ಹೈದರಾಬಾದ್: ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮತ್ತು ಅಳಿಯ ನೂಪುರ್ ಶಿಖರೆ ಅವರು ಉದಯ್‌ಪುರದಲ್ಲಿ ತಮ್ಮ ಮದುವೆಯ ಪೂರ್ವದ ಸಂಭ್ರಮಾಚರಣೆ ವಿಡಿಯೋಗಳು ಮತ್ತು ಚಿತ್ರಗಳು ಭಾರಿ ವೈರಲ್ ಆಗುತ್ತಿವೆ. ನಿನ್ನೆ (ಸೋಮವಾರ) ರಾತ್ರಿ ಪೈಜಾಮ ಪಾರ್ಟಿ ನಡೆಯಿತು. ಬಳಿಕ ದಂಪತಿ ಫುಟ್‌ಬಾಲ್ ಆಡುವ ಮೂಲಕ ಮದುವೆ ಸಂಭ್ರಮ ಇಮ್ಮಡಿಗೊಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಆದರೆ, ಅತಿಥಿಗಳಿಗಾಗಿ ಮದುವೆಯ ಸ್ಥಳದಲ್ಲಿ ಲೈವ್ ಚೂಡಿ (ಬಳೆ) ಕೌಂಟರ್ ತೆರೆದಿರುವುದು ಗಮನಸೆಳೆಯುತ್ತದೆ.
ಜನವರಿ 3ರಂದು ಮುಂಬೈನಲ್ಲಿ ತಮ್ಮ ಅಧಿಕೃತ ವಿವಾಹ ಸಮಾರಂಭದ ನಂತರ, ದಂಪತಿಯು ತಮ್ಮ ಕುಟುಂಬಗಳೊಂದಿಗೆ ಉದಯಪುರದಲ್ಲಿ ಸಾಂಪ್ರದಾಯಿಕ ವಿವಾಹ ನೆರವೇರಿದ ಸ್ಥಳದ ಹತ್ತಿರವೇ ವಿವಿಧ ಚಟುವಟಿಕೆಗಳಲ್ಲಿ ಸಂಭ್ರಮದಿಂದ ತೊಡಗಿರುವುದು ಕಂಡು ಬಂದಿದೆ. ಇರಾ ಮತ್ತು ನೂಪುರ್ ಫುಟ್‌ಬಾಲ್ ಪಂದ್ಯ ಆಡುತ್ತಿರುವ ವಿಡಿಯೋ ಎಲ್ಲರ ಗಮನಸೆಳೆಯುತ್ತಿದೆ. ಫುಟ್‌ಬಾಲ್ ಪಂದ್ಯದಲ್ಲಿ ದಂಪತಿ ಮತ್ತು ಅವರ ನಿಕಟ ಸ್ನೇಹಿತರು ಉತ್ಸಾಹದಿಂದ ಭಾಗವಹಿಸಿರುವುದು ಕಾಣಬಹುದು.
