ETV Bharat / entertainment

'ಲೈಗರ್' ಸಿನಿಮಾದ ಥೀಮ್ ಸಾಂಗ್ ಅನಾವರಣ: ವಿಜಯ್ ದೇವರಕೊಂಡ ಮಾಸ್ ಡೈಲಾಗ್​ಗೆ ನೆಟಿಜನ್ಸ್​ ಫಿದಾ - Liger Theme Song Released

ಚಿತ್ರರಂಗದ ಸೆನ್ಸೇಷನಲ್​​ ಸ್ಟಾರ್ ವಿಜಯ್ ದೇವರಕೊಂಡ ನಟನೆಯ 'ಲೈಗರ್’ ಸಿನಿಮಾ ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ. ಸದ್ಯ ಟ್ರೈಲರ್​ನಿಂದ ಸಾಕಷ್ಟು ಸದ್ದು ಮಾಡುತ್ತಿರುವ 'ಲೈಗರ್’ ಚಿತ್ರದಿಂದ ಇದೀಗ 'ವಾಟ್ ಲಗಾ ದೇಂಗೆ' ಎಂಬ ಮಾಸ್ ಹಾಡೊಂದು ಹೊರ ಬಿದ್ದಿದೆ.

Liger Thim Song Released
ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೇ
author img

By

Published : Jul 29, 2022, 5:39 PM IST

ಇತ್ತೀಚೆಗೆ ಪರಭಾಷಾ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್​​ ಆಗಿ ಕನ್ನಡ ಪ್ರೇಕ್ಷಕರನ್ನ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಟಾಲಿವುಡ್ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಕೂಡ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆ ಆಗುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.

Liger Thim Song Release
ವಿಜಯ್ ದೇವರಕೊಂಡ

ಸದ್ಯ ಟ್ರೈಲರ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಈ ಸಿನಿಮಾ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಈಗ ಲೈಗರ್ ಅಂಗಳದಿಂದ ಮತ್ತೊಂದು ಜಬರ್ದಸ್ತ್​​ ಥೀಮ್ ಸಾಂಗ್​​ವೊಂದು ಹೊರಬಿದ್ದಿದೆ. ನಾಯಕರನ್ನು ವರ್ಣಿಸುವ 'ವಾಟ್ ಲಗಾ ದೇಂಗೆ' ಎಂಬ ಮಾಸ್ ಹಾಡು ಇದಾಗಿದೆ. ವಿಜಯ್ ದೇವರಕೊಂಡ ಅವರ ಮಾಸ್ ಡೈಲಾಗ್​​ನಿಂದಲೇ ಶುರುವಾಗುವ ಈ ಹಾಡು ಸದ್ಯ ಯೂಟ್ಯೂಬ್​ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

  • " class="align-text-top noRightClick twitterSection" data="">

ಈ ಮೊದಲು ರಿಲೀಸ್ ಆಗಿದ್ದ ಅಕ್ಡಿ ಪಕ್ಡಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ರಿಲೀಸ್ ಆಗಿರುವ ಮೋಟಿವೇಷನಲ್ ಹಾಡಿಗೂ ಅದ್ಭುತ ವಿಶ್ಯುವಲ್ ಹಾಗೂ ಮ್ಯೂಸಿಕಲ್ ಟ್ರೀಟ್ ನೀಡಿದೆ. ಪುರಿ ಜಗನ್ನಾಥ್ ನಿರ್ದೇಶನ 'ಲೈಗರ್' ಸಿನಿಮಾ ಮೂಲಕ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. 'ಲೈಗರ್​​'ಗೆ ಜೋಡಿಯಾಗಿ ಅನನ್ಯ ಪಾಂಡೇ ನಟಿಸಿದ್ದು, ಹಿರಿಯ ಬಹುಭಾಷಾ ತಾರೆ ರಮ್ಯಾಕೃಷ್ಣ ಅವರು ವಿಜಯ್ ಅವರ ತಾಯಿಯಾಗಿ ಅಬ್ಬರಿಸಿದ್ದಾರೆ.

Liger Thim Song Released
ಲೈಗರ್ ಚಿತ್ರ ತಂಡ

ಪುರಿ ಕನೆಕ್ಟ್ಸ್ ಹಾಗೂ ಧರ್ಮ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ಕರನ್ ಜೋಹರ್, ಪುರಿ ಜಗನ್ನಾಥ್, ಅಪೂರ್ವ ಮೆಹ್ತಾ ಲೈಗರ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು ಮುಂದಿನ ತಿಂಗಳು 25ಕ್ಕೆ ಬಿಗ್ ಸ್ಕ್ರೀನ್​ಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ: 100 ಕೋಟಿಯ ಬಂಗಲೆ, 15 ಕೋಟಿ ಬೆಲೆಬಾಳುವ ಐಷಾರಾಮಿ ಕಾರುಗಳು... ಇದು ದುಲ್ಕರ್ ಲಕ್ಸುರಿ ಲೈಫ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.