕನಕರಾಜ್​ ಅವರ 'ಲಿಯೋ' 2023ರ ಬಹುನಿರೀಕ್ಷೆಯ ಸಿನಿಮಾ. ದಳಪತಿ ವಿಜಯ್​ ಮುಖ್ಯಭೂಮಿಕೆಯ ಈ ಚಿತ್ರ ಅಕ್ಟೋಬರ್​ 19ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಇದೀಗ ಚಿತ್ರ ಬಿಡುಗಡೆಗೂ ಮುನ್ನ ಲೋಕೇಶ್​ ಅವರು ಸಂಗೀತ ಸಂಯೋಜಕ ಅನಿರುದ್ಧ್​ ರವಿಚಂದರ್​ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡಿರುವ ನಿರ್ದೇಶಕ, "ಲಾಕ್​ಡ್​ ಆಂಡ್​ ಲೋಡೆಡ್​ (Locked & Loaded ) ಅಕ್ಟೋಬರ್​ 19ರಿಂದ 'ಲಿಯೋ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಅನಿರುದ್ಧ್​ ಮತ್ತು ಲೋಕೇಶ್​ ಕನಕರಾಜ್​ ಮುಖಾಮುಖಿಯಾಗಿ ನಿಂತು ಕೈಹಿಡಿದಿರುವ ಫೋಟೋ ಇದಾಗಿದೆ. ಪೋಸ್ಟ್​ ಹಂಚಿಕೊಂಡ ತಕ್ಷಣ ಕಮೆಂಟ್​ ವಿಭಾಗವನ್ನು ತುಂಬಿದ ನೆಟ್ಟಿಗರು, 'ಲಿಯೋ'ಗಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದಿದ್ದಾರೆ.

ಈ ಆಕ್ಷನ್​ ಥ್ರಿಲ್ಲರ್ ಸಿನಿಮಾ ಭಾರೀ ವೇಗದಲ್ಲಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದು ಹಲವಾರು ದಾಖಲೆಗಳನ್ನು ಪುಡಿಗಟ್ಟಲಿವೆ ಎಂದು ಊಹಿಸಲಾಗಿದೆ. ನಿರ್ದೇಶಕ ಲೋಕೇಶ್​ ಕನಕರಾಜ್​, ನಟ ದಳಪತಿ ವಿಜಯ್​ ಮತ್ತು ಸಂಗೀತ ಸಂಯೋಜಕ ಅನಿರುದ್ಧ್​ ರವಿಚಂದರ್ ಇದೀಗ 'ಲಿಯೋ' ಚಿತ್ರಕ್ಕಾಗಿ ಎರಡನೇ ಬಾರಿಗೆ ಜೊತೆಯಾಗಿದ್ದಾರೆ. ಖೈದಿ, ಮಾಸ್ಟರ್​ ಮತ್ತು ವಿಕ್ರಮ್​ನಂತಹ ಮಾಸ್ಟರ್​ಪೀಸ್​ ಚಿತ್ರಗಳನ್ನು ನಿರ್ದೇಶಿಸಿರುವ ಲೋಕೇಶ್​ ಅವರ 5ನೇ ಸಿನಿಮಾವಿದು.

ಇದನ್ನೂ ಓದಿ: ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್​ ಬಿಡುಗಡೆ

'ಲಿಯೋ' ಪ್ರೀಮಿಯರ್​ಗೆ ಸರ್ಕಾರ ಒಪ್ಪಿಗೆ: ಇತ್ತೀಚೆಗೆ 'ಲಿಯೋ' ಚಿತ್ರದ ಪ್ರೀಮಿಯರ್​ ಶೋಗೆ ತಮಿಳುನಾಡು ಸರ್ಕಾರ ಒಪ್ಪಿಗೆ ಕೊಟ್ಟಿದೆ. ಅದಕ್ಕೂ ಮುನ್ನ ಚಿತ್ರದ ಪ್ರಥಮ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದೇ ಸ್ಟಾಲಿನ್​ ಸರ್ಕಾರ ಹೇಳಿತ್ತು. ಈ ನಿರ್ಧಾರದ ವಿರುದ್ಧ ದಳಪತಿ ವಿಜಯ್​ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಆದರೆ ಕೆಲವು ದಿನಗಳ ಹಿಂದೆ ಏಕಾಏಕಿ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿ, 'ಲಿಯೋ' ಪ್ರೀಮಿಯರ್​ಗೆ ಅನುಮತಿ ನೀಡಿದೆ. ಇದರಿಂದ ವಿಜಯ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ಚಿತ್ರದ ಟ್ರೇಲರ್​ ಬಿಡುಗಡೆಯಾಗುವುದಕ್ಕೂ ಮುನ್ನವೇ ಮುಂಗಡ ಬುಕ್ಕಿಂಗ್​ನಲ್ಲಿ 'ಲಿಯೋ' ದಾಖಲೆ ಸೃಷ್ಟಿಸಿತ್ತು. ಕಳೆದ ವಾರ ಈ ಸಿನಿಮಾದ ಸಾಗರೋತ್ತರ ಬುಕ್ಕಿಂಗ್​ ನೋಡಿದಾಗ 40 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮಾರಾಟವಾಗಿದೆ. ಟ್ರೇಲರ್​ ನೋಡುವ ಮುನ್ನವೇ ಈ ರೇಂಜ್​ನಲ್ಲಿ ಟಿಕೆಟ್​ ಮಾರಾಟವಾದ ಚಿತ್ರ ಇದೇ ಮೊದಲು ಎಂದು ಯುಕೆ ಮೂಲದ ನಿರ್ಮಾಣ ಸಂಸ್ಥೆಯೊಂದು ತಿಳಿಸಿದೆ.

ಅಕ್ಟೋಬರ್​ 19 ರಂದು ರಿಲೀಸ್​: ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. ಟ್ರೇಲರ್​ ಇತ್ತೀಚೆಗಷ್ಟೇ ರಿಲೀಸ್​ ಆಗಿದೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಅಕ್ಟೋಬರ್​ 19 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: 10 ಸಿನಿಮಾ ಮಾತ್ರ ಮಾಡೋದಂತೆ ಲೋಕೇಶ್ ಕನಕರಾಜ್​: ಪ್ರಭಾಸ್​ ಜೊತೆಗಿನ ಚಿತ್ರವೇ ಕೊನೆಯದ್ದಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.