ಮದುವೆಯ ಪೂರ್ವದ ಆಚರಣೆಗಳಿಗೆ ಮುನ್ನ ನಡೆದ ಪೈಜಾಮ ಪಾರ್ಟಿಯಲ್ಲಿ ಅಮೀರ್ ಖಾನ್, ಕಿರಣ್ ರಾವ್ ಮತ್ತು ಇತರರು ಪಾಲ್ಗೊಂಡಿದ್ದರು. ಅತಿಥಿಗಳು ಮತ್ತು ಪ್ರೀತಿಪಾತ್ರರು ಪೈಜಾಮಾಗಳನ್ನು ಧರಿಸಿ, ಖುಷಿ ಖುಷಿಯಾಗಿ ಹಾಡುಗಳನ್ನು ಹಾಡುತ್ತಾ, ನೃತ್ಯಗಳಲ್ಲಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ಅತಿಥಿಗಳೊಂದಿಗೆ ಆನಂದ, ಸಂತೋಷದ ಕ್ಷಣದಲ್ಲಿ ತೊಡಗಿಸಿಕೊಂಡಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ದಂಪತಿಯ ಆಪ್ತರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ, ಕುಶಲಕರ್ಮಿಗಳು ಅತಿಥಿಗಳಿಗಾಗಿ ರಾಜಸ್ಥಾನದ ಪ್ರಸಿದ್ಧ ಲ್ಯಾಕ್ ಬಳೆಗಳನ್ನು ತಯಾರಿಸುತ್ತಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಸಾಂಪ್ರದಾಯಿಕ ಮೆಹೆಂದಿ ಸಮಾರಂಭ ಕೂಡ ಎಲ್ಲರನ್ನೂ ಮೋಡಿ ಮಾಡಿದೆ. ಇರಾ ಚಮತ್ಕಾರಿ ಸನ್ಗ್ಲಾಸ್‌ನಿಂದ ಅಲಂಕರಿಸಲ್ಪಟ್ಟ ಸಾಂಪ್ರದಾಯಿಕ ಬಿಳಿ ಉಡುಪು ಧರಿಸಿದ್ದಳು. ಅವಳ ಎರಡೂ ಕೈಗಳ ಮೇಲೆ ಸುಂದರವಾದ ಮೆಹೆಂದಿ ಬಿಡಿಸಲಾಗಿತ್ತು. ಆಕೆಯ ಪತಿ ನೂಪುರ್, ಅವಳ ಪಕ್ಕದಲ್ಲಿ ನಿಂತು, ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡರು. ಸಂತೋಷದ ಕ್ಷಣಗಳನ್ನು ತಿಳಿಸುವ ಛಾಯಾಚಿತ್ರಗಳಿಗೆ ಪೋಸ್ ನೀಡಿದರು. ಇದರಿಂದ ಮತ್ತಷ್ಟು ಸಂತಸ ಇಮ್ಮಡಿಗೊಂಡಿತು. ಈ ಸಂಭ್ರಮಾಚರಣೆಯ ಭಾವನಾತ್ಮಕ ಕ್ಷಣಗಳಲ್ಲಿ, ಅಮೀರ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಔತಣಕೂಟದ ಸಮಯದಲ್ಲಿ ದಂಪತಿಗೆ ಹೃತ್ಪೂರ್ವಕ ಹಾಡು ಹಾಡಿದರು.
ತಾಜ್ ಅರಾವಳಿ ರೆಸಾರ್ಟ್ ಮತ್ತು ಸ್ಪಾದಲ್ಲಿ ನಿಗದಿಯಾಗಿರುವ ಮುಂಬರುವ ಸಂಗೀತ ಸಮಾರಂಭವು ಸಂಗೀತ, ನೃತ್ಯ ಸೇರಿದಂತೆ ಸಂಭ್ರಮದ ಆಚರಣೆಗಳ ಹೈಲೈಟ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿವಾಹ ಮಹೋತ್ಸವ ಜನವರಿ 10 ರಂದು ಪ್ರತಿಜ್ಞೆ ವಿನಿಮಯದೊಂದಿಗೆ ಮುಕ್ತಾಯಗೊಳ್ಳುತ್ತಿದ್ದಂತೆ, ಈ ಸಂತೋಷದಾಯಕ ನೆನಪುಗಳು ನಿಸ್ಸಂದೇಹವಾಗಿ ಇರಾ ಖಾನ್, ನೂಪುರ್ ಶಿಖರೆ ಮತ್ತು ಅವರ ಪ್ರೀತಿಪಾತ್ರರಿಗೆ ಎಂದಿಗೂ ಮರೆಯಲಾಗದ ಕ್ಷಣಗಳಾಗಿ ಉಳಿಯುತ್ತವೆ.
ಇದನ್ನೂ ಓದಿ: 'ಗುಂಟೂರು ಖಾರಂ' ಬಿಡುಗಡೆಗೂ ಮುನ್ನ ಅಭಿಮಾನಿಗಳ ಸಂಭ್ರಮಾಚರಣೆ